ಸರಳ ಮತ್ತು ಖಾಸಗಿಯಾಗಿರುವಂತಹ ಉತ್ಪನ್ನವನ್ನು ವಿನ್ಯಾಸಗೊಳಿಸುವ ಮೂಲಕ ಪ್ರಪಂಚವನ್ನು ಖಾಸಗಿಯಾಗಿ ಸಂಪರ್ಕಿಸುವುದೇ ನಮ್ಮ ಉದ್ದೇಶವಾಗಿದೆ. ನೀವು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬಕ್ಕೆ ವೈಯಕ್ತಿಕ ಮೆಸೇಜ್ ಅನ್ನು ಕಳುಹಿಸುತ್ತಿರುವಾಗ ಅಥವಾ ಬ್ಯುಸಿನೆಸ್ಗೆ ಮೆಸೇಜ್ ಮಾಡುತ್ತಿರುವಾಗ, ನಿಮ್ಮ ಸಂವಹನಗಳು ಸುರಕ್ಷಿತವಾಗಿರುತ್ತವೆ ಮತ್ತು ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ.
ಕೊನೆಯಿಂದ-ಕೊನೆಯವರೆಗೆ ಎನ್ಕ್ರಿಪ್ಟ್ ಮಾಡಿದ ಚಾಟ್ಗಳಲ್ಲಿರುವ ಸಂವಹನಗಳನ್ನು ಸ್ಪಷ್ಟವಾಗಿ ಗೋಲ್ಡ್ ಮೆಸೇಜ್ ಎಂದು ಲೇಬಲ್ ಮಾಡಲಾಗಿರುತ್ತದೆ; ಈ ಮೆಸೇಜ್ಗಳು ಮತ್ತು ಕಾಲ್ಗಳು ನಿಮ್ಮ ನಡುವೆಯೇ ಇರುತ್ತವೆ. WhatsApp ಸೇರಿದಂತೆ ಬೇರೆ ಯಾರೂ ಸಹ ಇದರ ಕಂಟೆಂಟ್ ಅನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ.
ನಿಮ್ಮ ಮೆಸೇಜ್ಗಳು ನಿಮಗೆ ಮಾತ್ರ ಸಂಬಂಧಿಸಿರುತ್ತವೆ. ಅದಕ್ಕಾಗಿಯೇ, ನಿಮ್ಮ ಮೆಸೇಜ್ಗಳನ್ನು ನಿಮ್ಮ ಫೋನ್ನಲ್ಲಿ ಸಂಗ್ರಹಿಸಲಾಗಿದೆ. ಅಲ್ಲದೇ, ನಾವು ಅವುಗಳನ್ನು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುವುದಿಲ್ಲ.
ನಿಮ್ಮ ಗೌಪ್ಯತೆ ಮತ್ತು ಭದ್ರತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಕಸ್ಟಮೈಸ್ ಮಾಡುವುದನ್ನು WhatsApp ಸರಳಗೊಳಿಸಿದೆ.
ನೀವು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಸಂವಹನವನ್ನು ಸುರಕ್ಷಿತವಾಗಿಡಲು ಮತ್ತು ಸುಭದ್ರವಾಗಿಡಲು ನಿಮಗೆ ಸಹಾಯ ಮಾಡುವುದಕ್ಕಾಗಿ WhatsApp ಹಲವಾರು ಟೂಲ್ಸ್, ವೈಶಿಷ್ಟ್ಯಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ.
ಈ ಕೆಳಗಿನವುಗಳನ್ನು ಹೇಗೆ ಮಾಡುವುದು ಎಂದು ತಿಳಿಯಿರಿ:
ಯಾವ ಮಾಹಿತಿಯು ಗೌಪ್ಯವಾಗಿವೆ ಮತ್ತು ನಮ್ಮ ಸಹ ಕಂಪನಿ Facebook ಜೊತೆ ಯಾವ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದರ ಕುರಿತು ನಾವು ಸ್ಪಷ್ಟವಾಗಿರಲು ಬಯಸುತ್ತೇವೆ. ನಾವು ಹಂಚಿಕೊಳ್ಳುವ ಮಾಹಿತಿಯು ಉತ್ತಮವಾದ ಬಳಕೆದಾರ ಅನುಭವವನ್ನು ಒದಗಿಸಲು ಮತ್ತು ಭದ್ರತೆಯನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ. ಅತ್ಯಂತ ಅಪ್ ಟು ಡೇಟ್ ಮತ್ತು ನಿಖರ ಮಾಹಿತಿಗಾಗಿ, ನಮ್ಮ ಗೌಪ್ಯತಾ ನೀತಿ ನೋಡಿ.