ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
ಡೌನ್‌ಲೋಡ್ ಮಾಡಿ
ಸೇವಾ ನಿಯಮಗಳು2023 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ನಿಮ್ಮ ಗ್ರಾಹಕರನ್ನು ಜಾಗತಿಕವಾಗಿ ತಲುಪಿ.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp Business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
WhatsApp Webಡೌನ್‌ಲೋಡ್

ಜಾಗತಿಕ ಸೋಂಕು ಕೊರೊನಾವೈರಸ್ (COVID-19) ಸಂದರ್ಭದಲ್ಲಿ ಸಂಪರ್ಕದಲ್ಲುಳಿಯಲು WhatsApp ನಿಮಗೆ ಹೇಗೆ ಸಹಾಯ ಮಾಡಬಹುದು

ಅತಿ ಮುಖ್ಯವಾದವರೊಂದಿಗೆ ಸಂಪರ್ಕ ಸಾಧಿಸಲು WhatsApp ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ನೋಡಿಕೊಳ್ಳಲು, ಇತ್ತೀಚಿನ ಅಧಿಕೃತ ಆರೋಗ್ಯ ಮಾಹಿತಿಯನ್ನು ಪಡೆಯಲು ಮತ್ತು ಜವಾಬ್ದಾರಿಯುತವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ನೀವು WhatsApp ಅನ್ನು ಹೇಗೆ ಬಳಸಬಹುದು ಎಂಬುದರ ಕೆಲವು ವಿಧಾನಗಳು ಇಲ್ಲಿವೆ. ನೀವು WhatsApp ಗೆ ಹೊಸಬರಾಗಿದ್ದರೆ ಅಥವಾ ಅದರ ಕುರಿತು ತಿಳಿಯಲು ಬಯಸಿದ್ದರೆ, ಪ್ರಾರಂಭಿಸುವುದು ಹೇಗೆ ಎಂಬುದರ ಕುರಿತ ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.

ದೂರದಿಂದಲೇ ಸಂಪರ್ಕ ಸಾಧಿಸಿ

ನೀವು ಬೇರೆ ಬೇರೆ ಸ್ಥಳದಲ್ಲಿದ್ದರೂ ಕೂಡ ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವರಿಗೆ ಬೆಂಬಲ ನೀಡಲು, ಗುಂಪುಗಳು, ವಾಯ್ಸ್‌, ಹಾಗೂ ವೀಡಿಯೊ ಕರೆಗಳು ರೀತಿಯ WhatsApp ಫೀಚರ್‌ಗಳನ್ನು ಬಳಸಿ.

ವಿಶ್ವಾಸಾರ್ಹ ಮಾಹಿತಿಯ ಮೂಲಗಳನ್ನು ಆಯ್ಕೆಮಾಡಿ

ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಿ. ಇತ್ತೀಚಿನ ಮಾಹಿತಿ ಮತ್ತು ಮಾರ್ಗಸೂಚಿಗಳಿಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಅಥವಾ ನಿಮ್ಮ ರಾಷ್ಟ್ರೀಯ ಆರೋಗ್ಯ ಸಚಿವಾಲಯದಂತಹ ವಿಶ್ವಾಸಾರ್ಹ ಮೂಲಗಳನ್ನೇ ನಂಬಿ.

ವದಂತಿಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡಿ

ನೀವು ಸ್ವೀಕರಿಸಿದ ಮೆಸೇಜ್‌ಗಳ ಬಗ್ಗೆ ಯೋಚಿಸಿ. ಏಕೆಂದರೆ ನೀವು ಕೊರೊನಾವೈರಸ್ ಕುರಿತಾಗಿ ಸ್ವೀಕರಿಸಿದ್ದೆಲ್ಲವೂ ನಿಖರವಾಗಿರುವುದಿಲ್ಲ. ವಾಸ್ತವಾಂಶಗಳನ್ನು ಬೇರೆ ವಿಶ್ವಾಸಾರ್ಹ ಮೂಲಗಳಾದ ಫ್ಯಾಕ್ಟ್ ಚೆಕರ್ಸ್ ಅಥವಾ ಅಂತಾರಾಷ್ಟ್ರೀಯ ಫ್ಯಾಕ್ಟ್ ಚೆಕಿಂಗ್ ನೆಟ್‌ವರ್ಕ್‌ನ (IFCN) ಫ್ಯಾಕ್ಟ್ ಚೆಕಿಂಗ್ ಚಾಟ್‌ಬಾಟ್‌ +1 (727) 2912606 ನಲ್ಲಿ ಪರಿಶೀಲಿಸಿಕೊಳ್ಳಿ. ಒಂದು ವಿಷಯ ಸತ್ಯ ಎಂಬುದು ನಿಮಗೆ ಖಚಿತವಿಲ್ಲದಿದ್ದರೆ, ಅದನ್ನು ಫಾರ್ವರ್ಡ್ ಮಾಡಬೇಡಿ.

ಸಮುದಾಯ ನಾಯಕರು

ಈ ಸವಾಲಿಗೆ ನೀವು ಪ್ರತಿಕ್ರಿಯಿಸುವಾಗ ಸಮುದಾಯದ ನಾಯಕರ ಬೆಂಬಲವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಕೊರೊನಾವೈರಸ್ ಬಗ್ಗೆ ಜನರು ಆತಂಕ ಹೊಂದಿರುವ ಈ ಸಂದರ್ಭದಲ್ಲಿ ನಿಮ್ಮ ಸಮುದಾಯಕ್ಕೆ ಮಾಹಿತಿ ನೀಡಲು ಮತ್ತು ನಿಮ್ಮ ಸಮುದಾಯದ ಜೊತೆಗೆ ಸಂಪರ್ಕದಲ್ಲಿರಲು ನೀವು WhatsApp ಅನ್ನು ಹೇಗೆ ಬಳಸಬಹುದು ಎಂದು ತಿಳಿದುಕೊಳ್ಳಿ.

ಆರೋಗ್ಯ ಸೇವೆ ವೃತ್ತಿಪರರು

ರೋಗಿಗಳನ್ನು ಮಾತನಾಡಿಸುವುದು, ಸಮುದಾಯಕ್ಕೆ ಮಾಹಿತಿ ನೀಡುವುದು, ರಿಮೋಟ್ ಆಗಿ ಕಾನ್ಫರೆನ್ಸ್‌ಗಳನ್ನು ನಡೆಸುವುದು, ಪದೇ ಪದೇ ಕೇಳುವ ಪ್ರಶ್ನೆಗಳಿಗೆ ತ್ವರಿತ ಉತ್ತರಗಳನ್ನು ಸೆಟಪ್‌ ಮಾಡುವುದು ಹಾಗೂ ಇನ್ನಷ್ಟನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಇನ್ನಷ್ಟು ತಿಳಿಯಿರಿ >

ಶಿಕ್ಷಣತಜ್ಞರು

WhatsApp ನಲ್ಲಿ ನಿಮ್ಮ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು, ಅಸೈನ್ಮೆಂಟ್‌ಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದು, ಟೆಕ್ಸ್ಟ್ ಮತ್ತು ವಾಯ್ಸ್ ಮೆಸೇಜ್‌ಗಳ ರೂಪದಲ್ಲಿ ಪಾಠಗಳನ್ನು ಹಂಚಿಕೊಳ್ಳುವುದು ಮತ್ತು ಇನ್ನೂ ಹೆಚ್ಚಿನವುಗಳನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಇನ್ನಷ್ಟು ತಿಳಿಯಿರಿ >

ಲಾಭರಹಿತ ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತ

ನಿಮ್ಮ ಸಂಸ್ಥೆಯನ್ನು ಪರಿಚಯಿಸಿ, ನಿಮ್ಮ ಸಮುದಾಯದ ಜೊತೆ ಸಂಪರ್ಕದಲ್ಲಿರಿ, ನಿಖರ ಮತ್ತು ಸಕಾಲಿಕ ಮಾಹಿತಿ ಹಂಚಿಕೊಳ್ಳಿ, ನಿಮ್ಮ ತಂಡದ ಜೊತೆ ಸಹಭಾಗಿತ್ವ ಸಾಧಿಸಿ, ಸಾಮಾನ್ಯ ಪ್ರಶ್ನೆಗಳಿಗೆ ತ್ವರಿತ ಉತ್ತರ ನೀಡಿ ಮತ್ತು ಇನ್ನೂ ಹೆಚ್ಚಿನವುಗಳು.

ಇನ್ನಷ್ಟು ತಿಳಿಯಿರಿ >

ಸ್ಥಳೀಯ ವ್ಯವಹಾರಗಳು

ನಿಮ್ಮ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲು, ಪ್ರಸ್ತುತ ವ್ಯವಹಾರ ಸಮಯವನ್ನು ಹಂಚಿಕೊಳ್ಳಲು, ಪಿಕಪ್ ಮತ್ತು ಡೆಲಿವರಿಗಳನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು, ನಿಯಮಿತವಾಗಿ ಪರಿಷ್ಕೃತ ಸರಕು ವಿವರಗಳನ್ನು ಒದಗಿಸಲು ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ಇನ್ನಷ್ಟು ವಿಧಾನಗಳನ್ನು ಕಂಡುಕೊಳ್ಳಿ.

ಇನ್ನಷ್ಟು ತಿಳಿಯಿರಿ >

ಕಥೆಗಳು

ಈ ಸವಾಲಿನ ಸಂದರ್ಭದಲ್ಲಿ ಜನರು ತಮ್ಮ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು WhatsApp ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ನೋಡಿ:

ಪಾಕಿಸ್ತಾನದಲ್ಲಿ, ಅತ್ಯಂತ ಹಿಂದುಳಿದ ಬಡವರಿಗೆ ಬೆಂಬಲವಾಗಿ ಒಂದು WhatsApp ಗುಂಪು 21 ಮಿಲಿಯನ್‌ ರೂ. ಸಂಗ್ರಹಿಸಿತು: ಲೇಖನವನ್ನು ಇಲ್ಲಿ ಓದಿ >

ಇಟಲಿಯ ಮೇಯರ್‌ಗಳ ಒಂದು ಸಮೂಹ WhatsApp ಬಳಸಿ ಪರಸ್ಪರ ಸಂಪರ್ಕ ಸಾಧಿಸಿದ್ದಾರೆ: ಲೇಖನವನ್ನು ಇಲ್ಲಿ ಓದಿ >

ಇಟಲಿಯ ನೇಪಲ್ಸ್‌ನಲ್ಲಿ ಪ್ರಾಥಮಿಕ ಶಾಲೆಗಳು ಮುಚ್ಚಿದ್ದರೂ WhatsApp ಬಳಸಿಕೊಂಡು ಕುಟುಂಬಗಳಿಗೆ ಅಸೈನ್‌ಮೆಂಟ್‌ಗಳನ್ನು ಕಳುಹಿಸಿ ತರಗತಿಗಳನ್ನು ಮುಂದುವರಿಸುತ್ತಿವೆ: ಲೇಖನವನ್ನು ಇಲ್ಲಿ ಓದಿ >

ಹಾಂಕಾಂಗ್‌ನಲ್ಲಿ ಒಬ್ಬ ವ್ಯಕ್ತಿಯು ಸ್ಥಳೀಯ ವ್ಯವಹಾರಗಳಿಗೆ ಸಮುದಾಯದ ಬೆಂಬಲವನ್ನು ಪಡೆಯಲು WhatsApp ನ ಸಹಾಯ ಪಡೆಯುತ್ತಿದ್ದಾರೆ: ಲೇಖನವನ್ನು ಇಲ್ಲಿ ಓದಿ >

ಕೊರೊನಾವೈರಸ್ ಹರಡುತ್ತಿರುವ ವೇಳೆ ಮಹಿಳೆಯರಿಗೆ ಉದ್ಯೋಗಗಳನ್ನು ಹುಡುಕಲು ಪ್ರೋತ್ಸಾಹಿಸುವುದಕ್ಕಾಗಿ ಜೋರ್ಡಾನ್‌ನಲ್ಲಿ ಉದ್ಯೋಗ ಸಬಲೀಕರಣ ಕಾರ್ಯಕ್ರಮವು WhatsApp ಅನ್ನು ಬಳಸುತ್ತಿದೆ: ಲೇಖನವನ್ನು ಇಲ್ಲಿ ಓದಿ

ಆಸ್ಪತ್ರೆಯ ಸಾಮರ್ಥ್ಯಗಳ ಕುರಿತು ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಲು ಪ್ಯಾರಿಸ್‌ನ ವೈದ್ಯಕೀಯ ವೃತ್ತಿಪರರು WhatsApp ಗ್ರೂಪ್ ರಚಿಸಿದ್ದಾರೆ: ಲೇಖನವನ್ನು ಇಲ್ಲಿ ಓದಿ >

ಭಾರತದ ಕೊಯಮತ್ತೂರಿನ ಅಧಿಕಾರಿಗಳು WhatsApp ಮೂಲಕ ಸಭೆಗಳನ್ನು ನಡೆಸುತ್ತಾರೆ: ಲೇಖನವನ್ನು ಇಲ್ಲಿ ಓದಿ

ಸಿರಿಯಾದ ನಿರಾಶ್ರಿತರ ಶಿಬಿರಗಳಲ್ಲಿನ ಶಿಕ್ಷಕರು ಪೋಷಕರೊಂದಿಗೆ WhatsApp ಮುಖಾಂತರ ವೀಡಿಯೊ ಪಾಠಗಳನ್ನು ಹಂಚಿಕೊಳ್ಳುತ್ತಿದ್ದಾರೆ: ಲೇಖನವನ್ನು ಇಲ್ಲಿ ಓದಿ >

ಭಾರತದಲ್ಲಿ ಜೀತದಿಂದ ಸಂತ್ರಸ್ತರಾದ ಕಾರ್ಮಿಕರು ಇತರ ಜೀತದಾಳುಗಳಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸಲು WhatsApp ಗ್ರೂಪ್‌ಗಳನ್ನು ಬಳಸುತ್ತಿದ್ದಾರೆ: ಲೇಖನವನ್ನು ಇಲ್ಲಿ ಓದಿ>

ಬ್ರೆಜಿಲ್‌ನ ಫ್ಲೋರಿಯಾನಾಪೊಲಿಸ್‌ನಲ್ಲಿರುವ ರೋಗಿಗಳು ತಮ್ಮ ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲು ಮತ್ತು ಪ್ರಶ್ನೆಗಳನ್ನು ಕೇಳಲು WhatsApp ಬಳಸಬಹುದು: ಲೇಖನವನ್ನು ಇಲ್ಲಿ ಓದಿ >

ಜಾಗತಿಕ ಪಾಲುದಾರರು

ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋಡೌನ್‌ಲೋಡ್
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸ್ಟೋರೀಸ್ವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಗಳುಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsapp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಕೊರೊನಾವೈರಸ್
ಡೌನ್‌ಲೋಡ್

2023 © WhatsApp LLC

ಸೇವಾ ನಿಯಮಗಳು