*ಈ ಗುಂಪುಗಳಿಗೆ ನೀವು ಸೇರಿಕೊಳ್ಳುವ ಮೂಲಕ ಈ ಕೆಳಕಂಡ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.*
1. ನಿಮ್ಮ ಯಾವುದಾದರೂ ಸಂದೇಶಗಳನ್ನು ಈ ಗುಂಪಿನಲ್ಲಿ ಶೇರ್ ಮಾಡಬೇಕಾಗಿದ್ದಲ್ಲಿ 8088433026 / 8073067542 ನಂಬರ್ ಗೆ ಕಳುಹಿಸಿಕೊಡಬಹುದಾಗಿದೆ. ಗುಂಪಿನ ಅಡ್ಮಿನ್ ನಿಮ್ಮ ಸಂದೇಶವನ್ನು Review ಮಾಡಿ ಉಪಯುಕ್ತವಾದುದೆಂದು ತಿಳಿದುಬಂದಲ್ಲಿ ನಿಮ್ಮ ಸಂದೇಶವನ್ನು ಈ ಗುಂಪಿನಲ್ಲಿ ಶೇರ್ ಮಾಡಲಾಗುವುದು.
2. ನಿರಾತಂಕ ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 50,000 ಕ್ಕೂ ಹೆಚ್ಚು ಸದಸ್ಯರೊಂದಿಗೆ ಒಡನಾಟ ಹೊಂದಿದ್ದು, ಹಲವಾರು ಸಮಾಜಮುಖಿ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ನಡೆಸುತ್ತಿದೆ. ಇದರಲ್ಲಿ ಅನೇಕ ಮಾನವ ಸಂಪನ್ಮೂಲ ಮತ್ತು ಸಮಾಜಕಾರ್ಯ ಹಿರಿಯ ವೃತ್ತಿಪರರು, ವಕೀಲರು, ವೈದ್ಯರು, ಬರಹಗಾರರು, ವಿದ್ಯಾರ್ಥಿಗಳು, ಸಮಾಜಸೇವಕರು, ಚಿಂತಕರು ಹಾಗೂ ಇನ್ನಿತರ ಸ್ವಯಂಸೇವಕರು ಜೊತೆಗೂಡಿದ್ದಾರೆ.
3. ಈ ಗುಂಪು ನಿಮ್ಮ ಮತ್ತು ನಿಮ್ಮ ನೆರೆಹೊರೆಯವರ ನಡುವೆ ಸಾಮಾಜಿಕ ಸಂಪರ್ಕವನ್ನು ಬೆಸೆಯುತ್ತದೆ, ಸ್ಥಳೀಯ ನಿವಾಸಿಗಳು ಪರಸ್ಪರ ತಿಳಿದುಕೊಳ್ಳಲು ಮತ್ತು ಐಕ್ಯತೆಯ ಭಾವವನ್ನು ಸೃಷ್ಟಿಸಲು ಸಹಾಯಮಾಡುತ್ತದೆ.
4. ಈ ಗುಂಪಿನ ಮೂಲಕ ಸ್ಥಳೀಯ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇನ್ನಿತರೆ ವಲಯದ ಸಂಕ್ಷಿಪ್ತ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ನೀವು ತಿಳಿದುಕೊಳ್ಳಬಹುದು
5. ನಿಮ್ಮ ಸ್ಥಳೀಯ ಸಾಮಾಜಿಕ ಸಮಸ್ಯೆ ಮತ್ತು ಕುಂದುಕೊರೆತೆಗಳ ಬಗ್ಗೆ ಈ ಗುಂಪಿನಲ್ಲಿ ತಿಳಿಸಬಹುದು, ಅದನ್ನು ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ಸೂಕ್ತವಾದ ಪರಿಹಾರವನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ.
6. ಯಾವುದೇ ರೀತಿಯ ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಬಹುದು. ಇದು ಉಲ್ಲಾಳು ವಾರ್ಡಿನ ಹಲವಾರು ಜನರಿಗೆ ಏಕಕಾಲದಲ್ಲಿ ತಲುಪುತ್ತದೆ. ಇದರಿಂದ ನಿಮ್ಮ ಉದ್ಯೋಗ ಹಾಗೂ ವ್ಯಾಪಾರದ ಬೆಳವಣಿಗೆಯಾಗಲು ಸಹಾಯವಾಗುತ್ತದೆ.
7. ಉದ್ಯೋಗ ಹುಡುಕುತ್ತಿರುವವರು ಹಾಗೂ ಉದ್ಯೋಗಿಗಳನ್ನು ಹುಡುಕುತ್ತಿರುವವರು ಉದ್ಯೋಗದ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುವ ಮೂಲಕ ಪ್ರಯೋಜನವನ್ನು ಪಡೆಯಬಹುದು. ಇದರಿಂದ ನಿರುದ್ಯೋಗಿಗಳಿಗೆ ಅನುಕೂಲವಾಗುತ್ತದೆ.
8. ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಗಳನ್ನು ನಾವು ಈ ಗುಂಪಿನಲ್ಲಿ ತಿಳಿಸುತ್ತೇವೆ, ಅರ್ಹ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
9.ನಮ್ಮ ಸಂಸ್ಥೆಯಿಂದ ಕೈಗೊಳ್ಳುವ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮಾಹಿತಿಯನ್ನು ಇಲ್ಲಿ ತಿಳಿಸುತ್ತೇವೆ. ತಾವುಗಳು ನಮ್ಮೊಂದಿಗೆ ಕೈಜೋಡಿಸಬಹುದು ಹಾಗೂ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.