ಖಾಸಗಿಯಾಗಿ ಮೆಸೇಜ್ ಕಳುಹಿಸಿ
ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್ ಇರುವುದರಿಂದ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ನಿಮ್ಮಲ್ಲಿ ಹಾಗೂ ನೀವು ಯಾರಿಗೆ ಕಳುಹಿಸಿದ್ದೀರೋ ಅವರ ನಡುವೆಯೇ ಮಾತ್ರ ಇರುವ ಕುರಿತು ನೀವು ನಿಶ್ಚಿಂತರಾಗಿರಬಹುದು.

ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್ ಇರುವುದರಿಂದ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ನಿಮ್ಮಲ್ಲಿ ಹಾಗೂ ನೀವು ಯಾರಿಗೆ ಕಳುಹಿಸಿದ್ದೀರೋ ಅವರ ನಡುವೆಯೇ ಮಾತ್ರ ಇರುವ ಕುರಿತು ನೀವು ನಿಶ್ಚಿಂತರಾಗಿರಬಹುದು.
ಮೆಸೇಜ್‌ಗಳು ಹಾಗೂ ಕರೆಗಳು ನಿಮ್ಮ ನಡುವೆಯೇ ಇರುತ್ತವೆ. WhatsApp ಸೇರಿದಂತೆ, ಯಾರಿಗೂ ಅವುಗಳನ್ನು ಓದಲು ಅಥವಾ ಆಲಿಸಲು ಸಾಧ್ಯವಾಗುವುದಿಲ್ಲ.
ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್ ಅನ್ನೂ ಮೀರಿ, ನಿಮ್ಮೆಲ್ಲಾ ಸಂವಾದಗಳಿಗೆ ನಾವು ಹೆಚ್ಚುವರಿ ರಕ್ಷಣಾ ಪದರಗಳನ್ನು ಸೇರಿಸುತ್ತೇವೆ.
ನೀವು ಏನನ್ನು ಹಂಚಿಕೊಳ್ಳಬೇಕು, ನೀವು ಆನ್‌ಲೈನ್‌ನಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಅಥವಾ ನಿಮ್ಮೊಂದಿಗೆ ಯಾರು ಮಾತನಾಡಬಹುದು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ನುಸುಳುಕೋರರಿಗಿಂತ ಎರಡು ಹೆಜ್ಜೆ ಮುಂದಿರಿ. ನಿಮ್ಮ ಫೋನ್ ಸಂಖ್ಯೆಯನ್ನು ಬಳಸಲು ಪ್ರಯತ್ನಿಸುತ್ತಿರುವ ಹ್ಯಾಕರ್‌ಗಳು ಹಾಗೂ ಸ್ಕ್ಯಾಮರ್‌ಗಳಿಂದ ನಿಮ್ಮ ಖಾತೆಯನ್ನು ರಕ್ಷಿಸಿ.
ಕಣ್ಮರೆಯಾಗುವ ಮೆಸೇಜ್‌ಗಳ ಸಹಾಯದಿಂದ, ನೀವು ಮೆಸೇಜ್‌ಗಳನ್ನು ಕಳುಹಿಸಿದ ಮೇಲೆ ಅವುಗಳು ಕಣ್ಮರೆಯಾಗುವಂತೆ ಹೊಂದಿಸುವ ಮೂಲಕ ಯಾವ ಮೆಸೇಜ್ ಅಲ್ಲಿರಬೇಕು ಹಾಗೂ ಅದು ಎಷ್ಟು ಹೊತ್ತು ಇರಬೇಕು ಎಂಬುದನ್ನು ನೀವೇ ನಿಯಂತ್ರಿಸಬಹುದು.
ಅನವಶ್ಯಕ ಚಾಟ್‌ಗಳಿಂದ ದೂರವಿರಿ. ನಿಮಗೆ ಯಾರೊಂದಿಗಾದರೂ ಚಾಟ್ ಮಾಡಲು ಇಷ್ಟವಿಲ್ಲದಿದ್ದಾಗಲೂ ಅವರು ಮೆಸೇಜ್ ಕಳುಹಿಸುತ್ತಿದ್ದರೆ, ಅವರನ್ನು ಸುಮ್ಮನೇ ಬ್ಲಾಕ್ ಮಾಡಿ. ಆಗ ಅವರಿಂದ ಯಾವುದೇ ಮೆಸೇಜ್‌ಗಳು ಅಥವಾ ಕರೆಗಳು ಬರದಂತೆ WhatsApp ಖಚಿತಪಡಿಸುತ್ತದೆ.
ನಿಮ್ಮ ಆನ್‌ಲೈನ್ ಬ್ಯಾಕಪ್‌ಗಳನ್ನು ಖಾಸಗಿಯಾಗಿರಿಸಿ. iCloud ಅಥವಾ Google ಡ್ರೈವ್‌ಗಳಲ್ಲಿ ಉಳಿಸಲಾಗಿರುವ ನಿಮ್ಮ ಮೆಸೇಜ್‌ಗಳಿಗೆ ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್‌ನ ಸುರಕ್ಷತೆಯನ್ನು ಮುಂದುವರಿಸಲು ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳನ್ನು ಆನ್ ಮಾಡಿ.
ನಿಮಗೆ ಬೇಕಾದವರು ಮಾತ್ರ ನೋಡಬೇಕೆಂದು ಆಯ್ಕೆಮಾಡಿ. ನೀವು ಆನ್‌ಲೈನ್‌ನಲ್ಲಿ ಇರುವಾಗ ಹಾಗೂ ನೀವು WhatsApp ಅನ್ನು ಕೊನೆಯ ಬಾರಿಗೆ ಬಳಸಿದ್ದು ಯಾವಾಗ ಎಂಬುದನ್ನು ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಕಸ್ಟಮೈಸ್ ಮಾಡಬಹುದು.