ಜಾಗತಿಕ ಸೋಂಕು ಕೊರೊನಾವೈರಸ್ (COVID-19) ಸಂದರ್ಭದಲ್ಲಿ ಸಂಪರ್ಕದಲ್ಲುಳಿಯಲು WhatsApp ನಿಮಗೆ ಹೇಗೆ ಸಹಾಯ ಮಾಡಬಹುದು
ಅತಿ ಮುಖ್ಯವಾದವರೊಂದಿಗೆ ಸಂಪರ್ಕ ಸಾಧಿಸಲು WhatsApp ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ನೋಡಿಕೊಳ್ಳಲು, ಇತ್ತೀಚಿನ ಅಧಿಕೃತ ಆರೋಗ್ಯ ಮಾಹಿತಿಯನ್ನು ಪಡೆಯಲು ಮತ್ತು ಜವಾಬ್ದಾರಿಯುತವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ನೀವು WhatsApp ಅನ್ನು ಹೇಗೆ ಬಳಸಬಹುದು ಎಂಬುದರ ಕೆಲವು ಸಲಹೆಗಳು ಇಲ್ಲಿವೆ. ನೀವು WhatsApp ಗೆ ಹೊಸಬರಾಗಿದ್ದರೆ ಅಥವಾ ಹೊಸದಾಗಿ ತಿಳಿದುಕೊಳ್ಳಬೇಕಿದ್ದರೆ, ಆರಂಭಿಸುವುದು ಹೇಗೆ ಎಂಬುದರ ಕುರಿತಾದ ಹಂತ-ಹಂತದ ಮಾರ್ಗದರ್ಶನ ಇಲ್ಲಿದೆ.
ಸಮುದಾಯ ನಾಯಕರು
ಈ ಸವಾಲಿಗೆ ನೀವು ಪ್ರತಿಕ್ರಿಯಿಸುವಾಗ ಸಮುದಾಯದ ನಾಯಕರ ಬೆಂಬಲವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಕೊರೊನಾವೈರಸ್ ಬಗ್ಗೆ ಜನರು ಆತಂಕ ಹೊಂದಿರುವ ಈ ಸಂದರ್ಭದಲ್ಲಿ ನಿಮ್ಮ ಸಮುದಾಯಕ್ಕೆ ಮಾಹಿತಿ ನೀಡಲು ಮತ್ತು ನಿಮ್ಮ ಸಮುದಾಯದ ಜೊತೆಗೆ ಸಂಪರ್ಕದಲ್ಲಿರಲು ನೀವು WhatsApp ಅನ್ನು ಹೇಗೆ ಬಳಸಬಹುದು ಎಂದು ತಿಳಿದುಕೊಳ್ಳಿ.
ಕಥೆಗಳು
ಈ ಸವಾಲಿನ ಸಂದರ್ಭದಲ್ಲಿ ಜನರು ತಮ್ಮ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು WhatsApp ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ನೋಡಿ:
ಪಾಕಿಸ್ತಾನದಲ್ಲಿ, ಅತ್ಯಂತ ಹಿಂದುಳಿದ ಬಡವರಿಗೆ ಬೆಂಬಲವಾಗಿ ಒಂದು WhatsApp ಗುಂಪು ರೂ. 21 ಮಿಲಿಯನ್ ಸಂಗ್ರಹಿಸಿದೆ:
ಲೇಖನವನ್ನು ಇಲ್ಲಿ ಓದಿ >ಇಟಲಿಯ ನೇಪಲ್ಸ್‌ನಲ್ಲಿ ಪ್ರಾಥಮಿಕ ಶಾಲೆಗಳು ಮುಚ್ಚಿದ್ದರೂ WhatsApp ಬಳಸಿಕೊಂಡು ಕುಟುಂಬಕ್ಕೆ ಶಾಲೆಯ ಚಟುವಟಿಕೆಗಳನ್ನು ತಲುಪಿಸುವ ಮೂಲಕ ತರಗತಿಗಳನ್ನು ಮುಂದುವರಿಸುತ್ತಿವೆ:
ಲೇಖನವನ್ನು ಇಲ್ಲಿ ಓದಿ >ಹಾಂಕಾಂಗ್‌ನಲ್ಲಿ ಒಬ್ಬ ವ್ಯಕ್ತಿಯು ಸ್ಥಳೀಯ ವ್ಯವಹಾರಗಳಿಗೆ ಸಮುದಾಯದ ಬೆಂಬಲವನ್ನು ಪಡೆಯಲು WhatsApp ಸಹಾಯ ಪಡೆಯುತ್ತಿದ್ದಾರೆ:
ಲೇಖನವನ್ನು ಇಲ್ಲಿ ಓದಿ >ಕೊರೊನಾವೈರಸ್ ಹರಡುತ್ತಿರುವ ವೇಳೆ ಮಹಿಳೆಯರಿಗೆ ಉದ್ಯೋಗಗಳನ್ನು ಹುಡುಕಲು ಪ್ರೋತ್ಸಾಹಿಸುವುದಕ್ಕಾಗಿ ಜೋರ್ಡಾನ್‌ನಲ್ಲಿ ಉದ್ಯೋಗ ಸಬಲೀಕರಣ ಕಾರ್ಯಕ್ರಮವು WhatsApp ಅನ್ನು ಬಳಸುತ್ತಿದೆ:
ಲೇಖನವನ್ನು ಇಲ್ಲಿ ಓದಿ >ಆಸ್ಪತ್ರೆಯ ಸಾಮರ್ಥ್ಯಗಳ ಕುರಿತು ಇತ್ತೀಚಿನ ಅಪ್ಡೇಟ್‌ಗಳನ್ನು ಪಡೆಯಲು ಪ್ಯಾರಿಸ್‌ನ ವೈದ್ಯಕೀಯ ವೃತ್ತಿಪರರು WhatsApp ಗ್ರೂಪ್ ರಚಿಸಿದ್ದಾರೆ:
ಲೇಖನವನ್ನು ಇಲ್ಲಿ ಓದಿ >ಸಿರಿಯಾದ ನಿರಾಶ್ರಿತರ ಶಿಬಿರಗಳಲ್ಲಿನ ಶಿಕ್ಷಕರು ಪೋಷಕರೊಂದಿಗೆ WhatsApp ಮುಖಾಂತರ ವೀಡಿಯೊ ಪಾಠಗಳನ್ನು ಹಂಚಿಕೊಳ್ಳುತ್ತಿದ್ದಾರೆ:
ಲೇಖನವನ್ನು ಇಲ್ಲಿ ಓದಿ >ಭಾರತದಲ್ಲಿ ಜೀತದಿಂದ ಸಂತ್ರಸ್ತ ಕಾರ್ಮಿಕರು ಇತರ ಜೀತದಾಳುಗಳಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸಲು WhatsApp ಗ್ರೂಪ್‌ಗಳನ್ನು ಬಳಸುತ್ತಿದ್ದಾರೆ:
ಲೇಖನವನ್ನು ಇಲ್ಲಿ ಓದಿ>ಬ್ರೆಜಿಲ್‌ನ ಫ್ಲೋರಿಯಾನಾಪೊಲಿಸ್‌ನಲ್ಲಿರುವ ರೋಗಿಗಳು ತಮ್ಮ ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲು ಮತ್ತು ಪ್ರಶ್ನೆಗಳನ್ನು ಕೇಳಲು WhatsApp ಬಳಸುತ್ತಿದ್ದಾರೆ:
ಲೇಖನವನ್ನು ಇಲ್ಲಿ ಓದಿ >