ಕೊನೆಯದಾಗಿ ಮಾರ್ಪಡಿಸಿರುವುದು: ಜನವರಿ 04, 2021 (ಆರ್ಕೈವ್ ಮಾಡಲಾದ ಆವೃತ್ತಿಗಳು)
ನೀವು ಯುರೋಪಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, WhatsApp Ireland Limited ಈ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿ ಅಡಿಯಲ್ಲಿ ನಿಮಗೆ ಸೇವೆಗಳನ್ನು ಒದಗಿಸುತ್ತದೆ.
ನೀವು ಯುರೋಪಿಯನ್ ಪ್ರದೇಶ ದ ಹೊರಗೆ ವಾಸಿಸುತ್ತಿದ್ದರೆ, WhatsApp LLC ("WhatsApp," "ನಮ್ಮ," "ನಾವು," ಅಥವಾ "ನಮಗೆ") ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿ ಅಡಿಯಲ್ಲಿ ನಮ್ಮ ಸೇವೆಗಳನ್ನು ನಿಮಗೆ ಒದಗಿಸುತ್ತದೆ.
ನಮ್ಮ ಗೌಪ್ಯತೆ ನೀತಿ ("ಗೌಪ್ಯತೆ ನೀತಿ") ನಮ್ಮ ಸೇವೆಗಳನ್ನು ಒದಗಿಸಲು ನಾವು ಪ್ರಕ್ರಿಯೆಗೊಳಿಸಿದ ಮಾಹಿತಿಯನ್ನು ಒಳಗೊಂಡಂತೆ ನಮ್ಮ ಡೇಟಾ ಅಭ್ಯಾಸಗಳನ್ನು ವಿವರಿಸಲು ಸಹಾಯ ಮಾಡುತ್ತದೆ.
ಉದಾಹರಣೆಗೆ, ನಮ್ಮ ಗೌಪ್ಯತೆ ನೀತಿಯು ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿಸುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಾವು ತೆಗೆದುಕೊಳ್ಳುವ ಕ್ರಮಗಳನ್ನು ಸಹ ಇದು ವಿವರಿಸುತ್ತದೆ - ನಮ್ಮ ಸೇವೆಗಳನ್ನು ಅಭಿವೃಧ್ದಿ ಪಡೆಸಲು ನೀವು ಕಳುಹಿಸಿದ ಸಂದೇಶಗಳನ್ನು ನಾವು ಸಂಗ್ರಹಿಸುವುದಿಲ್ಲ ಮತ್ತು ನಮ್ಮ ಸೇವೆಗಳನ್ನು ಉಪಯೋಗಿಸಿಕೊಂಡು ನೀವು ಯಾರೊಂದಿಗೆ ಸಂವಹನ ನಡೆಸುತ್ತೀರಿ ಎಂಬುದರ ಮೇಲೆ ನಿಮಗೆ ನಿಯಂತ್ರಣವನ್ನು ನೀಡುತ್ತದೆ.
ನಾವು Facebook ಕಂಪನಿಗಳಲ್ಲಿ ಒಬ್ಬರಾಗಿದ್ದೇವೆ. ಈ ಕಂಪನಿಗಳ ಕುಟುಂಬದಾದ್ಯಂತ ನಾವು ಮಾಹಿತಿಯನ್ನು ಹಂಚಿಕೊಳ್ಳುವ ವಿಧಾನಗಳ ಬಗ್ಗೆ ಈ ಗೌಪ್ಯತೆ ನೀತಿಯಲ್ಲಿ ನೀವು ಇನ್ನಷ್ಟು ಕೆಳಗೆ ಕಲಿಯಬಹುದು.
ನಿರ್ದಿಷ್ಟಪಡಿಸದ ಹೊರತು ಈ ಎಲ್ಲಾ ಗೌಪ್ಯತೆ ನೀತಿಯನ್ನು ನಮ್ಮ ಎಲ್ಲಾ ಸೇವೆಗಳಿಗೆ ಅನ್ವಯಿಸಲಾಗುತ್ತದೆ.
ದಯವಿಟ್ಟು WhatsApp ನ ಸೇವಾ ನಿಯಮಗಳನ್ನು ("ನಿಯಮಗಳು") ಸಹ ಓದಿ, ಅದು ಯಾವ ನಿಯಮಗಳ ಅಡಿಯಲ್ಲಿ ನೀವು ಸೇವೆಯನ್ನು ಬಳಸುತ್ತೀರಿ ಮತ್ತು ನಮ್ಮ ಸೇವೆಗಳನ್ನು ನಾವು ಒದಗಿಸುತ್ತೇವೆ ಎಂಬುದನ್ನು ವಿವರಿಸುತ್ತದೆ.
ನಮ್ಮ ಸೇವೆಗಳನ್ನು ನೀವು ಸ್ಥಾಪಿಸುವಾಗ, ಪ್ರವೇಶಿಸುವಾಗ ಅಥವಾ ಬಳಸುವಾಗ ಸೇರಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಅಭಿವೃದ್ದಿ ಪಡಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು WhatsApp ಕೆಲವು ಮಾಹಿತಿಯನ್ನು ಸ್ವೀಕರಿಸಬೇಕಾಗುತ್ತದೆ ಅಥವಾ ಸಂಗ್ರಹಿಸಬೇಕಿರುತ್ತದೆ.
ನಮ್ಮ ಸೇವೆಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇರೆಗೆ ನಾವು ಸಂಗ್ರಹಿಸುವ ಮಾಹಿತಿಯ ಪ್ರಕಾರಗಳು ಅವಲಂಬಿಸಿರುತ್ತವೆ. ನಮ್ಮ ಸೇವೆಗಳನ್ನು ತಲುಪಿಸಲು ನಮಗೆ ಕೆಲವು ಮಾಹಿತಿಯ ಅಗತ್ಯವಿದೆ ಮತ್ತು ಇದು ಇಲ್ಲದೆ ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ನಮ್ಮ ಸೇವೆಗಳನ್ನು ಬಳಸಲು ಖಾತೆಯನ್ನು ರಚಿಸಲು ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀವು ಒದಗಿಸಬೇಕು.
ನಮ್ಮ ಸೇವೆಗಳು ಐಚ್ಛಿಕ ವೈಶಿಷ್ಟ್ಯಗಳನ್ನು ಹೊಂದಿವೆ, ಅದನ್ನು ನೀವು ಬಳಸಿದರೆ, ಅಂತಹ ವೈಶಿಷ್ಟ್ಯಗಳನ್ನು ಒದಗಿಸಲು ಹೆಚ್ಚುವರಿ ಮಾಹಿತಿಯ ಸಂಗ್ರಹಣೆಯು ನಮಗೆ ಅಗತ್ಯವಾಗಿ ಬೇಕಾಗುವುದು. ಅಂತಹ ಸಂಗ್ರಹಣೆಯ ಬಗ್ಗೆ, ಹೇಗೆ ಸೂಕ್ತವೋ ಹಾಗೆ ನಿಮಗೆ ತಿಳಿಸಲಾಗುವುದು. ವೈಶಿಷ್ಟ್ಯವನ್ನು ಬಳಸಲು ಅಗತ್ಯವಾದ ಮಾಹಿತಿಯನ್ನು ಒದಗಿಸದಿರುವ ಆಯ್ಕೆಯನ್ನು ನೀವು ಆರಿಸಿದರೆ, ನಿಮಗೆ ಅಂತಹ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ನಿಮ್ಮ ಸಾಧನದಿಂದ ನಿಮ್ಮ ಸ್ಥಳದ ಡೇಟಾವನ್ನು ಸಂಗ್ರಹಿಸಲು ನೀವು ನಮಗೆ ಅನುಮತಿ ನೀಡದಿದ್ದರೆ ನಿಮ್ಮ ಸಂಪರ್ಕಗಳೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. Android ಮತ್ತು iOS ಎರಡೂ ಸಾಧನಗಳಲ್ಲಿನ ನಿಮ್ಮ ಸೆಟ್ಟಿಂಗ್‌ಗಳ ಮೆನು ಮೂಲಕ ಅನುಮತಿಗಳನ್ನು ನಿರ್ವಹಣೆ ಮಾಡಬಹುದು.
ನಿಮ್ಮ ಖಾತೆಯ ಮಾಹಿತಿ WhatsApp ಖಾತೆಯನ್ನು ರಚಿಸಲು ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಮತ್ತು ಮೂಲ ಮಾಹಿತಿಯನ್ನು (ನಿಮ್ಮ ಆಯ್ಕೆಯ ಪ್ರೊಫೈಲ್ ಹೆಸರನ್ನು ಒಳಗೊಂಡಂತೆ) ನೀವು ಒದಗಿಸಬೇಕು. ನೀವು ಈ ಮಾಹಿತಿಯನ್ನು ನಮಗೆ ಒದಗಿಸದಿದ್ದರೆ, ನಮ್ಮ ಸೇವೆಗಳನ್ನು ಬಳಸಲು ನಿಮಗೆ ಖಾತೆಯನ್ನು ರಚಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಖಾತೆಗೆ ಪ್ರೊಫೈಲ್ ಚಿತ್ರ ಮತ್ತು "ನಿಮ್ಮ ಕುರಿತು" ಮಾಹಿತಿಯಂತಹ ಇತರ ಮಾಹಿತಿಯನ್ನು ನೀವು ಸೇರಿಸಬಹುದು.
ನಿಮ್ಮ ಸಂದೇಶಗಳು. ನಮ್ಮ ಸೇವೆಗಳನ್ನು ನಿಮಗೆ ಒದಗಿಸುವ ಸಾಮಾನ್ಯ ಸ್ತರದಲ್ಲಿ ನಾವು ನಿಮ್ಮ ಸಂದೇಶಗಳನ್ನು ಉಳಿಸಿಕೊಳ್ಳುವುದಿಲ್ಲ. ಬದಲಾಗಿ, ನಿಮ್ಮ ಸಂದೇಶಗಳನ್ನು ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅವುಗಳನ್ನು ನಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುವುದಿಲ್ಲ. ನಿಮ್ಮ ಸಂದೇಶಗಳನ್ನು ತಲುಪಿಸಿದ ನಂತರ, ಅವುಗಳನ್ನು ನಮ್ಮ ಸರ್ವರ್‌ಗಳಿಂದ ಅಳಿಸಲಾಗುತ್ತದೆ. ಈ ಕೆಳಗಿನ ಸನ್ನಿವೇಶಗಳು ನಿಮ್ಮ ಸಂದೇಶಗಳನ್ನು ತಲುಪಿಸುವಾಗ ನಾವು ಸಂಗ್ರಹಿಸಬಹುದಾದ ಸಂದರ್ಭಗಳನ್ನು ವಿವರಿಸುತ್ತದೆ:
ತಲುಪಿಸದಿರುವ ಸಂದೇಶಗಳು. ಸಂದೇಶವನ್ನು ತಕ್ಷಣವೇ ತಲುಪಿಸಲು ಸಾಧ್ಯವಾಗದಿದ್ದರೆ (ಉದಾಹರಣೆಗೆ, ಸ್ವೀಕರಿಸುವವರು ಆಫ್‌ಲೈನ್‌ನಲ್ಲಿದ್ದರೆ), ನಾವು ಅದನ್ನು ತಲುಪಿಸಲು ಪ್ರಯತ್ನಿಸುವಾಗ ಅದನ್ನು 30 ದಿನಗಳವರೆಗೆ ನಮ್ಮ ಸರ್ವರ್‌ಗಳಲ್ಲಿ ಎನ್‌ಕ್ರಿಪ್ಟ್ ರೂಪದಲ್ಲಿ ಇರಿಸುತ್ತೇವೆ. 30 ದಿನಗಳ ನಂತರ ಸಂದೇಶವನ್ನು ಇನ್ನೂ ತಲುಪಿಸದಿದ್ದರೆ, ನಾವು ಅದನ್ನು ಅಳಿಸುತ್ತೇವೆ.
ಮೀಡಿಯಾ ಫಾರ್ವರ್ಡ್ ಮಾಡುವುದು. ಬಳಕೆದಾರರು ಸಂದೇಶದೊಳಗೆ ಮಾಧ್ಯಮವನ್ನು ಫಾರ್ವರ್ಡ್ ಮಾಡಿದಾಗ, ಹೆಚ್ಚುವರಿ ಫಾರ್ವರ್ಡ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡಲು ನಾವು ಆ ಮಾಧ್ಯಮವನ್ನು ನಮ್ಮ ಸರ್ವರ್‌ಗಳಲ್ಲಿ ತಾತ್ಕಾಲಿಕವಾಗಿ ಎನ್‌ಕ್ರಿಪ್ಟ್ ರೂಪದಲ್ಲಿ ಸಂಗ್ರಹಿಸುತ್ತೇವೆ.
ನಾವು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಸೇವೆಯನ್ನು ಒದಗಿಸುತ್ತೇವೆ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಎಂದರೆ ನಿಮ್ಮ ಸಂದೇಶಗಳನ್ನು ಮೂರನೇ ವ್ಯಕ್ತಿಯು ಓದುವುದರ ವಿರುಧ್ದವಾಗಿ ಅವುಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಎಂದು ಅರ್ಥ. ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಮತ್ತು ವ್ಯವಹಾರಗಳು ನಿಮ್ಮೊಂದಿಗೆ WhatsApp ನಲ್ಲಿ ಯಾವ ರೀತಿಯಲ್ಲಿ ಸಂವಹನವನ್ನು ನಡೆಸುತ್ತವೆ ಹೊಂದಿರುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ನಿಮ್ಮ ಸಂಪರ್ಕಗಳು. ನಮ್ಮ ಸೇವೆಗಳ ಬಳಕೆದಾರರು ಮತ್ತು ನಿಮ್ಮ ಇತರ ಸಂಪರ್ಕಗಳನ್ನು ಒಳಗೊಂಡಂತೆ ನಿಯಮಿತವಾಗಿ ನಿಮ್ಮ ವಿಳಾಸ ಪುಸ್ತಕದಲ್ಲಿನ ಫೋನ್ ಸಂಖ್ಯೆಗಳೊಂದಿಗೆ ನಿಮಗೆ ಅನ್ವಯವಾಗುವ ಕಾನೂನುಗಳ ಪ್ರಕಾರ ಅನುಮತಿಸಿದರೆ ನೀವು ಸಂಪರ್ಕ ಅಪ್‌ಲೋಡ್ ವೈಶಿಷ್ಟ್ಯವನ್ನು ಬಳಸಬಹುದು ಮತ್ತು ನಮಗೆ ಒದಗಿಸಬಹುದು. ನಿಮ್ಮ ಯಾವುದೇ ಸಂಪರ್ಕಗಳು ಇನ್ನೂ ನಮ್ಮ ಸೇವೆಗಳನ್ನು ಬಳಸುತ್ತಿಲ್ಲದಿದ್ದರೆ, ಆ ಸಂಪರ್ಕಗಳನ್ನು ನಮ್ಮಿಂದ ಗುರುತಿಸಲಾಗುವುದಿಲ್ಲ ಎಂದು ಖಚಿತಪಡಿಸುವ ರೀತಿಯಲ್ಲಿ ನಾವು ಈ ಮಾಹಿತಿಯನ್ನು ನಿಮಗಾಗಿ ನಿರ್ವಹಿಸುತ್ತೇವೆ. ನಮ್ಮ ಸಂಪರ್ಕ ಅಪ್‌ಲೋಡ್ ವೈಶಿಷ್ಟ್ಯದ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ. ನೀವು ಗುಂಪುಗಳು ಮತ್ತು ಪ್ರಸಾರ ಪಟ್ಟಿಗಳನ್ನು ರಚಿಸಬಹುದು, ಸೇರಬಹುದು ಅಥವಾ ಸೇರಿಸಬಹುದು ಮತ್ತು ಅಂತಹ ಗುಂಪುಗಳು ಮತ್ತು ಪಟ್ಟಿಗಳು ನಿಮ್ಮ ಖಾತೆಯ ಮಾಹಿತಿಯೊಂದಿಗೆ ಸಂಯೋಜಿಸಲ್ಪಡುತ್ತವೆ. ನಿಮ್ಮ ಗುಂಪುಗಳಿಗೆ ನೀವು ಹೆಸರನ್ನು ನೀಡಬಹುದು. ನೀವು ಗುಂಪು ಪ್ರೊಫೈಲ್ ಚಿತ್ರ ಅಥವಾ ವಿವರಣೆಯನ್ನು ಒದಗಿಸಬಹುದು.
ಸ್ಥಿತಿಗತಿಗಳ ಮಾಹಿತಿ. ನಿಮ್ಮ ಖಾತೆಯ ಮೂಲಕ ನೀವು ನಿಮ್ಮ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲು ಬಯಸಿದರೆ ಅದನ್ನು ಒದಗಿಸಬಹುದು. Android, iPhone ಅಥವಾ KaiOS ನಿಮ್ಮ ಸ್ಥಿತಿಗತಿಗಳನ್ನು ತಿಳಿಸುವುದು ಹೇಗೆಂಬುದರ ಕುರಿತು ತಿಳಿಯಿರಿ.
ವಹಿವಾಟುಗಳು ಮತ್ತು ಪಾವತಿಗಳ ಡೇಟಾ. ನೀವು ನಮ್ಮ ಪಾವತಿ ಸೇವೆಗಳನ್ನು ಬಳಸುತ್ತಿದ್ದರೆ ಅಥವಾ ಖರೀದಿಗಳು ಅಥವಾ ಇತರ ಹಣಕಾಸು ವಹಿವಾಟುಗಳ ಉದ್ದೇಶಕ್ಕಾಗಿ ರೂಪಿಸಿರುವ ನಮ್ಮ ಸೇವೆಗಳನ್ನು ಬಳಸಿದರೆ, ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿ ಸೇರಿದಂತೆ ನಿಮ್ಮ ಕುರಿತು ಹೆಚ್ಚುವರಿ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯು ವಹಿವಾಟನ್ನು ಪೂರ್ಣಗೊಳಿಸಲು ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರುತ್ತದೆ (ಉದಾಹರಣೆಗೆ, ನಿಮ್ಮ ಪಾವತಿ ವಿಧಾನ, ಶಿಪ್ಪಿಂಗ್ ವಿವರಗಳು ಮತ್ತು ವಹಿವಾಟಿನ ಮೊತ್ತದ ಕುರಿತು ಮಾಹಿತಿ). ನಿಮ್ಮ ದೇಶ ಅಥವಾ ಪ್ರದೇಶದಲ್ಲಿ ಲಭ್ಯವಿರುವ ನಮ್ಮ ಪಾವತಿ ಸೇವೆಗಳನ್ನು ನೀವು ಬಳಸಿದರೆ, ನಮ್ಮ ಗೌಪ್ಯತೆ ಅಭ್ಯಾಸಗಳಿಗೆ ಪ್ರಕಾರ ಅನ್ವಯವಾಗುವ ಪಾವತಿ ಗೌಪ್ಯತೆಯ ನೀತಿಯಲ್ಲಿ ವಿವರಿಸಲಾಗಿದೆ.
ಗ್ರಾಹಕ ಬೆಂಬಲ ಮತ್ತು ಇತರ ಸಂವಹನಗಳು. ನೀವು ಗ್ರಾಹಕರ ಬೆಂಬಲಕ್ಕಾಗಿ ನಮ್ಮನ್ನು ಸಂಪರ್ಕಿಸಿದಾಗ ಅಥವಾ ನಮ್ಮೊಂದಿಗೆ ಸಂವಹನ ಮಾಡುವಾಗ ನಿಮ್ಮ ಸಂದೇಶಗಳ ಪ್ರತಿಗಳು, ನೀವು ಸಹಾಯಕವೆಂದು ಪರಿಗಣಿಸುವ ಮತ್ತು ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂಬುದರ ಕುರಿತಾದ ಯಾವುದೇ ಇತರ ಮಾಹಿತಿ (ಉದಾ., ಇಮೇಲ್ ವಿಳಾಸ) ಸೇರಿದಂತೆ ನಮ್ಮ ಸೇವೆಗಳ ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನಮಗೆ ಒದಗಿಸಬಹುದು. ಉದಾಹರಣೆಗೆ, ಅಪ್ಲಿಕೇಶನ್ ಕಾರ್ಯಕ್ಷಮತೆ ಅಥವಾ ಇತರ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನಮಗೆ ಇಮೇಲ್ ಮೂಲಕ ಕಳುಹಿಸಬಹುದು.
ಬಳಕೆ ಮತ್ತು ಲಾಗ್ ಮಾಹಿತಿ. ಸೇವೆ-ಸಂಬಂಧಿತ, ಪರಿಶೀಲನಾತ್ಮಕವಾದ ಮತ್ತು ಕಾರ್ಯಕ್ಷಮತೆಯ ಮಾಹಿತಿಯಂತಹ ನಮ್ಮ ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇದು ನಿಮ್ಮ ಚಟುವಟಿಕೆಯ ಬಗ್ಗೆ ಮಾಹಿತಿ (ನೀವು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತೀರಿ, ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳು, ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತೀರಿ (ನೀವು ವ್ಯವಹಾರದೊಂದಿಗೆ ಸಂವಹನವನ್ನು ಯಾವಾಗ ನಡೆಸುತ್ತೀರಿ ಎಂಬುದನ್ನು ಒಳಗೊಂಡಂತೆ) ಮತ್ತು ನಿಮ್ಮ ಚಟುವಟಿಕೆಗಳು ಮತ್ತು ಸಂವಹನಗಳ ಸಮಯ, ಆವರ್ತನ ಮತ್ತು ಅವಧಿ ಸೇರಿದಂತೆ) , ಲಾಗ್ ಫೈಲ್‌ಗಳು ಮತ್ತು ಪರಿಶೀಲನೆಗಳು, ಕ್ರ್ಯಾಶ್, ವೆಬ್‌ಸೈಟ್ ಮತ್ತು ಕಾರ್ಯಕ್ಷಮತೆಯ ದಾಖಲೆಗಳು ಮತ್ತು ವರದಿಗಳನ್ನು ಒಳಗೊಂಡಿರುತ್ತದೆ. ನಮ್ಮ ಸೇವೆಗಳನ್ನು ಬಳಸಲು ನೀವು ನೋಂದಾಯಿಸಿದಾಗ ನೀಡಿದ ಮಾಹಿತಿಯನ್ನು ಸಹ ಇದು ಒಳಗೊಂಡಿದೆ; ನಮ್ಮ ಸಂದೇಶ ಕಳುಹಿಸುವಿಕೆ, ನಮ್ಮ ಕರೆಗಳು, ಸ್ಥಿತಿಗತಿಗಳು, ಗುಂಪುಗಳು (ಗುಂಪಿನ ಹೆಸರು, ಗುಂಪು ಚಿತ್ರ, ಗುಂಪು ವಿವರಣೆಯನ್ನು ಒಳಗೊಂಡಂತೆ), ಪಾವತಿಗಳು ಅಥವಾ ವ್ಯವಹಾರ ವೈಶಿಷ್ಟ್ಯಗಳಂತಹ ನೀವು ಬಳಸುವ ಇತರ ವೈಶಿಷ್ಟ್ಯಗಳು; ಪ್ರೊಫೈಲ್ ಫೋಟೋ; "ನಮ್ಮ ಬಗ್ಗೆ" ಮಾಹಿತಿ; ನೀವು ಆನ್‌ಲೈನ್‌ನ ಮಾಹಿತಿ; ನೀವು ಕೊನೆಯ ಬಾರಿಗೆ ನಮ್ಮ ಸೇವೆಗಳನ್ನು ಬಳಸಿದಾಗ (ನಿಮ್ಮ "ಕೊನೆಯದಾಗಿ ನೋಡಿದ"); ಮತ್ತು ನಿಮ್ಮ "ಕುರಿತು" ಮಾಹಿತಿಯನ್ನು ನೀವು ಕೊನೆಯದಾಗಿ ನವೀಕರಿಸಿದ ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಸಾಧನ ಮತ್ತು ಸಂಪರ್ಕ ಮಾಹಿತಿ. ನೀವು ನಮ್ಮ ಸೇವೆಗಳನ್ನು ಸ್ಥಾಪಿಸುವಾಗ, ಪ್ರವೇಶಿಸುವಾಗ ಅಥವಾ ಬಳಸುವಾಗ ನಾವು ಸಾಧನ ಮತ್ತು ಸಂಪರ್ಕಗಳ ಕುರಿತಾದ-ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇದು ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಮಾಹಿತಿ, ಬ್ಯಾಟರಿ ಮಟ್ಟ, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಸಂಪರ್ಕ ಮಾಹಿತಿ (ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ISP ಸೇರಿದಂತೆ), ಭಾಷೆ ಮತ್ತು ಸಮಯ ವಲಯ, IP ವಿಳಾಸ, ಸಾಧನ ಕಾರ್ಯಾಚರಣೆಗಳ ಮಾಹಿತಿ, ಮತ್ತು ಗುರುತಿಸುವಿಕೆಗಳಂತಹ (ಒಂದೇ ಸಾಧನ ಅಥವಾ ಖಾತೆಗೆ ಸಂಬಂಧಿಸಿದ Facebook ಕಂಪನಿ ಉತ್ಪನ್ನಗಳು ವಿಶಿಷ್ಟವಾದ ಗುರುತಿಸುವಿಕೆಗಳನ್ನು ಒಳಗೊಂಡಂತೆ) ಮಾಹಿತಿಯನ್ನು ಒಳಗೊಂಡಿರುತ್ತದೆ.
ಸ್ಥಳದ ಮಾಹಿತಿ. ನಿಮ್ಮ ಸಂಪರ್ಕಗಳೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಅಥವಾ ಹತ್ತಿರದ ಸ್ಥಳಗಳನ್ನು ವೀಕ್ಷಿಸಲು ಅಥವಾ ಇತರರು ನಿಮ್ಮೊಂದಿಗೆ ಹಂಚಿಕೊಂಡಿರುವ ಸ್ಥಳಗಳನ್ನು ವೀಕ್ಷಿಸಲು ನೀವು ನಿರ್ಧರಿಸಿದಾಗ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸಲು ನೀವು ಆರಿಸಿದಾಗ ನಿಮ್ಮ ಅನುಮತಿಯೊಂದಿಗೆ ನಿಮ್ಮ ಸಾಧನದಿಂದ ನಿಖರವಾದ ಸ್ಥಳ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ. ಸ್ಥಳ-ಸಂಬಂಧಿತ ಮಾಹಿತಿಗೆ ಸಂಬಂಧಿಸಿದ ಕೆಲವು ಸೆಟ್ಟಿಂಗ್‌ಗಳಿವೆ, ಅದನ್ನು ನಿಮ್ಮ ಸಾಧನ ಸೆಟ್ಟಿಂಗ್‌ಗಳಲ್ಲಿ ಅಥವಾ ಸ್ಥಳ ಹಂಚಿಕೆಯಂತಹ ಅಪ್ಲಿಕೇಶನ್ ಸೆಟ್ಟಿಂಗ್‌ಗಳಲ್ಲಿ ನೀವು ಕಾಣಬಹುದು. ನಮ್ಮ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ನೀವು ಬಳಸದಿದ್ದರೂ ಸಹ, ನಿಮ್ಮ ಸಾಮಾನ್ಯ ಸ್ಥಳವನ್ನು (ಉದಾ., ನಗರ ಮತ್ತು ದೇಶ) ಅಂದಾಜು ಮಾಡಲು ನಾವು IP ವಿಳಾಸಗಳು ಮತ್ತು ಫೋನ್ ಸಂಖ್ಯೆ ಪ್ರದೇಶ ಸಂಕೇತಗಳಂತಹ ಇತರ ಮಾಹಿತಿಯನ್ನು ಬಳಸಿ ಕೊಳ್ಳುತ್ತೇವೆ. ನಿಮ್ಮ ಸ್ಥಳ ಮಾಹಿತಿಯನ್ನು ಡಯಾಗ್ನೋಸ್ಟಿಕ್ಸ್ ಮತ್ತು ಪರಿಶೀಲನೆಗಾಗಿ ಹಾಗೂ ದೋಷಗಳನ್ನು ನಿವಾರಿಸುವ ಉದ್ದೇಶಗಳಿಗಾಗಿ ಸಹ ನಾವು ಬಳಸುತ್ತೇವೆ.
ಕುಕೀಸ್. ವೆಬ್ ಆಧಾರಿತ ನಮ್ಮ ಸೇವೆಗಳನ್ನು ಒದಗಿಸುವುದು, ನಿಮ್ಮ ಅನುಭವಗಳನ್ನು ಸುಧಾರಿಸುವುದು, ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಕಸ್ಟಮೈಸ್ ಮಾಡುವುದು ಸೇರಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ಒದಗಿಸಲು ನಾವು ಕುಕೀಸ್ ಅನ್ನು ಬಳಸುತ್ತೇವೆ. ಉದಾಹರಣೆಗೆ, ವೆಬ್ ಮತ್ತು ಡೆಸ್ಕ್‌ಟಾಪ್ ಮತ್ತು ಇತರ ವೆಬ್ ಆಧಾರಿತ ಸೇವೆಗಳಿಗಾಗಿ ನಮ್ಮ ಸೇವೆಗಳನ್ನು ಒದಗಿಸಲು ನಾವು ಕುಕೀಸ್ ಅನ್ನು ಬಳಸುತ್ತೇವೆ. ನಮ್ಮ ಯಾವ ಸಹಾಯ ಕೇಂದ್ರ ಲೇಖನಗಳು ಹೆಚ್ಚು ಜನಪ್ರಿಯವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸೇವೆಗಳಿಗೆ ಸಂಬಂಧಿಸಿದ ವಿಷಯವನ್ನು ನಿಮಗೆ ತೋರಿಸಲು ನಾವು ಕುಕೀಸ್ ಅನ್ನು ಬಳಸಬಹುದು. ಹೆಚ್ಚುವರಿಯಾಗಿ ನಾವು ನಿಮ್ಮ ಆಯ್ಕೆಗಳಲ್ಲಿ ನೆನೆಪಿನಲ್ಲಿಟ್ಟುಕೊಳ್ಳಲು, ಹೇಗೆಂದರೆ ನಿಮ್ಮ ಭಾಷೆಯ ಆಯ್ಕೆಯನ್ನು ನೆನೆಪಿನಲ್ಲಿಟ್ಟುಕೊಳ್ಳಲು, ಸುರಕ್ಷಿತವಾದ ಅನುಭವವನ್ನು ನೀಡಲು, ಅದರ ಹೊರತಾಗಿ ನಿಮಗಾಗಿ ಕಸ್ಟಮೈಸ್ಡ್ ಸೇವೆಯನ್ನು ನೀಡಲು ನಾವು ಕುಕೀಸ್ ಅನ್ನು ಬಳಸಬಹುದು. ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು ನಾವು ಕುಕೀಸ್ ಅನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ನಿಮ್ಮ ಕುರಿತು ಬೇರೆಯವರು ನೀಡುವ ಮಾಹಿತಿ. ನಿಮ್ಮ ಕುರಿತು ಇತರ ಬಳಕೆದಾರರಿಂದ ನಾವು ಮಾಹಿತಿಯನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ, ನಿಮಗೆ ತಿಳಿದಿರುವ ಇತರ ಬಳಕೆದಾರರು ನಮ್ಮ ಸೇವೆಗಳನ್ನು ಬಳಸುವಾಗ, ಅವರು ನಿಮ್ಮ ಫೋನ್ ಸಂಖ್ಯೆ, ಹೆಸರು ಮತ್ತು ಇತರ ಮಾಹಿತಿಯನ್ನು (ಅವರ ಮೊಬೈಲ್ ವಿಳಾಸ ಪುಸ್ತಕದ ಮಾಹಿತಿಯಂತೆ) ನೀವು ಒದಗಿಸಿದಂತೆಯೇ ಒದಗಿಸಬಹುದು. ಅವರು ನಿಮಗೆ ಸಂದೇಶಗಳನ್ನು ಕಳುಹಿಸಬಹುದು, ನೀವು ಸೇರಿರುವ ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸಬಹುದು ಅಥವಾ ನಿಮಗೆ ಕರೆ ಮಾಡಬಹುದು. ನಮಗೆ ಯಾವುದೇ ಡೇಟಾವನ್ನು ಒದಗಿಸುವ ಮೊದಲು ಈ ರೀತಿಯ ಪ್ರತಿಯೊಬ್ಬ ಬಳಕೆದಾರರು ನಿಮ್ಮ ಮಾಹಿತಿಯನ್ನು ಸಂಗ್ರಹಿಸಲು, ಬಳಸಲು ಮತ್ತು ಹಂಚಿಕೊಳ್ಳಲು ಕಾನೂನು ರೀತಿಯಲ್ಲಿ ಹಕ್ಕುಗಳನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ.
ಸಾಮಾನ್ಯವಾಗಿ ಯಾವುದೇ ಬಳಕೆದಾರರು ನಿಮ್ಮ ಚಾಟ್‌ಗಳು ಅಥವಾ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯಬಹುದು ಅಥವಾ ಅವರೊಂದಿಗೆ ಮಾತನಾಡುವಾಗ ನಿಮ್ಮ ಕರೆಗಳನ್ನು ರೆಕಾರ್ಡಿಂಗ್ ಮಾಡಬಹುದು ಮತ್ತು ಅವುಗಳನ್ನು WhatsApp ಮಾಡಬಹುದು ಅಥವಾ ಬೇರೆಯವರಿಗೆ ಕಳುಹಿಸಬಹುದು ಅಥವಾ ಅವುಗಳನ್ನು ಬೇರೆ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಬಹುದು ಎಂಬುದನ್ನು ನೀವು ನೆನಪಿನಲ್ಲಿಡಬೇಕು.
ಬಳಕೆದಾರರ ವರದಿಗಳು. ನೀವು ಇತರ ಬಳಕೆದಾರರಿಗೆ ವರದಿ ಮಾಡುವಂತೆಯೇ, ಇತರ ಬಳಕೆದಾರರು ಅಥವಾ ಮೂರನೇ ವ್ಯಕ್ತಿಗಳು ನಿಮ್ಮ ಸಂವಹನಗಳನ್ನು ಮತ್ತು ಅವರೊಂದಿಗೆ ಅಥವಾ ನಮ್ಮ ಸೇವೆಗಳಲ್ಲಿ ಇತರರೊಂದಿಗೆ ನಿಮ್ಮ ಸಂದೇಶಗಳನ್ನು ನಮಗೆ ವರದಿ ಮಾಡಲು ಆಯ್ಕೆ ಮಾಡಬಹುದು; ಉದಾಹರಣೆಗೆ, ನಮ್ಮ ನಿಯಮಗಳು ಅಥವಾ ನೀತಿಗಳ ಸಂಭವನೀಯ ಉಲ್ಲಂಘನೆಗಳನ್ನು ವರದಿ ಮಾಡಲು. ವರದಿಯನ್ನು ಮಾಡಿದಾಗ, ವರದಿ ಮಾಡುವ ಬಳಕೆದಾರರು ಮತ್ತು ಈಗಾಗಲೇ ವರದಿ ಮಾಡಿರುವ ಬಳಕೆದಾರರ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಬಳಕೆದಾರನು ವರದಿಯನ್ನು ಮಾಡಿದಾಗ ಏನಾಗುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಸುಧಾರಿತ ಸುರಕ್ಷತೆ ಮತ್ತು ಭದ್ರತಾ ವೈಶಿಷ್ಟ್ಯಗಳು ನೋಡಿ.
WhatsApp ಮೂಲಕ ವ್ಯವಹಾರಗಳು. ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ಬೇರೆಯವರ ಜೊತೆಗೆ ಮಾಡುವ ವ್ಯವಹಾರ ಸಂವಹನಗಳಿಂದ ನಿಮ್ಮ ಪರಸ್ಪರ ಪ್ರತಿಕ್ರಿಯೆಗಳ ಮಾಹಿತಿಯನ್ನು ನೀಡಬಹುದು. ನಮಗೆ ಯಾವುದೇ ಮಾಹಿತಿಯನ್ನು ಒದಗಿಸುವಾಗ ಈ ಪ್ರತಿಯೊಂದು ವ್ಯವಹಾರಗಳು ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ.
ನೀವು WhatsApp ನಲ್ಲಿ ವ್ಯವಹಾರಿಕ ಸಂದೇಶ ಕಳುಹಿಸಿದಾಗ, ನೀವು ಹಂಚಿಕೊಳ್ಳುವ ವಿಷಯವು ಆ ವ್ಯವಹಾರದಲ್ಲಿರುವ ಹಲವಾರು ಜನರಿಗೆ ಗೋಚರಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ಹೆಚ್ಚುವರಿಯಾಗಿ, ಕೆಲವು ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ತಮ್ಮ ಸಂವಹನಗಳನ್ನು ನಿರ್ವಹಿಸಲು ಸಹಾಯ ಮಾಡಲು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರೊಂದಿಗೆ (Facebook ಅನ್ನು ಒಳಗೊಂಡಿರಬಹುದು) ಕೆಲಸ ಮಾಡುತ್ತಿರಬಹುದು. ಉದಾಹರಣೆಗೆ, ವ್ಯವಹಾರವು ಅಂತಹ ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರಿಗೆ ತನ್ನ ಸಂವಹನಗಳಿಗೆ ಕಳುಹಿಸಲು, ಸಂಗ್ರಹಿಸಲು, ಓದಲು, ನಿರ್ವಹಿಸಲು ಅಥವಾ ವ್ಯವಹಾರ ಪ್ರಕ್ರಿಯೆಗೊಳಿಸಲು ಪ್ರವೇಶವನ್ನು ನೀಡಬಹುದು. ವ್ಯವಹಾರವು ನಿಮ್ಮ ಮಾಹಿತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮಾಹಿತಿಯನ್ನು ಮೂರನೇ-ವ್ಯಕ್ತಿಗಳು ಅಥವಾ Facebook ನೊಂದಿಗೆ ಹೇಗೆ ಹಂಚಿಕೊಳ್ಳಬಹುದು ಎಂಬುದು ಸೇರಿದಂತೆ ನೀವು ಆ ವ್ಯವಹಾರದ ಗೌಪ್ಯತೆ ನೀತಿಯನ್ನು ಪರಿಶೀಲಿಸಬೇಕು ಅಥವಾ ವ್ಯವಹಾರವನ್ನು ನೇರವಾಗಿ ಸಂಪರ್ಕಿಸಬೇಕು.
ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು. ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರುಕಟ್ಟೆಗೆ ಸಹಾಯ ಮಾಡಲು ನಾವು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ಮತ್ತು ಇತರ Facebook ಕಂಪನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ಉದಾಹರಣೆಗೆ, ನಾವು ಅವರೊಂದಿಗೆ ನಮ್ಮ ಅಪ್ಲಿಕೇಶನ್ಗಳನ್ನು ವಿತರಿಸಲು; ನಮ್ಮ ತಾಂತ್ರಿಕ ಮತ್ತು ಭೌತಿಕ ಮೂಲಸೌಕರ್ಯ, ವಿತರಣೆ ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲು; ಎಂಜಿನಿಯರಿಂಗ್ ಬೆಂಬಲ ಒದಗಿಸಲು, ಸೈಬರ್ ಸುರಕ್ಷತೆ ಬೆಂಬಲ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲು; ಸ್ಥಳ, ನಕ್ಷೆ ಮತ್ತು ಸ್ಥಳಗಳ ಮಾಹಿತಿಯನ್ನು ಪೂರೈಸಲು; ಪಾವತಿಗಳನ್ನು ಪ್ರಕ್ರಿಯೆ ಮಾಡಲು; ಜನರು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲು; ನಮ್ಮ ಸೇವೆಗಳನ್ನು ಮಾರ್ಕೆಟ್ ಮಾಡಲು; ನಮ್ಮ ಸೇವೆಗಳನ್ನು ಬಳಸಿಕೊಂಡು ವ್ಯವಹಾರಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡಲು; ನಮಗೆ ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಡೆಸಲು; ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು; ಮತ್ತು ಗ್ರಾಹಕ ಸೇವೆಯ ಕುರಿತು ಸಹಾಯ ಮಾಡಲು ಕಾರ್ಯನಿರ್ವಹಿಸುತ್ತೇವೆ. ಈ ಕಂಪನಿಗಳು ಕೆಲವು ಸಂದರ್ಭಗಳಲ್ಲಿ ನಿಮ್ಮ ಕುರಿತಾದ ಮಾಹಿತಿಯನ್ನು ನಮಗೆ ಒದಗಿಸಬಹುದು; ಉದಾಹರಣೆಗೆ, ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ನಮಗೆ ಸಹಾಯ ಮಾಡಲು ಆಪ್ ಸ್ಟೋರ್‌ಗಳು ನಮಗೆ ವರದಿಗಳನ್ನು ಒದಗಿಸಬಹುದು.
ಈ ಕೆಳಗಿನ “ನಾವು ಇತರ Facebook ಕಂಪನಿಗಳೊಂದಿಗೆ ಹೇಗೆ ಕೆಲಸ ನಿರ್ವಹಿಸುತ್ತೇವೆ” ಎಂಬ ವಿಭಾಗವು WhatsApp ಇತರ Facebook ಕಂಪನಿಗಳೊಂದಿಗೆ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಹಂಚಿಕೊಳ್ಳುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.
ಮೂರನೇ ವ್ಯಕ್ತಿಯ ಸೇವೆಗಳು. ಮೂರನೇ ವ್ಯಕ್ತಿಯ ಸೇವೆಗಳು ಮತ್ತು Facebook ಕಂಪನಿ ಉತ್ಪನ್ನಗಳು ಸಂಬಂಧಿಸಿದಂತೆ ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿಸುತ್ತೇವೆ. ಒಂದೊಮ್ಮೆ ಅಂತಹ ಮೂರನೇ ವ್ಯಕ್ತಿಯ ಸೇವೆಗಳು ಅಥವಾ Facebook ಕಂಪನಿ ಉತ್ಪನ್ನಗಳು ಅನ್ನು ಹಾಗೂ ನೀವು ನಮ್ಮ ಸೇವೆಗಳನ್ನು ಬಳಸುವವರಲ್ಲಿ ಒಬ್ಬರಾಗಿದ್ದರೆ, ಅವರಿಂದ ನಿಮ್ಮ ಬಗ್ಗೆ ಮಾಹಿತಿಯನ್ನು ನಾವು ಸ್ವೀಕರಿಸಬಹುದು; ಉದಾಹರಣೆಗೆ, ನಮ್ಮ ಸೇವೆಗಳಲ್ಲಿನ ನಿಮ್ಮ WhatsApp ಸಂಪರ್ಕಗಳು, ಗುಂಪುಗಳು ಅಥವಾ ಪ್ರಸಾರ ಪಟ್ಟಿಗಳೊಂದಿಗೆ ಸುದ್ದಿ ಲೇಖನವನ್ನು ಹಂಚಿಕೊಳ್ಳಲು ನೀವು ಸುದ್ದಿ ಸೇವೆಯಲ್ಲಿನ WhatsApp ಹಂಚಿಕೆ ಬಟನ್ ಅನ್ನು ಬಳಸಿದರೆ, ಅಥವಾ ಮೊಬೈಲ್ ಕ್ಯಾರಿಯರ್ ಅಥವಾ ಸಾಧನ ಪೂರೈಕೆದಾರರ ನಮ್ಮ ಸೇವೆಗಳ ಪ್ರಚಾರದ ಮೂಲಕ ಸೇವೆಗಳನ್ನು ಪ್ರವೇಶಿಸಲು ನೀವು ಬಯಸಿದರೆ. ನೀವು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ Facebook ಕಂಪನಿ ಉತ್ಪನ್ನಗಳನ್ನು ಬಳಸುವಾಗ, ಅವರ ಸ್ವಂತ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಆ ಸೇವೆಗಳು ಮತ್ತು ಉತ್ಪನ್ನಗಳ ಮೇಲಿನ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಅಭಿವೃದ್ದಿಪಡಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ನಾವು ಹೊಂದಿರುವ ಮಾಹಿತಿಯನ್ನು (ನೀವು ಮಾಡುವ ಆಯ್ಕೆಗಳು ಮತ್ತು ಅನ್ವಯಿಸುವ ಕಾನೂನಿಗೆ ಒಳಪಟ್ಟಿರುತ್ತದೆ) ನಾವು ಬಳಸುತ್ತೇವೆ. ಹೇಗೆ ಎಂಬುದನ್ನು ಇಲ್ಲಿ ನೋಡಿ:
ನಮ್ಮ ಸೇವೆಗಳು. ಗ್ರಾಹಕರ ಬೆಂಬಲವನ್ನು ಒದಗಿಸುವುದು, ಖರೀದಿಗಳು ಅಥವಾ ವಹಿವಾಟುಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು, ಸರಿಪಡಿಸಲು ಮತ್ತು ಒದಗಿಸಲು ನಾವು ಮಾಹಿತಿಯನ್ನು ಬಳಸುತ್ತೇವೆ; ಮತ್ತು ನಮ್ಮ ಸೇವೆಗಳನ್ನು Facebook ಕಂಪನಿಯ ಉತ್ಪನ್ನಗಳುಅಭಿವೃದ್ದಿಪಡಿಸಲು, ಸರಿಪಡಿಸುವುದು ಮತ್ತು ಕಸ್ಟಮೈಸ್ ಮಾಡಲು ಮಾಹಿತಿಯನ್ನು ಬಳಸುತ್ತೇವೆ. ನಮ್ಮ ಸೇವೆಗಳನ್ನು ಜನರು ಹೇಗೆ ಉಪಯೋಗಿಸುತ್ತಾರೆಂಬುದನ್ನು ಅರ್ಥಮಾಡಿಕೊಳ್ಳಲು; ನಮ್ಮ ಸೇವೆಗಳ ಮೌಲ್ಯಮಾಪನ ಮಾಡಲು ಮತ್ತು ಅಭಿವೃಧ್ದಿಪಡಿಸಲು; ಹೊಸ ಸೇವೆಗಳು ಮತ್ತು ವೈಶಿಷ್ಟ್ಯಗಳ ಸಂಶೋಧನೆ ಮಾಡಲು, ಅಭಿವೃದ್ದಿಗೊಳಿಸಲು ಮತ್ತು ಪರೀಕ್ಷಿಸಲು; ಮತ್ತು ದೋಷಗಳನ್ನು ಬಗೆಹರಿಸುವ ಚಟುವಟಿಕೆಗಳನ್ನು ಮಾಡಲು ಸಹ ನಾವು ಹೊಂದಿರುವ ಮಾಹಿತಿಯನ್ನು ಬಳಸುತ್ತೇವೆ. ನೀವು ನಮ್ಮನ್ನು ಸಂಪರ್ಕಿಸಿದಾಗ ನಿಮಗೆ ಪ್ರತಿಕ್ರಿಯಿಸಲು ಸಹ ನಿಮ್ಮ ಮಾಹಿತಿಯನ್ನು ನಾವು ಬಳಸುತ್ತೇವೆ.
ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆ. ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆ ನಮ್ಮ ಸೇವೆಗಳ ಅಂತರ್ನಿಮಿತ ಭಾಗವಾಗಿದೆ. ನಮ್ಮಲ್ಲಿರುವ ಮಾಹಿತಿಯನ್ನು ಹಲವಾರು ಖಾತೆಗಳನ್ನು ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ನೋಡಲು ಮಾಹಿತಿಯನ್ನು ಉಪಯೋಗಿಸುತ್ತೇವೆ; ಹಾನಿಕಾರಕ ನಡತೆಗಳ ವಿರುದ್ದ ಹೋರಾಡುತ್ತೇವೆ; ಕೆಟ್ಟ ಅನುಭವಗಳ ವಿರುದ್ದ ಹಾಗೂ ಸ್ಪ್ಯಾಮ್ ವಿರುಧ್ದ ನಮ್ಮ ಬಳಕೆದಾರರನ್ನು ರಕ್ಷಿಸುತ್ತೇವೆ; ಮತ್ತು ಸುರಕ್ಷತೆಯನ್ನು ಪ್ರೋತ್ಸಾಹಿಸಲು, ಸುಭ್ರತೆಯನ್ನು ಮತ್ತು ಸಮಗ್ರತೆಯನ್ನು ಸೇವೆಗಳನ್ನು ನೀಡುವಾಗ ಮತ್ತು ಆನಂತರವೂ ಅನುಮಾನಾಸ್ಪದವಾದ ಚಟುವಟಿಕೆಗಳನ್ನು ಅಥವಾ ನಿಯಮಗಳು ಮತ್ತು ಪಾಲಿಸಿಗಳ ಉಲ್ಲಂಘನೆಯನ್ನು ತಡೆಯಲು ಮತ್ತು ನಮ್ಮ ಸೇವೆಯನ್ನು ಕಾನೂನುಬಧ್ದವಾಗಿ ಉಪಯೋಗಿಸಲಾಗುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಮಾಹಿತಿಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆಳಗಿನ ಕಾನೂನು, ನಮ್ಮ ಹಕ್ಕುಗಳು ಮತ್ತು ರಕ್ಷಣೆ ವಿಭಾಗವನ್ನು ನೋಡಿ.
ನಮ್ಮ ಸೇವೆಗಳು ಮತ್ತು Facebook ಕಂಪನಿಗಳ ಕುರಿತು ಸಂವಹನಗಳು. ನಮ್ಮ ಸೇವೆಗಳ ಕುರಿತು ನಿಮ್ಮೊಡನೆ ಸಂವಹನ ಮಾಡಲು ಮತ್ತು ನಿಮಗೆ ನಮ್ಮ ನಿಯಮಗಳು, ನೀತಿಗಳು ಹಾಗೂ ಇತರ ಪ್ರಮುಖ ನವೀಕರಣಗಳ ಕುರಿತು ತಿಳಿಸಲು ನಾವು ಹೊಂದಿರುವ ಮಾಹಿತಿಯನ್ನು ಉಪಯೋಗಿಸಿಕೊಳ್ಳುತ್ತೇವೆ. ನಮ್ಮ ಸೇವೆಗಳಿಗೆ ಮತ್ತು Facebook ಕಂಪನಿಗಳ ಸೇವೆಗಳಿಗೆ ನಾವು ಮಾರುಕಟ್ಟೆಯನ್ನು ಒದಗಿಸಬಹುದು.
ಯಾವುದೇ ಮೂರನೇ ವ್ಯಕ್ತಿಯ ಬ್ಯಾನರ್ ಜಾಹೀರಾತುಗಳಿಗೆ ಅವಕಾಶವಿಲ್ಲ. ನಾವು ಈಗಲೂ ಮೂರನೇ ವ್ಯಕ್ತಿಯ ಬ್ಯಾನರ್ ಜಾಹೀರಾತುಗಳಿಗೆ ನಮ್ಮ ಸೇವೆಗಳಲ್ಲಿ ಅವಕಾಶ ನೀಡುವುದಿಲ್ಲ. ಅವುಗಳನ್ನು ಪರಿಚಯಿಸುವ ಉದ್ದೇಶ ನಮಗಿಲ್ಲ, ಆದರೆ ನಾವು ಎಂದಾದರೂ ಅವಕಾಶ ನೀಡಿದರೆ, ನಾವು ಈ ಬಗೆಗೆ ಇರುವ ಗೌಪ್ಯತೆ ನೀತಿಯನ್ನು ನವೀಕರಿಸುತ್ತೇವೆ.
ವ್ಯವಹಾರ ಸಂವಹನಗಳು. WhatsApp ನ ಕ್ಯಾಟಲಾಗ್ಸ್ ಫಾರ್ ಬಿಸಿನೆಸ್‌ನಂತಹ ನಮ್ಮ ಸೇವೆಗಳನ್ನು ಬಳಸಿಕೊಂಡು ನಿಮಗೆ ಹಾಗೂ ಮೂರನೇ ವ್ಯಕ್ತಿಗಳಿಗೆ ವ್ಯವಹಾರಗಳಲ್ಲಿ ಪರಸ್ಪರ ಸಂವಹನ ನಡೆಸಲು ಮತ್ತು ಸಂವಹಿಸಲು ಸಕ್ರಿಯಗೊಳಿಸುತ್ತೇವೆ ಈ ಮೂಲಕ ನೀವು ಉತ್ಪನ್ನಗಳು ಮತ್ತು ಸೇವೆಗಳನ್ನು ಬ್ರೌಸ್ ಮಾಡಬಹುದು ಮತ್ತು ಆರ್ಡರ್‌ಗಳನ್ನು ಮಾಡಬಹುದು. ವ್ಯವಹಾರಗಳು ನಿಮಗೆ ವಹಿವಾಟು, ನೇಮಕಾತಿ ಮತ್ತು ಶಿಪ್ಪಿಂಗ್ ಅಧಿಸೂಚನೆಗಳು; ಉತ್ಪನ್ನ ಮತ್ತು ಸೇವಾ ನವೀಕರಣಗಳು; ಮತ್ತು ಮಾರ್ಕೆಟಿಂಗ್ ಕುರಿತು ಕಳುಹಿಸಬಹುದು. ಉದಾಹರಣೆಗೆ, ಮುಂಬರುವ ಪ್ರಯಾಣಕ್ಕಾಗಿ ನೀವು ಫ್ಲೈಟ್ ಸ್ಥಿತಿ ಮಾಹಿತಿ, ನೀವು ಖರೀದಿಯ ವಸ್ತುವಿನ ಯಾವುದಾದರೂ ರಶೀದಿ ಅಥವಾ ವಿತರಣೆಯನ್ನು ಮಾಡಿದಾಗ ಅಧಿಸೂಚನೆಯನ್ನು ನೀವು ಸ್ವೀಕರಿಸಬಹುದು. ನೀವು ವ್ಯವಹಾರದಿಂದ ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದಾಗ ಅದು ನಿಮಗೆ ಆಸಕ್ತಿದಾಯಕವಾಗಿದೆ ಎಂದೆನಿಸುವ ಕೊಡುಗೆಗಳನ್ನು ಹೊಂದಿರಬಹುದು. ನಿಮ್ಮ ಎಲ್ಲಾ ಸಂದೇಶಗಳಂತೆ ನೀವು ಸ್ಪ್ಯಾಮ್ ಅನುಭವವನ್ನು ಪಡೆಯುವುದನ್ನು ನಾವು ಬಯಸುವುದಿಲ್ಲ; ನೀವು ಈ ಸಂವಹನಗಳನ್ನು ನಿರ್ವಹಿಸಬಹುದು ಮತ್ತು ನಿಮ್ಮ ಆಯ್ಕೆಗಳನ್ನು ನಾವು ಗೌರವಿಸುತ್ತೇವೆ.
ನಮ್ಮ ಸೇವೆಗಳನ್ನು ನೀವು ಬಳಸುವಾಗ ಮತ್ತು ಸಂವಹನ ಮಾಡುವಾಗ ನಿಮ್ಮ ಮಾಹಿತಿಯನ್ನು ನೀವು ಹಂಚಿಕೊಳ್ಳುತ್ತೀರಿ ಮತ್ತು ನಾವು ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ನಮಗೆ ಸಹಾಯ ಆಗುವಂತಹ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ.
ನೀವು ಸಂವಹನ ಮಾಡಲು ಆಯ್ಕೆ ಮಾಡಿದವರಿಗೆ ನಿಮ್ಮ ಮಾಹಿತಿಯನ್ನು ಕಳುಹಿಸಿ. ನಮ್ಮ ಸೇವೆಗಳನ್ನು ಉಪಯೋಗಿಸಿಕೊಂಡು ಸಂವಹನ ಮಾಡಿದಾಗ ನೀವು ನಿಮ್ಮ ಮಾಹಿತಿಯನ್ನು (ಸಂದೇಶಗಳನ್ನೊಳಗೊಂಡಂತೆ) ಹಂಚಿಕೊಳ್ಳುವಿರಿ.
ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಮಾಹಿತಿ. ನಿಮ್ಮ ಫೋನ್ ಸಂಖ್ಯೆ, ಪ್ರೊಫೈಲ್ ಹೆಸರು ಮತ್ತು ಪೋಟೋ, "ಕುರಿತು" ಮಾಹಿತಿ, ಕೊನೆಯದಾಗಿ ನೋಡಿದ್ದರ ಕುರಿತಾಗಿ ಮಾಹಿತಿ ಮತ್ತು ಸಂದೇಶದ ಸ್ವೀಕೃತಿಗಳು ನಮ್ಮ ಸೇವೆಗಳನ್ನು ಬಳಸುವ ಎಲ್ಲರಿಗೂ ಲಭ್ಯವಾಗುತ್ತದೆ, ಹಾಗಾದರೂ, ನೀವು ಸಂವಹನ ನಡೆಸುವ ವ್ಯವಹಾರಗಳನ್ನು ಒಳಗೊಂಡಂತೆ ಇತರ ಬಳಕೆದಾರರಿಗೆ ಲಭ್ಯವಿರುವ ಕೆಲವು ಮಾಹಿತಿಯನ್ನು ನಿರ್ವಹಿಸಲು ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳನ್ನು ನೀವು ಕಾನ್ಫಿಗರ್ ಮಾಡಬಹುದು.
ನಿಮ್ಮ ಸಂಪರ್ಕಗಳು ಮತ್ತು ಇತರರು. ವ್ಯವಹಾರ ಒಳಗೊಂಡಂತೆ, ನೀವು ಯಾರ ಜೊತೆಗೆ ಸಂಪರ್ಕ ಹೊಂದುವಿರೋ ಅಂತಹ ಬಳಕೆದಾರರು ನಿಮ್ಮ ಮಾಹಿತಿಯನ್ನು (ನಿಮ್ಮ ಫೋನ್ ನಂಬರ್ ಒಳಗೊಂಡಂತೆ ಅಥವಾ ಸಂದೇಶಗಳನ್ನು) ಮರುಹಂಚಿಕೆಯನ್ನು ನಮ್ಮ ಸೇವೆಯನ್ನು ಉಪಯೋಗಿಸಿಕೊಂಡು/ಉಪಯೋಗಿಸಿಕೊಳ್ಳದೆಯೇ ಮಾಡಿಕೊಳ್ಳಬಹುದು. ನಮ್ಮ ಸೇವೆಗಳಲ್ಲಿ ನೀವು ಯಾರೊಂದಿಗೆ ಸಂವಹನ ನಡೆಸುತ್ತೀರಿ ಎಂಬುದು ಮತ್ತು ನೀವು ಹಂಚಿಕೊಳ್ಳುವ ಕೆಲವು ಮಾಹಿತಿಯನ್ನು ನಿರ್ವಹಿಸಲು ನಮ್ಮ ಸೇವೆಗಳಲ್ಲಿನ ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳು ಮತ್ತು ''ಬ್ಲಾಕ್'' ವೈಶಿಷ್ಟ್ಯವನ್ನು ನೀವು ಬಳಸಬಹುದು.
WhatsApp ಮೂಲಕ ವ್ಯವಹಾರಗಳು. ನಾವು ವ್ಯವಹಾರಗಳಿಗೆ ನಿರ್ದಿಷ್ಟ ಸೇವೆಗಳನ್ನು ಒದಗಿಸುತ್ತೇವೆ ಹೇಗೆಂದರೆ ನಾವು ನಮ್ಮ ಸೇವೆಗಳನ್ನು ಉಪಯೋಗಿಸಿಕೊಳ್ಳುವವರಿಗೆ ಅದರ ಕುರಿತಾಗಿ ಮೆಟ್ರಿಕ್ಸ್‌ಗಳನ್ನು ಒದಗಿಸುತ್ತೇವೆ.
ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು. ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರುಕಟ್ಟೆಗೆ ಸಹಾಯ ಮಾಡಲು ನಾವು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ಮತ್ತು ಇತರ Facebook ಕಂಪನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ತಾಂತ್ರಿಕ ಮೂಲಸೌಕರ್ಯ ಒದಗಿಸುವಿಕೆ, ವಿತರಣೆ ಮತ್ತು ಇತರ ವ್ಯವಸ್ಥೆ; ನಮ್ಮ ಸೇವೆಗಳ ಕುರಿತು ಪ್ರಚಾರ ಮಾಡುವಿಕೆ; ನಮಗಾಗಿ ಸಮೀಕ್ಷೆ ಮತ್ತು ಸಂಶೋಧನೆಯನ್ನು ನಡೆಸುವಿಕೆ; ಬಳಕೆದಾರರ ಮತ್ತು ಇತರರ ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ರಕ್ಷಿಸುವಿಕೆ; ಮತ್ತು ಗ್ರಾಹಕರ ಸೇವೆಗೆ ಸಹಾಯ ಮಾಡುವಿಕೆಯಂತಹ ನಮ್ಮ ಸೇವೆಗಳನ್ನು ಬೆಂಬಲಿಸಲು ನಾವು ಈ ಕಂಪನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ನಾವು ಮಾಹಿತಿಯನ್ನು ಮೂರನೇ ವ್ಯಕ್ತಿ ಸೇವಾ ಪೂರೈಕೆದಾರರು ಮತ್ತು ಇತರ Facebook ನ ಕಂಪನಿಗಳೊಂದಿಗೆ ನಿಮ್ಮ ಮಾಹಿತಿಯನ್ನು ಈ ಸಾಮರ್ಥ್ಯದಲ್ಲಿ ಹಂಚಿಕೊಂಡಾಗ ಅವರು ನಿಮ್ಮ ಮಾಹಿತಿಯನ್ನು ನಮ್ಮ ಪರವಾಗಿ ನಾವು ನೀಡಿದ ಸೂಚನೆಗಳಿಗೆ ಮತ್ತು ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುವ ಅಗತ್ಯವಿರುತ್ತದೆ.
ಮೂರನೇ ವ್ಯಕ್ತಿಯ ಸೇವೆಗಳು. ನೀವು ಅಥವಾ ಇತರರು ನಮ್ಮ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟ ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ಇತರ Facebook ಕಂಪನಿ ಉತ್ಪನ್ನಗಳು ಬಳಸುವಾಗ, ಆ ಮೂರನೇ ವ್ಯಕ್ತಿಯ ಸೇವೆಗಳು ನೀವು ಅಥವಾ ಇತರರು ಅವರೊಂದಿಗೆ ಏನು ಹಂಚಿಕೊಳ್ಳುತ್ತೀರಿ ಎಂಬುದರ ಕುರಿತು ಮಾಹಿತಿಯನ್ನು ಪಡೆಯಬಹುದು. ಉದಾಹರಣೆಗೆ, ನಮ್ಮ ಸೇವೆಗಳೊಂದಿಗೆ (iCloud ಅಥವಾ Google Drive ನಂತಹ) ಸಂಯೋಜಿಸಲ್ಪಟ್ಟ ಡೇಟಾ ಬ್ಯಾಕಪ್ ಸೇವೆಯನ್ನು ನೀವು ಬಳಸಿದರೆ, ನೀವು ಅವರೊಂದಿಗೆ ಹಂಚಿಕೊಳ್ಳುವ ನಿಮ್ಮ WhatsApp ಸಂದೇಶಗಳಂತಹ ಮಾಹಿತಿಯನ್ನು ಅವರು ಸ್ವೀಕರಿಸುತ್ತಾರೆ. ಒಂದೊಮ್ಮೆ ನೀವು ಥರ್ಡ್ ಪಾರ್ಟಿಯ ಜೊತೆಗೆ ಪರಸ್ಪರ ಸೇವೆಯನ್ನು ಪಡೆದಾಗ ಅಥವಾ ನಮ್ಮ ಸೇವೆಯ ಜೊತೆಗೆ ಲಿಂಕ್ ಮಾಡಲಾದ Facebook ಕಂಪನಿಯ ಉತ್ಪನ್ನಗಳನ್ನು ಬಳಸಿದಾಗ, ಹೇಗೆಂದರೆ ಥರ್ಡ್ ಪಾರ್ಟಿ ವೇದಿಕೆಯನ್ನು ಉಪಯೋಗಿಸಿ, ನೀವು in-app player ಉಪಯೋಗಿಸಿ ವಿಷಯಗಳನ್ನು ನೋಡಿದಾಗ ನಿಮ್ಮ ಬಗೆಗಿನ ಮಾಹಿತಿ ಅಂದರೆ ನಿಮ್ಮ IP ಅಡ್ರೆಸ್ ಮತ್ತು ನೀವು WhatsApp ಬಳಕೆದಾರರೆಂದು, ಅಥವಾ Facebook ಕಂಪನಿಯ ಉತ್ಪನ್ನಗಳನ್ನು ಉಪಯೋಗಿಸುವಿರೆಂಬ ಮಾಹಿತಿಯು ಥರ್ಡ್ ಪಾರ್ಟಿಗಳಿಗೆ ಒದಗಿಸಲಾಗುವುದು. ನೀವು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ಇತರ Facebook ಕಂಪನಿ ಉತ್ಪನ್ನಗಳನ್ನು ಬಳಸುವಾಗ, ಅವರ ಸ್ವಂತ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಆ ಸೇವೆಗಳು ಮತ್ತು ಉತ್ಪನ್ನಗಳ ಮೇಲಿನ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
Facebook ಕಂಪನಿಗಳು ನ ಭಾಗವಾಗಿ, WhatsApp ಮಾಹಿತಿಯನ್ನು ಪಡೆಯುತ್ತದೆ, ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತದೆ ( ಇಲ್ಲಿ ನೋಡಿ), ಇತರ Facebook ಕಂಪನಿಗಳು. ನಾವು ಅವರಿಂದ ಪಡೆದ ಮಾಹಿತಿಯನ್ನು ನಾವು ಬಳಸಬಹುದು, ಮತ್ತು ಸೇವೆಗಳನ್ನು Facebook ಕಂಪನಿ ಉತ್ಪನ್ನಗಳನ್ನು ಸೇರಿದಂತೆ ನಮ್ಮ ಸೇವೆಗಳನ್ನು ಮತ್ತು ಅವರ ಕೊಡುಗೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡಲು ನಾವು ಅವರೊಂದಿಗೆ ಹಂಚಿಕೊಳ್ಳುವ ಮಾಹಿತಿಯನ್ನು ಅವರು ಬಳಸಬಹುದು. ಇದು ಒಳಗೊಂಡಿರುತ್ತದೆ:
ಅವರ ಗೌಪ್ಯತೆ ನೀತಿಗಳನ್ನು ಪರಿಶೀಲಿಸುವ ಮೂಲಕ ಇತರ Facebook ಕಂಪನಿಗಳು ಮತ್ತು ಅದರ ಗೌಪ್ಯತೆ ಅಭ್ಯಾಸಗಳ ಕುರಿತು ಇನ್ನಷ್ಟು ತಿಳಿಯಿರಿ.
ನಮ್ಮ ಎಲ್ಲ ಅಥವಾ ಕೆಲವು ಸ್ವತ್ತುಗಳ ವಿಲೀನ, ಸ್ವಾಧೀನ, ಪುನರ್ರಚನೆ, ದಿವಾಳಿತನ ಅಥವಾ ಮಾರಾಟದಲ್ಲಿ ನಾವು ಭಾಗಿಯಾಗಿದ್ದರೆ, ನಾವು ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಅನ್ವಯವಾಗುವ ಮಾಹಿತಿ ಸಂರಕ್ಷಣಾ ಕಾನೂನುಗಳಿಗೆ ಅನುಸಾರವಾಗಿ ವಹಿವಾಟಿಗೆ ಸಂಬಂಧಿಸಿದಂತೆ ಉತ್ತರಾಧಿಕಾರಿ ಘಟಕಗಳು ಅಥವಾ ಹೊಸ ಮಾಲೀಕರೊಂದಿಗೆ ಹಂಚಿಕೊಳ್ಳುತ್ತೇವೆ.
ನಮ್ಮ ಇನ್-ಆಪ್ ವಿನಂತಿ ಖಾತೆ ಮಾಹಿತಿ ವೈಶಿಷ್ಟ್ಯವನ್ನು ಬಳಸಿಕೊಂಡು ನಿಮ್ಮ ಮಾಹಿತಿಯನ್ನು ನೀವು ಪ್ರವೇಶಿಸಬಹುದು ಅಥವಾ ಪೋರ್ಟ್ ಮಾಡಬಹುದು (ಸೆಟ್ಟಿಂಗ್‌ಗಳು > ಖಾತೆ ಅಡಿಯಲ್ಲಿ ಲಭ್ಯವಿದೆ). iPhone ಬಳಕೆದಾರರಿಗಾಗಿ, ನಮ್ಮ ಮಾಹಿತಿಯನ್ನು ಪ್ರವೇಶಿಸುವುದು , ನಿರ್ವಹಿಸುವುದು , ಮತ್ತು ಅಳಿಸುವುದು ಮುಂತಾದ ವಿಷಯಗಳ ಮಾಹಿತಿಯನ್ನು ನಮ್ಮ iPhone ಸಹಾಯ ಕೇಂದ್ರದ ಲೇಖನಗಳು ಮೂಲಕ ಪಡೆಯಬಹುದು. Android ಬಳಕೆದಾರರಿಗಾಗಿ, ನಮ್ಮ ಮಾಹಿತಿಯನ್ನು ಪ್ರವೇಶಿಸುವುದು , ನಿರ್ವಹಿಸುವುದು , ಮತ್ತು ಅಳಿಸುವುದು ಮುಂತಾದ ವಿಷಯಗಳ ಮಾಹಿತಿಯನ್ನು ನಮ್ಮ Android ಸಹಾಯ ಕೇಂದ್ರದ ಲೇಖನಗಳು ಮೂಲಕ ಪಡೆಯಬಹುದು.
ನಮ್ಮ ಸೇವೆಗಳನ್ನು ಒದಗಿಸುವುದು, ಅಥವಾ ಕಾನೂನುಬದ್ಧ ಕಟ್ಟುಪಾಡುಗಳನ್ನು ಪಾಲಿಸುವುದು, ನಮ್ಮ ನಿಯಮಗಳ ಜಾರಿಗೊಳಿಸುವುದು ಮತ್ತು ಉಲ್ಲಂಘನೆಯನ್ನು ತಡೆಗಟ್ಟುವುದು, ಅಥವಾ ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವುದು ಅಥವಾ ರಕ್ಷಿಸುವುದು, ನಾವು ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಆಸ್ತಿ ಮತ್ತು ಬಳಕೆದಾರರು ಸೇರಿದಂತೆ ಈ ಗೌಪ್ಯತೆ ನೀತಿಯಲ್ಲಿ ಗುರುತಿಸಲಾದ ಉದ್ದೇಶಗಳಿಗಾಗಿ ಅಗತ್ಯವಿರುವವರೆಗೆ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಶೇಖರಣಾ ಅವಧಿಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ, ಅದು ಮಾಹಿತಿಯ ಸ್ವರೂಪ, ಅದನ್ನು ಏಕೆ ಸಂಗ್ರಹಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ ಸಂಬಂಧಿತ ಕಾನೂನು ಅಥವಾ ಕಾರ್ಯಾಚರಣೆಯ ಧಾರಣ ಅಗತ್ಯಗಳು ಮತ್ತು ಕಾನೂನು ಬಾಧ್ಯತೆಗಳಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ನಿಮ್ಮ ಮಾಹಿತಿಯನ್ನು ಮತ್ತಷ್ಟು ನಿರ್ವಹಿಸಲು, ಬದಲಾಯಿಸಲು, ಮಿತಿಗೊಳಿಸಲು ಅಥವಾ ಅಳಿಸಲು ನೀವು ಬಯಸಿದರೆ, ನೀವು ಅದನ್ನು ಈ ಕೆಳಗಿನ ಪರಿಕರಗಳ ಮೂಲಕ ಮಾಡಬಹುದು:
ಸೇವೆಗಳ ಸೆಟ್ಟಿಂಗ್‌ಗಳು. ಇತರ ಬಳಕೆದಾರರಿಗೆ ಲಭ್ಯವಿರುವ ಕೆಲವು ಮಾಹಿತಿಯನ್ನು ನಿರ್ವಹಿಸಲು ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು. ನಿಮ್ಮ ಸಂಪರ್ಕಗಳು, ಗುಂಪುಗಳು ಮತ್ತು ಪ್ರಸಾರ ಪಟ್ಟಿಗಳನ್ನು ನೀವು ನಿರ್ವಹಿಸಬಹುದು, ಅಥವಾ ನೀವು ಸಂವಹನ ನಡೆಸುವವರೊಂದಿಗೆ ಬಳಕೆದಾರರನ್ನು ನಿರ್ವಹಿಸಲು ನಮ್ಮ "ಬ್ಲಾಕ್" ವೈಶಿಷ್ಟ್ಯವನ್ನು ಬಳಸಬಹುದು.
ನಿಮ್ಮ ಮೊಬೈಲ್ ಫೋನ್ ಸಂಖ್ಯೆ, ಪ್ರೊಫೈಲ್ ಹೆಸರು ಮತ್ತು ಚಿತ್ರವನ್ನು ಬದಲಾಯಿಸುವುದು ಮತ್ತು "ಕುರಿತು" ಮಾಹಿತಿ . ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀವು ಬದಲಾಯಿಸಿದರೆ ನೀವು ಅದನ್ನು ನಮ್ಮ ಅಪ್ಲಿಕೇಶನ್‌ನಲ್ಲಿನ ಬದಲಾವಣೆ ಸಂಖ್ಯೆ ವೈಶಿಷ್ಟ್ಯವನ್ನು ಬಳಸಿಕೊಂಡು ನವೀಕರಿಸಬೇಕು ಮತ್ತು ನಿಮ್ಮ ಖಾತೆಯನ್ನು ನಿಮ್ಮ ಹೊಸ ಮೊಬೈಲ್ ಫೋನ್ ಸಂಖ್ಯೆಗೆ ವರ್ಗಾಯಿಸಬೇಕು. ನಿಮ್ಮ ಪ್ರೊಫೈಲ್ ಹೆಸರು, ಪ್ರೊಫೈಲ್ ಚಿತ್ರ ಮತ್ತು "ಕುರಿತು" ಮಾಹಿತಿಯನ್ನು ನೀವು ಯಾವ ಸಮಯದಲ್ಲಾದರೂ ಬದಲಾಯಿಸಬಹುದು.
ನಿಮ್ಮ WhatsApp ಖಾತೆಯನ್ನು ಅಳಿಸುವುದು . ನಮ್ಮ ಅಪ್ಲಿಕೇಶನ್‌ನಲ್ಲಿ ನೀವು ನನ್ನ ಖಾತೆ ವೈಶಿಷ್ಟ್ಯವನ್ನು ಅಳಿಸಿ ಎಂಬುದನ್ನು ಬಳಸಿಕೊಂಡು ನೀವು ಯಾವುದೇ ಸಮಯದಲ್ಲಿ ನಿಮ್ಮ WhatsApp ಖಾತೆಯನ್ನು ಅಳಿಸಬಹುದು (ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ನಿಮ್ಮ ಮಾಹಿತಿಯನ್ನು ನಾವು ಬಳಸುವುದಕ್ಕೆ ನಿಮ್ಮ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲು ನೀವು ಬಯಸಿದರೆ ಸೇರಿದಂತೆ). ನಿಮ್ಮ WhatsApp ಖಾತೆಯನ್ನು ನೀವು ಅಳಿಸಿದಾಗ, ನಿಮ್ಮ ವಿತರಿಸದ ಸಂದೇಶಗಳನ್ನು ನಮ್ಮ ಸರ್ವರ್‌ಗಳಿಂದ ಅಳಿಸಲಾಗುತ್ತದೆ ಮತ್ತು ನಿಮ್ಮ ಇತರ ಯಾವುದೇ ಮಾಹಿತಿಯನ್ನು ನಾವು ಇನ್ನು ಮುಂದೆ ನಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ಒದಗಿಸಬೇಕಾಗಿಲ್ಲ. ನಿಮ್ಮ ಖಾತೆಯನ್ನು ಅಳಿಸುವುದರಿಂದ, ಉದಾಹರಣೆಗೆ, ನಿಮ್ಮ ಖಾತೆ ಮಾಹಿತಿ ಮತ್ತು ಪ್ರೊಫೈಲ್ ಫೋಟೋವನ್ನು ಅಳಿಸುತ್ತದೆ, ಎಲ್ಲಾ WhatsApp ಗುಂಪುಗಳಿಂದ ನಿಮ್ಮನ್ನು ಅಳಿಸುತ್ತದೆ ಮತ್ತು ನಿಮ್ಮ WhatsApp ಸಂದೇಶ ಇತಿಹಾಸವನ್ನು ಅಳಿಸುತ್ತದೆ. ನಮ್ಮ ಅಪ್ಲಿಕೇಶನ್‌ನಲ್ಲಿರುವ ಇನ್-ಆಪ್ ಡೀಲೀಟ್ ಮೈ ಅಕೌಂಟ್ ಫೀಚರ್ ಬಳಸದೆ ನಿಮ್ಮ WhatsApp ಖಾತೆಯನ್ನು ನಿಮ್ಮ ಸಾಧನದಿಂದ ಮಾತ್ರ ತೆಗೆದುಹಾಕಿದರೆ ನಿಮ್ಮ ಮಾಹಿತಿಯು ನಮ್ಮ ಬಳಿ ಬಹಳ ದೀರ್ಘಕಾಲದವರೆಗೆ ಶೇಖರಣೆಯಲ್ಲಿ ಸಂಗ್ರಹವಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನದಲ್ಲಿರಿಸಿಕೊಂಡಿರಿ. ನಿಮ್ಮ ಖಾತೆಯನ್ನು ನೀವು ಅಳಿಸಿದಾಗ, ಅದು ನೀವು ರೂಪಿಸಿದ ಗುಂಪುಗಳಿಗೆ ಸಂಬಂಧಿಸಿದ ನಿಮ್ಮ ಮಾಹಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಅಥವಾ ಇತರ ಬಳಕೆದರರ ಮಾಹಿತಿ ನಿಮಗೆ ಸಂಬಂಧಿಸಿದಂತೆ, ಹೇಗೆಂದರೆ ಅವರ ಸಂದೇಶಗಳ ನಕಲಾಗಲಿ ಅಥವಾ ನೀವು ಅವರಿಗೆ ಕಳುಹಿಸಿದ ನಕಲಾಗಲಿ ಯಾವುದರ ಮೇಲೆಯೂ ಪರಿಣಾಮ ಬೀರುವುದಿಲ್ಲ ಎಂಬುದನ್ನು ದಯವಿಟ್ಟು ನೆನೆಪಿನಲ್ಲಿರಿಸಿಕೊಳ್ಳಿ.
ನಿಮ್ಮ ಖಾತೆಯನ್ನು ಹೇಗೆ ಅಳಿಸುವುದು ಎಂಬುದರ ಕುರಿತು, ನಮ್ಮ ಮಾಹಿತಿ ಅಳಿಸುವಿಕೆ ಮತ್ತು ಮಾಹಿತಿ ಉಳಿಸಿಕೊಳ್ಳುವ ಅಭ್ಯಾಸಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ಮೇಲಿನ ಈ ಗೌಪ್ಯತೆ ನೀತಿಯ "ನಾವು ಸಂಗ್ರಹಿಸುವ ಮಾಹಿತಿ" ವಿಭಾಗದಲ್ಲಿ ವಿವರಿಸಿದಂತೆ ನಿಮ್ಮ ಮಾಹಿತಿಯನ್ನು ನಾವು ಪ್ರವೇಶಿಸುತ್ತೇವೆ, ಸಂರಕ್ಷಿಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ, ನಾವು ಉತ್ತಮ ನಂಬಿಕೆ ಹೊಂದಿದ್ದರೆ, ಇದು ಅಗತ್ಯವಿರುತ್ತದೆ: (ಎ) ಅನ್ವಯವಾಗುವ ಕಾನೂನು ಅಥವಾ ನಿಬಂಧನೆಗಳು, ಕಾನೂನು ಪ್ರಕ್ರಿಯೆ ಅಥವಾ ಸರ್ಕಾರದ ವಿನಂತಿಗಳಿಗೆ ಅನುಸಾರವಾಗಿ ಪ್ರತಿಕ್ರಿಯಿಸುವುದು; (ಬಿ) ಸಂಭಾವ್ಯ ಉಲ್ಲಂಘನೆಗಳ ತನಿಖೆ ಸೇರಿದಂತೆ ನಮ್ಮ ನಿಯಮಗಳು ಮತ್ತು ಅನ್ವಯವಾಗುವ ಯಾವುದೇ ನಿಯಮಗಳು ಮತ್ತು ನೀತಿಗಳನ್ನು ಜಾರಿಗೊಳಿಸುವುದು; (ಸಿ) ಪತ್ತೆ ಮಾಡುವುದು, ತನಿಖೆ ಮಾಡುವುದು, ತಡೆಗಟ್ಟುವುದು ಅಥವಾ ವಿಳಾಸದ ವಂಚನೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆ ಅಥವಾ ಭದ್ರತೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು; ಅಥವಾ (ಡಿ) ಸಾವು ಅಥವಾ ಸನ್ನಿಹಿತ ದೈಹಿಕ ಹಾನಿಯನ್ನು ತಡೆಗಟ್ಟುವುದು ಸೇರಿದಂತೆ ನಮ್ಮ ಬಳಕೆದಾರರು, WhatsApp, ಇತರ Facebook ಕಂಪನಿಗಳು ಅಥವಾ ಇತರರ ಹಕ್ಕುಗಳು, ಆಸ್ತಿ ಮತ್ತು ಸುರಕ್ಷತೆಯನ್ನು ರಕ್ಷಿಸುವುದು.
WhatsApp ಮಾಹಿತಿಯನ್ನು ಜಾಗತಿಕವಾಗಿ ಹಂಚಿಕೊಳ್ಳಲಾಗುತ್ತದೆ, ಆಂತರಿಕವಾಗಿ Facebook ಕಂಪನಿಗಳ ಒಳಗೆ ಮತ್ತು ಬಾಹ್ಯವಾಗಿ ನಮ್ಮ ಪಾಲುದಾರರೊಂದಿಗೆ ಮತ್ತು ನಮ್ಮ ಗೌಪ್ಯತಾ ನೀತಿಯ ಪ್ರಕಾರವಾಗಿ ಪ್ರಪಂಚದಾದ್ಯಂತ ನೀವು ಸಂಪರ್ಕಿಸುವ ಮತ್ತು ಹಂಚಿಕೊಳ್ಳುವವರೊಂದಿಗೆ ಹಂಚುತ್ತೇವೆ. ನಿಮ್ಮ ಮಾಹಿತಿಯನ್ನು, ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ಗೆ ವರ್ಗಾಯಿಸಬಹುದು ಅಥವಾ ರವಾನಿಸಬಹುದು, ಅಥವಾ ಸಂಗ್ರಹಿಸಬಹುದು ಮತ್ತು ಸಂಸ್ಕರಿಸಬಹುದು; Facebook ಕಂಪನಿಗಳ ಅಂಗಸಂಸ್ಥೆಗಳು ಮತ್ತು ಪಾಲುದಾರರು ಅಥವಾ ನಮ್ಮ ಸೇವಾ ಪೂರೈಕೆದಾರರು ಇರುವ ದೇಶಗಳು ಅಥವಾ ಪ್ರಾಂತ್ಯಗಳು; ಅಥವಾ ಈ ಗೌಪ್ಯತೆ ನೀತಿಯಲ್ಲಿ ವಿವರಿಸಿದಂತೆ ಉದ್ದೇಶಗಳಿಗಾಗಿ ನೀವು ವಾಸಿಸುವ ಸ್ಥಳದಿಂದ ಹೊರಗೆ ನಮ್ಮ ಸೇವೆಗಳನ್ನು ಒದಗಿಸುವ ಯಾವುದೇ ದೇಶ ಅಥವಾ ಪ್ರದೇಶಕ್ಕೆ ರವಾನಿಸಬಹುದು. WhatsApp ಯುನೈಟೆಡ್ ಸ್ಟೇಟ್ಸ್ ಸೇರಿದಂತೆ Facebook ನ ಜಾಗತಿಕ ಮೂಲಸೌಕರ್ಯ ಮತ್ತು ಡೇಟಾ ಕೇಂದ್ರಗಳನ್ನು ಬಳಸುತ್ತದೆ. ನಮ್ಮ ನಿಯಮಗಳಲ್ಲಿ ಸೂಚಿಸಲಾದ ಜಾಗತಿಕ ಸೇವೆಗಳನ್ನು ಒದಗಿಸಲು ಈ ವರ್ಗಾವಣೆಗಳು ಅವಶ್ಯಕ. ನಿಮ್ಮ ಮಾಹಿತಿಯನ್ನು ವರ್ಗಾಯಿಸಿದ ದೇಶಗಳು ಅಥವಾ ಪ್ರಾಂತ್ಯಗಳು ನಿಮ್ಮ ತಾಯ್ನಾಡಿನಲ್ಲಿ ಅಥವಾ ಪ್ರಾಂತ್ಯದಲ್ಲಿ ನೀವು ಹೊಂದಿದ್ದಕ್ಕಿಂತ ವಿಭಿನ್ನ ಗೌಪ್ಯತೆ ಕಾನೂನುಗಳು ಮತ್ತು ರಕ್ಷಣೆಗಳನ್ನು ಹೊಂದಿರಬಹುದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ.
ನಾವು ನಮ್ಮ ಗೌಪ್ಯತೆ ನೀತಿಯನ್ನು ತಿದ್ದುಪಡಿ ಮಾಡಬಹುದು ಅಥವಾ ನವೀಕರಿಸಬಹುದು. ಈ ಗೌಪ್ಯತಾ ನೀತಿಯನ್ನು ಸೂಕ್ತವಾಗಿ ಕಂಡಂತೆ ತಿದ್ದುಪಡಿಯನ್ನು ಮಾಡಿ ಅದರ ಸೂಚನೆಯನ್ನು ನಿಮಗೆ ಒದಗಿಸುತ್ತೇವೆ. ಮತ್ತು ಈ ನವೀಕರಣಗಳು "ಲಾಸ್ಟ್ ಮಾಡಿಫೈಯ್ಡ್" (ಕೊನೆಯ ಬಾರಿಗೆ ತಿದ್ದುಪಡಿಯಾಗಿರುವ ದಿನಾಂಕ) ದಿನಾಂಕವನ್ನು ಗೌಪ್ಯತಾ ನೀತಿಯ ಮೇಲುಭಾಗದಲ್ಲಿ ನೀಡಲಾಗಿರುತ್ತದೆ. ದಯವಿಟ್ಟು ಕಾಲಕಾಲಕ್ಕೆ ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿ.
ಕ್ಯಾಲಿಫೋರ್ನಿಯಾ ನಿವಾಸಿಗಳು ತಮ್ಮ ಹಕ್ಕುಗಳ ಬಗ್ಗೆ 2018 ರ ಕ್ಯಾಲಿಫೋರ್ನಿಯಾ ಗ್ರಾಹಕ ಗೌಪ್ಯತೆ ಕಾಯ್ದೆಯಡಿ ತಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸುವುದು ಸೇರಿದಂತೆ ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಇನ್ನಷ್ಟು ತಿಳಿದುಕೊಳ್ಳಬಹುದು.
ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಬ್ರೆಜಿಲಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ಕಾನೂನಿನಡಿಯಲ್ಲಿ ನಿಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸುವುದು ಸೇರಿದಂತೆ ನಿಮ್ಮ ಹಕ್ಕುಗಳ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಬಹುದು.
ನಮ್ಮ ಗೌಪ್ಯತೆ ನೀತಿಯ ಕುರಿತು ನೀವು ಪ್ರಶ್ನೆಗಳನ್ನು ಅಥವಾ ಸಮಸ್ಯೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ .
WhatsApp LLC
ಗೌಪ್ಯತೆ ನೀತಿ
1601 Willow Road
Menlo Park, California 94025
United States of America