ಮೊದಲ ದಿನದಿಂದಲೇ, ನಾವು WhatsApp ನಿರ್ಮಿಸಿದ್ದು ನಿಮ್ಮನ್ನು ಸ್ನೇಹಿತರೊಂದಿಗೆ ಸಂಪರ್ಕದಲ್ಲಿಡಲು, ನೈಸರ್ಗಿಕ ವಿಪತ್ತುಗಳು ಅವಧಿಯಲ್ಲಿ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲು, ಪ್ರತ್ಯೇಕಿಸಲ್ಪಟ್ಟ ಕುಟುಂಬಗಳೊಡಣೆ ಮರು ಸಂಪರ್ಕಿಸಲು, ಅಥವಾ ಉತ್ತಮ ಜೀವನವನ್ನು ಪಡೆಯಲು. ನಿಮ್ಮ ಹಲವು ವೈಯಕ್ತಿಕ ಕ್ಷಣಗಳು WhatsAppನಲ್ಲಿ ಹಂಚಿಕೊಳ್ಳಲಾಗುತ್ತವೆ, ಆದ್ದರಿಂದ ನಮ್ಮ ತಂತ್ರಾಂಶದ ಇತ್ತೀಚಿನ ಆವೃತ್ತಿಯು ಕೊನೆಯಿಂದ ಕೊನೆವರೆಗಿನ ಗೂಢಲಿಪೀಕರಣ (ಎನ್ಕ್ರಿಪ್ಷನ್) ಹೊಂದಿರುತ್ತದೆ. ಕೊನೆಯಿಂದ ಕೊನೆವರೆಗೆ ಗೂಢಲಿಪೀಕರಣಗೊಂಡಾಗ ನಿಮ್ಮ ಸಂದೇಶಗಳು, ಚಿತ್ರಗಳು, ದೃಶ್ಯಗಳು, ಧ್ವನಿ ಸಂದೇಶಗಳು, ದಾಖಲೆಗಳು, ಮತ್ತು ಕರೆಗಳು ತಪ್ಪು ಕೈಗಳಿಗೆ ಬೀಳುವುದರಿಂದ ಸುರಕ್ಷಿತವಾಗಿರುತ್ತವೆ.
WhatsApp ನ ಕೊನೆಯಿಂದ ಕೊನೆವರೆಗಿನ ಗೂಢಲಿಪೀಕರಣ ವೈಶಿಷ್ಟ್ಯವು ನೀವು ಮತ್ತು ನಿಮ್ಮೊಂದಿಗೆ ಸಂಭಾಷಿಸುವವರು ನಮ್ಮ ತಂತ್ರಾಂಶದ ಇತ್ತೀಚಿನ ಆವೃತ್ತಿಯನ್ನು ಬಳಸಿದಾಗ ಲಭ್ಯವಿದೆ. ಅನೇಕ ಸಂದೇಶ ತಂತ್ರಾಂಶಗಳು ಕೇವಲ ನಿಮ್ಮಿಂದ ಅವುಗಳ ಮಧ್ಯದ ಸಂಭಾಷಣೆಯನ್ನು ಗೂಢಲಿಪೀಕರಿಸುತ್ತವೆ, ಆದರೆ WhatsApp ನ ಕೊನೆಯಿಂದ ಕೊನೆವರೆಗಿನ ಗೂಢಲಿಪೀಕರಣವು ನೀವು ಮತ್ತು ನಿಮ್ಮೊಂದಿಗೆ ಸಂಭಾಷಿಸುವವರು ಮಾತ್ರ ಸಂದೇಶವನ್ನು ಓದಬಹುದೆoದು ಖಾತ್ರಿಗೊಳಿಸುತ್ತದೆ, ಮಧ್ಯದಲ್ಲಿ ಯಾರಿಗೂ ನೋಡಲು ಸಾಧ್ಯವಿಲ್ಲ, WhatsApp ಗೂ ಕೂಡ ಕಾಣಿಸಿಕೊಳ್ಳುವುದಿಲ್ಲ. ಇದು ಹೇಗೆoದರೆ ನಿಮ್ಮ ಸಂದೇಶಗಳನ್ನು ಡಿಜಿಟಲ್ ಬೀಗದೊಂದಿಗೆ ಭದ್ರವಾಗಿಲ್ಪಡುತ್ತದೆ, ಕೇವಲ ಸ್ವೀಕರಿಸುವವರು ಮತ್ತು ನೀವು ಅವುಗಳನ್ನು ಲಾಕ್ ತೆಗೆದು ಓದಲು ಸಾಧ್ಯ. ಹೆಚ್ಚಿನ ರಕ್ಷಣೆಗಾಗಿ, ನೀವು ಕಳುಹಿಸಿದ ಪ್ರತಿ ಸಂದೇಶವು ತನ್ನದೇ ಆದ ಅನನ್ಯ ಲಾಕ್ ಅನ್ನು ಹೊಂದಿರುತ್ತದೆ. ಇವೆಲ್ಲವೂ ಸ್ವಯಂಚಾಲಿತವಾಗಿ ಸಂಭವಿಸುತ್ತದೆ: ಸಂಯೋಜನೆಗಳನ್ನು ಆರಂಭಿಸುವ ಅಥವಾ ನಿಮ್ಮ ಸಂದೇಶಗಳನ್ನು ಭದ್ರಪಡಿಸಲು ವಿಶೇಷ ರಹಸ್ಯ ಸಂಭಾಷಣೆಗಳನ್ನು ಸೃಷ್ಟಿಸುವ ಅಗತ್ಯವಿಲ್ಲ.
WhatsApp ಕರೆ ವೈಶಿಷ್ಟ್ಯವು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡಲು, ಅವರು ಯಾವುದೇ ದೇಶದಲ್ಲಿದ್ದರೂ ಕೂಡ ಸಹಾಯ ಮಾಡುತ್ತದೆ. ಅದೇ ರೀತಿ ನಿಮ್ಮ ಸಂದೇಶಗಳoತೆ WhatsApp ಕರೆಗಳು ಸಹ ಕೊನೆಯಿಂದ ಕೊನೆವರೆಗಿನ ಗೂಢಲಿಪೀಕರಣದೊ೦ದಿಗೆ ಸುರಕ್ಷಿತವಾಗಿವೆ, ಅದರಿಂದ WhatsApp ಮತ್ತು ಮೂರನೇ ಪಕ್ಷಗಳು ಅವುಗಳನ್ನು ಕೇಳಲು ಸಾಧ್ಯವಿಲ್ಲ.
ನಿಮ್ಮ ಸಂದೇಶಗಳು ನಿಮ್ಮ ಕೈಯಲ್ಲಿರಬೇಕು. ಆದ್ದರಿಂದ WhatsApp ಸಂದೇಶಗಳನ್ನು ಕಳುಹಿಸಿದ ನಂತರ ತನ್ನ ಸರ್ವರಗಳಲ್ಲಿ ಅವುಗಳನ್ನು ಸಂಗ್ರಹಿಸುವುದಿಲ್ಲ, ಮತ್ತು ಕೊನೆಯಿಂದ ಕೊನೆವರೆಗಿನ ಗೂಢಲಿಪೀಕರಣದಿಂದ WhatsApp ಮತ್ತು ಮೂರನೇ ಪಕ್ಷಗಳು ಅವುಗಳನ್ನು ಪಡೆಯಲು ಯಾವುದೇ ರೀತಿಯಿಂದಲೂ ಸಾಧ್ಯವಿಲ್ಲ.
WhatsApp ನೀವು ಮಾಡುವ ಕರೆಗಳು ಮತ್ತು ನೀವು ಕಳುಹಿಸುವ ಸಂದೇಶಗಳು ಕೊನೆಯಿಂದ ಕೊನೆವರೆಗೆ ಗೂಢಲಿಪೀಕರಿಸಿದೆಯೇ ಎಂಬುದನ್ನು ಪರೀಕ್ಷಿಸಲು ಅನುಮತಿಸುತ್ತದೆ. ಕೇವಲ ಸಂಪರ್ಕ ಮಾಹಿತಿ ಅಥವಾ ಗುಂಪು ಮಾಹಿತಿಯಲ್ಲಿ ಸೂಚಕವನ್ನು ನೋಡಿ.
WhatsApp ಮತ್ತು ಓಪನ್ ವ್ಹಿಸ್ಪರ್ ಸಿಸ್ಟಮ್ಸ್ ಸಹಯೋಗದೊಂದಿಗೆ ಅಭಿವೃದ್ಧಿಸಿದ ಕೊನೆಯಿಂದ ಕೊನೆವರೆಗಿನ ಗೂಢಲಿಪೀಕರಣ ವೈಶಿಷ್ಟ್ಯವನ್ನು ಸಂಪೂರ್ಣ ತಾಂತ್ರಿಕ ವಿವರಣೆ ಓದಿ.