ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
  • azərbaycan
  • Afrikaans
  • Bahasa Indonesia
  • Melayu
  • català
  • čeština
  • dansk
  • Deutsch
  • eesti
  • English
  • español
  • français
  • Gaeilge
  • hrvatski
  • italiano
  • Kiswahili
  • latviešu
  • lietuvių
  • magyar
  • Nederlands
  • norsk bokmål
  • o‘zbek
  • Filipino
  • polski
  • Português (Brasil)
  • Português (Portugal)
  • română
  • shqip
  • slovenčina
  • slovenščina
  • suomi
  • svenska
  • Tiếng Việt
  • Türkçe
  • Ελληνικά
  • български
  • қазақ тілі
  • македонски
  • русский
  • српски
  • українська
  • עברית
  • العربية
  • فارسی
  • اردو
  • বাংলা
  • हिन्दी
  • ગુજરાતી
  • ಕನ್ನಡ
  • मराठी
  • ਪੰਜਾਬੀ
  • தமிழ்
  • తెలుగు
  • മലയാളം
  • ไทย
  • 简体中文
  • 繁體中文
  • 日本語
  • 한국어
  • WhatsApp Web
  • ಫೀಚರ್‌ಗಳು
  • ಡೌನ್ಲೋಡ್
  • ಭದ್ರತೆ
  • ಆಗಾಗ ಕೇಳಲಾಗುವ ಪ್ರಶ್ನೆಗಳು
  • ಡೌನ್ಲೋಡ್
  • ಫೀಚರ್‌ಗಳು
  • ಭದ್ರತೆ
  • ಆಗಾಗ ಕೇಳಲಾಗುವ ಪ್ರಶ್ನೆಗಳು
  • ಸಂಪರ್ಕಿಸಿ

WhatsApp ಭದ್ರತೆ

ಗೌಪ್ಯತೆ ಮತ್ತು ಭದ್ರತೆ ನಮ್ಮ ನರನಾಡಿಗಳಲ್ಲಿದೆ

ಸ್ನೇಹಿತರೊಂದಿಗೆ ನೀವು ಸಂಪರ್ಕದಲ್ಲಿರಲು, ನೈಸರ್ಗಿ ವಿಪತ್ತುಗಳ ಸಂದರ್ಭದಲ್ಲಿ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲು, ಪ್ರತ್ಯೇಕಗೊಂಡ ಕುಟುಂಬವನ್ನು ಪುನಃ ಸಂಪರ್ಕಿಸಲು ಅಥವಾ ಉತ್ತಮ ಜೀವನವನ್ನು ರೂಪಿಸಿಸಿಕೊಳ್ಳುವುದಕ್ಕಾಗಿ ಸಹಾಯ ಮಾಡುವ ಉದ್ದೇಶದಿಂದಲೇ WhatsApp ಅನ್ನು ನಾವು ಮೊದಲಿನಿಂದಲೂ ರೂಪಿಸಿದ್ದೇವೆ. ನಿಮ್ಮ ಕೆಲವು ಅತ್ಯಂತ ವೈಯಕ್ತಿಕ ಕ್ಷಣಗಳನ್ನು WhatsApp ಮೂಲಕ ನೀವು ಹಂಚಿಕೊಳ್ಳುತ್ತೀರಿ. ಇದೇ ಕಾರಣಕ್ಕೆ ನಾವು ನಮ್ಮ ಆ್ಯಪ್‌ನಲ್ಲಿ ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್‌ ಅನ್ನು ರೂಪಿಸಿದ್ದೇವೆ. ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್‌ ಮಾಡಿದಾಗ, ನಿಮ್ಮ ಮೆಸೇಜ್‌ಗಳು, ಫೋಟೋಗಳು, ವೀಡಿಯೋಗಳು, ವಾಯ್ಸ್‌ ಮೆಸೇಜ್‌‌ಗಳು, ಡಾಕ್ಯುಮೆಂಟ್‌ಗಳು ಮತ್ತು ಕಾಲ್‌ಗಳು ಬೇಡದವರ ಕೈಗೆ ಸಿಗದಂತೆ ರಕ್ಷಣೆ ಪಡೆಯುತ್ತವೆ.

ವೈಯಕ್ತಿಕ ಮೆಸೇಜಿಂಗ್

ನೀವು WhatsApp Messenger ಬಳಸಿ ಇತರ ವ್ಯಕ್ತಿಗೆ ಮೆಸೇಜ್ ಮಾಡುವಾಗ WhatsApp ನ 'ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್‌' ಅನ್ನು ಬಳಸಲಾಗುತ್ತದೆ. ನೀವು ಮತ್ತು ನಿಮ್ಮೊಂದಿಗೆ ಸಂವಹನ ನಡೆಸುತ್ತಿರುವ ವ್ಯಕ್ತಿ ಮಾತ್ರವೇ ಕಳುಹಿಸಿರುವುದನ್ನು ಓದಬಹುದು ಅಥವಾ ಕೇಳಬಹುದು ಹಾಗೂ ಮಧ್ಯದಲ್ಲಿ WhatsApp ಕೂಡ ಸೇರಿದಂತೆ ಬೇರೆ ಯಾರೂ ಓದಲು, ಕೇಳಲು ಸಾಧ್ಯವಿಲ್ಲ ಎಂಬುದನ್ನು ಕೊನೆಯಿಂದ-ಕೊನೆಯವರೆಗೆ ಎನ್ಕ್ರಿಪ್ಷನ್ ಖಾತ್ರಿಪಡಿಸುತ್ತದೆ. ಯಾಕೆಂದರೆ, ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್‌ನಲ್ಲಿ ನಿಮ್ಮ ಮೆಸೇಜ್‌ಗಳನ್ನು ಲಾಕ್‌ ಮೂಲಕ ಸುರಕ್ಷಿತಗೊಳಿಸಲಾಗುತ್ತದೆ ಹಾಗೂ ಮೆಸೇಜ್ ಅನ್ನು ಸ್ವೀಕರಿಸುವವರು ಮತ್ತು ನೀವು ಮಾತ್ರ ಇದನ್ನು ಅನ್‌ಲಾಕ್ ಮಾಡಿ ಓದಲು ಬೇಕಾಗಿರುವ ಕೀ ಹೊಂದಿರುತ್ತೀರಿ. ಇವೆಲ್ಲವೂ ಸ್ವಯಂಚಾಲಿತವಾಗಿ ನಡೆಯುತ್ತದೆ: ಇದಕ್ಕೆ ಸೆಟ್ಟಿಂಗ್ಸ್‌ನಲ್ಲಿ ಏನನ್ನೂ ಆನ್ ಮಾಡಬೇಕಿಲ್ಲ ಅಥವಾ ನಿಮ್ಮ ಮೆಸೇಜ್‌ಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ವಿಶೇಷ ಗೌಪ್ಯ ಚಾಟ್‌ಗಳನ್ನು ಸೆಟಪ್‌ ಮಾಡುವ ಅಗತ್ಯವೂ ಇಲ್ಲ.

ಬ್ಯುಸಿನೆಸ್ ಮೆಸೇಜಿಂಗ್

ಪ್ರತಿ WhatsApp ಮೆಸೇಜ್‌ ಅನ್ನೂ ಕೂಡ ನಿಮ್ಮ ಸಿಗ್ನಲ್ ಎನ್‌ಕ್ರಿಪ್ಷನ್ ಪ್ರೋಟೋಕಾಲ್‌ನಿಂದ ರಕ್ಷಿಸಲಾಗಿದೆ. ಅದು ಮೆಸೇಜ್‌ಗಳು ನಿಮ್ಮ ಸಾಧನದಿಂದ ಹೊರಡುವ ಮೊದಲೇ ಸುರಕ್ಷಿತಗೊಳಿಸುತ್ತದೆ. ನೀವು WhatsApp Business ಖಾತೆಗೆ ಮೆಸೇಜ್ ಮಾಡಿದಾಗ, ನಿಮ್ಮ ಮೆಸೇಜ್‌ ಅನ್ನು ಬ್ಯುಸಿನೆಸ್ ಆಯ್ಕೆ ಮಾಡಿದ ಕಡೆಗೆ ಸುರಕ್ಷಿತವಾಗಿ ತಲುಪಿಸಲಾಗುತ್ತದೆ.

WhatsApp Business ಆ್ಯಪ್ ಬಳಸುವ ಅಥವಾ ಗ್ರಾಹಕರ ಮೆಸೇಜ್‌ಗಳನ್ನು ಸ್ವತಃ ನಿರ್ವಹಿಸುವ ಮತ್ತು ಸಂಗ್ರಹಿಸುವ ಬ್ಯುಸಿನೆಸ್‌ಗಳೊಂದಿಗಿನ ಚಾಟ್‌ಗಳು ಕೊನೆಯಿಂದ-ಕೊನೆಯವರೆಗೆ ಎನ್‍ಕ್ರಿಪ್ಟ್ ಆಗಿರುತ್ತವೆ ಎಂಬುದಾಗಿ WhatsApp ಪರಿಗಣಿಸುತ್ತದೆ. ಒಮ್ಮೆ ಮೆಸೇಜ್ ಸ್ವೀಕರಿಸಿದ ನಂತರ, ಅದು ಬ್ಯುಸಿನೆಸ್‌ನ ಸ್ವಂತ ಗೌಪ್ಯತಾ ಅಭ್ಯಾಸಗಳಿಗೆ ಒಳಪಟ್ಟಿರುತ್ತದೆ. ಮೆಸೇಜ್‌ಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಪ್ರತಿಕ್ರಿಯಿಸಲು ಹಲವು ಉದ್ಯೋಗಿಗಳನ್ನು ಅಥವಾ ಇತರ ಮಾರಾಟಗಾರರನ್ನು ಬ್ಯುಸಿನೆಸ್ ನೇಮಕ ಮಾಡಬಹುದು.

ಕೆಲವು ಬ್ಯುಸಿನೆಸ್‌ಗಳಿಗೆ1 ಮೆಸೇಜ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಗ್ರಾಹಕರಿಗೆ ಪ್ರತಿಕ್ರಿಯಿಸಲು WhatsApp ನ ಮೂಲ ಕಂಪನಿಯಾದ Facebook ಅನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಆ ಬ್ಯುಸಿನೆಸ್‌ನ ಗೌಪ್ಯತಾ ಅಭ್ಯಾಸಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ಅವನ್ನು ಯಾವಾಗ ಬೇಕಾದರೂ ಸಂಪರ್ಕಿಸಬಹುದು.

ಪೇಮೆಂಟ್ಸ್‌

ಆಯ್ದ ದೇಶಗಳಲ್ಲಿ ಲಭ್ಯವಿರುವ WhatsApp ನಲ್ಲಿನ ಪೇಮೆಂಟ್ಸ್ ಸೌಲಭ್ಯದ‌ ಮೂಲಕ ಹಣಕಾಸು ಸಂಸ್ಥೆಗಳಲ್ಲಿರುವ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಹುದು. ಕಾರ್ಡ್ ಮತ್ತು ಬ್ಯಾಂಕ್ ನಂಬರ್‌ಗಳನ್ನು ಎನ್‌ಕ್ರಿಪ್ಟ್‌ ಮಾಡಿ, ಅತ್ಯಂತ ಸುರಕ್ಷಿತ ನೆಟ್‌ವರ್ಕ್‌ನಲ್ಲಿ ಸಂಗ್ರಹಿಸಲಾಗುತ್ತದೆ ಆದಾಗ್ಯೂ, ಈ ಪೇಮೆಂಟ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸದೇ ವಹಿವಾಟುಗಳನ್ನು ಹಣಕಾಸು ಸಂಸ್ಥೆಗಳು ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲದ್ದರಿಂದ, ಈ ಪೇಮೆಂಟ್‌ಗಳನ್ನು ಕೊನೆಯಿಂದ- ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಲಾಗುವುದಿಲ್ಲ.

ನಿಯಂತ್ರಣ ನಿಮ್ಮ ಕೈಯಲ್ಲೇ ಇದೆ

ನಿಮ್ಮ ಮೆಸೇಜ್‌ಗಳಲ್ಲಿ ನಡೆಯುತ್ತಿರುವ ಸಂಗತಿ ನಿಮಗೆ ತಿಳಿದಿದೆ ಎಂದು WhatsApp ಖಚಿತಪಡಿಸಿಕೊಳ್ಳಲು ಇಚ್ಚಿಸುತ್ತದೆ. ನೀವು ಒಬ್ಬ ವ್ಯಕ್ತಿ ಅಥವಾ ಬ್ಯುಸಿನೆಸ್‌ನಿಂದ ಮೆಸೇಜ್‌ಗಳನ್ನು ಸ್ವೀಕರಿಸಲು ಬಯಸದಿದ್ದರೆ, ನೀವು ಅವರನ್ನು ನೇರವಾಗಿಯೇ ಚಾಟ್‌ನಿಂದ ಬ್ಲಾಕ್ ಮಾಡಬಹುದು ಅಥವಾ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಿಂದ ತೆಗೆದುಹಾಕಬಹುದು. ನಿಮ್ಮ ಮೆಸೇಜ್‌ಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಹಾಗೂ ನಿಮಗೆ ಸರಿಯೆನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಬೇಕಿರುವ ಆಯ್ಕೆಗಳಿವೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ.

ಮುಕ್ತವಾಗಿ ಮಾತನಾಡಿ
ನೀವು ಇನ್ನೊಂದು ದೇಶದಲ್ಲಿದ್ದರೂ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ WhatsApp ಕಾಲಿಂಗ್‌ ಮೂಲಕ ಮಾತನಾಡಬಹುದು.
ಮೆಸೇಜ್‌ಗಳು ನಿಮ್ಮಲ್ಲೇ ಇರುತ್ತವೆ
ಕೊನೆಯಿಂದ-ಕೊನೆಯವರೆಗೆ ಎನ್‍ಕ್ರಿಪ್ಟ್ ಆದ ಮೆಸೇಜ್‌ಗಳನ್ನು ಡೆಲಿವರಿ ಮಾಡಿದ ನಂತರ ಅವುಗಳನ್ನು ನಿಮ್ಮ ಸಾಧನದಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆಯೇ ಹೊರತು WhatsApp ಸರ್ವರ್‌ಗಳಲ್ಲಿ ಅಲ್ಲ.
ನೀವೇ ನೋಡಿಕೊಳ್ಳಿ
ನೀವು ಮಾಡುವ ಕಾಲ್‌ಗಳು ಮತ್ತು ನೀವು ಕಳುಹಿಸುವ ಮೆಸೇಜ್‌ಗಳು ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿವೆ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಲು WhatsApp ನಿಮಗೆ ಅವಕಾಶ ನೀಡುತ್ತದೆ. ಕೇವಲ ಚಾಟ್ ಅಥವಾ ಕಾಂಟ್ಯಾಕ್ಟ್‌ ಮಾಹಿತಿ ಅಥವಾ ಬ್ಯುಸಿನೆಸ್ ಮಾಹಿತಿಯಲ್ಲಿರುವ ಇಂಡಿಕೇಟರ್ ಅನ್ನು ನೋಡಿ ಸಾಕು.
ವಿವರಗಳನ್ನು ಪಡೆಯಿರಿ

ಓಪನ್ ವಿಸ್ಪರ್ ಸಿಸ್ಟಮ್ಸ್‌ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ WhatsApp ನ ಕೊನೆಯಿಂದ-ಕೊನೆಯವರೆಗಿನ ಎನ್‌ಕ್ರಿಪ್ಷನ್‌ ಕುರಿತು ಆಳವಾದ ತಾಂತ್ರಿಕ ವಿವರಣೆಯನ್ನು ಓದಿ.

ಆಗಾಗ್ಗೆ ಭದ್ರತೆ ಅಪ್‌ಡೇಟ್‌ಗಳಿಗಾಗಿ ಭದ್ರತಾ ಸಲಹೆಗಳನ್ನು ನೋಡಿ.

1 2021ರಲ್ಲಿ.

WhatsApp

  • ಫೀಚರ್‌ಗಳು
  • ಭದ್ರತೆ
  • ಡೌನ್ಲೋಡ್
  • WhatsApp Web
  • ವ್ಯವಹಾರ
  • ಗೌಪ್ಯತೆ

ಸಂಸ್ಥೆ

  • ವಿವರ
  • ಉದ್ಯೋಗಗಳು
  • ಲಾಂಛನ ಕೇಂದ್ರ
  • ಸಂಪರ್ಕಿಸಿ
  • ಬ್ಲಾಗ್
  • WhatsApp ಕಥೆಗಳು

ಡೌನ್ಲೋಡ್

  • Mac/PC
  • Android
  • iPhone

ಸಹಾಯ

  • ಆಗಾಗ ಕೇಳಲಾಗುವ ಪ್ರಶ್ನೆಗಳು
  • ಟ್ವಿಟ್ಟರ್
  • Facebook
  • ಕೊರೊನಾವೈರಸ್
2021 © WhatsApp Inc.
ಗೌಪ್ಯತೆ ಮತ್ತು ನಿಬಂಧನೆಗಳು