ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
  • ಆ್ಯಪ್‌ಗಳು
    • ಕಾಲಿಂಗ್ಮೆಸೇಜ್ ಕಳುಹಿಸುವಿಕೆಗ್ರೂಪ್‌ಗಳುಸ್ಟೇಟಸ್‌ಚಾನಲ್‌ಗಳುMeta AIಸುರಕ್ಷತೆ
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯಾಪಾರಕ್ಕಾಗಿ
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2025 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಕಾಲಿಂಗ್

      ಧ್ವನಿ ಮತ್ತು ವೀಡಿಯೊದೊಂದಿಗೆ ಸಂಪರ್ಕದಲ್ಲಿರಿ.

    • ಮೆಸೇಜ್ ಕಳುಹಿಸುವಿಕೆ

      ಅದನ್ನು ಸ್ಟಿಕ್ಕರ್‌ಗಳು, ಧ್ವನಿ, GIF ಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • ಗ್ರೂಪ್‌ಗಳು

      ನೀವು ಗುಂಪುಗಳಲ್ಲಿ ಕನೆಕ್ಟ್ ಮಾಡಬೇಕಾದ ಮೆಸೇಜ್ ಕಳುಹಿಸುವಿಕೆಯ ಫೀಚರ್‌ಗಳು.

    • ಚಾನಲ್‌ಗಳು

      ನೀವು ಕಾಳಜಿವಹಿಸುವ ವಿಷಯಗಳ ಕುರಿತು ಅಪ್‌ಡೇಟ್‌ ಆಗಿರಿ.

    • Meta AI

      WhatsApp ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ವಿಷಯದೊಂದಿಗೆ ಸಹಾಯ ಪಡೆಯಿರಿ.

    • ಸ್ಟೇಟಸ್‌

      ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಟಿಪ್ಪಣಿಗಳೊಂದಿಗೆ ನಿಮ್ಮ ಪ್ರತಿ ದಿನವನ್ನು ಹಂಚಿಕೊಳ್ಳಿ.

    • ಸುರಕ್ಷತೆ

      ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ರಕ್ಷಣಾ ಪದರಗಳು.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಆ್ಯಪ್‌‌ಗಳು
ಲಾಗ್ ಇನ್ಡೌನ್‌ಲೋಡ್

ಬೌದ್ಧಿಕ ಆಸ್ತಿ ನೀತಿ: ನಿಮ್ಮ ಹಕ್ಕುಸ್ವಾಮ್ಯಗಳು ಮತ್ತು ಟ್ರೇಡ್‌ಮಾರ್ಕ್‌ಗಳು

ಪರಿವಿಡಿ

  • ಹಕ್ಕುಸ್ವಾಮ್ಯ‌
  • ಟ್ರೇಡ್‌ಮಾರ್ಕ್‌
  • ಉಲ್ಲಂಘನೆ ನೀತಿಯ ಪುನರಾವರ್ತನೆ
  • ಮೇಲ್ಮನವಿಗಳು

WhatsApp LLC (ನೀವು ಯುಕೆಯಲ್ಲಿ ಅಥವಾ ಯುರೋಪಿಯನ್ ಪ್ರದೇಶದ ಹೊರಗೆ ವಾಸಿಸುತ್ತಿದ್ದರೆ) ಮತ್ತು WhatsApp Ireland Limited (ನೀವು ಯುರೋಪಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ) (ಒಟ್ಟಾರೆಯಾಗಿ "WhatsApp," "ನಮ್ಮ," "ನಾವು," ಅಥವಾ "ನಮಗೆ"), ಜನರಿಗೆ ಮತ್ತು ಸಂಸ್ಥೆಗಳಿಗೆ ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ಬದ್ಧವಾಗಿದೆ. ನಮ್ಮ ಆ್ಯಪ್‌ಗಳು, ಸೇವೆಗಳು, ಫೀಚರ್‌ಗಳು, ಸಾಫ್ಟ್‌ವೇರ್ ಅಥವಾ ವೆಬ್‌ಸೈಟ್ ಅನ್ನು (ಒಟ್ಟಿಗೆ, "ಸೇವೆಗಳು") ಇನ್‌ಸ್ಟಾಲ್ ಮಾಡುವ, ಪ್ರವೇಶಿಸುವ ಅಥವಾ ಬಳಸುವ ಮೂಲಕ ನಮ್ಮ ಬಳಕೆದಾರರು ನಮ್ಮ ಸೇವಾ ನಿಯಮಗಳಿಗೆ ("ನಿಯಮಗಳು") ಒಪ್ಪುತ್ತಾರೆ. ನಮ್ಮ ಬಳಕೆದಾರರು ತಮ್ಮ ಹಕ್ಕುಸ್ವಾಮ್ಯಗಳು ಮತ್ತು ಟ್ರೇಡ್‌ಮಾರ್ಕ್‌ಗಳನ್ನು ಒಳಗೊಂಡಂತೆ ನಮ್ಮ ಸೇವೆಗಳನ್ನು ಬಳಸುವಾಗ ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವುದಕ್ಕೆ ನಮ್ಮ ನಿಯಮಗಳನ್ನು ಅನುಮತಿಸುವುದಿಲ್ಲ.

ನಮ್ಮ ಗೌಪ್ಯತೆ ನೀತಿಯಲ್ಲಿ ಹೆಚ್ಚು ವಿವರವಾಗಿ ವಿವರಿಸಿದಂತೆ, ನಮ್ಮ ಸೇವೆಗಳನ್ನು ಒದಗಿಸುವ ಸಾಮಾನ್ಯ ಹಾದಿಯಲ್ಲಿ ನಾವು ನಮ್ಮ ಬಳಕೆದಾರರ ಸಂದೇಶಗಳನ್ನು ಉಳಿಸಿಕೊಳ್ಳುವುದಿಲ್ಲ. ಆದಾಗ್ಯೂ, ನಮ್ಮ ಬಳಕೆದಾರರ ಖಾತೆಯ ಮಾಹಿತಿಯ ಭಾಗವಾಗಿ ಸೇರಿಸಲು ಅವರು ನಿರ್ಧರಿಸಿದರೆ ನಮ್ಮ ಬಳಕೆದಾರರ ಪ್ರೊಫೈಲ್ ಚಿತ್ರ, ಪ್ರೊಫೈಲ್ ಹೆಸರು ಅಥವಾ ಸಂದೇಶ ಬಗ್ಗೆ ಸೇರಿದಂತೆ ನಮ್ಮ ಖಾತೆಯ ಮಾಹಿತಿ, ಹಾಗೆಯೇ ಚಾನಲ್‌ಗಳಲ್ಲಿನ ವಿಷಯವನ್ನು ನಾವು ಹೋಸ್ಟ್ ಮಾಡುತ್ತೇವೆ.

ಮೇಲಕ್ಕೆ ಹಿಂದಿರುಗಿ

ಹಕ್ಕುಸ್ವಾಮ್ಯ‌

ಹಕ್ಕುಸ್ವಾಮ್ಯ‌ ಕರ್ತೃತ್ವದ ಮೂಲ ಕೃತಿಗಳನ್ನು ರಕ್ಷಿಸಲು ಪ್ರಯತ್ನಿಸುವ ಕಾನೂನುಬದ್ಧ ಹಕ್ಕು (ಉದಾಹರಣೆ: ಪುಸ್ತಕಗಳು, ಸಂಗೀತ, ಚಲನಚಿತ್ರ, ಕಲೆ). ಸಾಮಾನ್ಯವಾಗಿ, ಹಕ್ಕುಸ್ವಾಮ್ಯವು ಪದಗಳು ಅಥವಾ ಚಿತ್ರಗಳಂತಹ ಮೂಲ ಅಭಿವ್ಯಕ್ತಿಯನ್ನು ರಕ್ಷಿಸುತ್ತದೆ. ಇದು ಕಲ್ಪನೆಯನ್ನು ವಿವರಿಸಲು ಬಳಸುವ ಮೂಲ ಪದಗಳು ಅಥವಾ ಚಿತ್ರಗಳನ್ನು ರಕ್ಷಿಸಬಹುದಾದರೂ, ಸತ್ಯಗಳು ಮತ್ತು ಕಲ್ಪನೆಗಳನ್ನು ರಕ್ಷಿಸುವುದಿಲ್ಲ. ಹಕ್ಕುಸ್ವಾಮ್ಯವು ಹೆಸರುಗಳು, ಶೀರ್ಷಿಕೆಗಳು ಮತ್ತು ಘೋಷಣೆಗಳಂತಹ ವಿಷಯಗಳನ್ನು ರಕ್ಷಿಸುವುದಿಲ್ಲ; ಆದಾಗ್ಯೂ, ಟ್ರೇಡ್‌ಮಾರ್ಕ್ ಎಂದು ಕರೆಯಲಾಗುವ ಮತ್ತೊಂದು ಕಾನೂನು ಹಕ್ಕು ಅವುಗಳನ್ನು ರಕ್ಷಿಸಬಹುದು.

WhatsApp ನಲ್ಲಿನ ವಿಷಯವು ನಿಮ್ಮ ಹಕ್ಕುಸ್ವಾಮ್ಯದ ಕೆಲಸವನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಸಂಪರ್ಕ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಅದನ್ನು ವರದಿ ಮಾಡಬಹುದು.

WhatsApp LLC

ಇವರ ಗಮನಕ್ಕೆ: WhatsApp ಹಕ್ಕುಸ್ವಾಮ್ಯ ಏಜೆಂಟ್

1 Meta Way,

Menlo Park, CA 94025

United States of America

ಹಕ್ಕುಸ್ವಾಮ್ಯ ಉಲ್ಲಂಘನೆಯ ಹಕ್ಕನ್ನು ನೀವು ವರದಿ ಮಾಡುವ ಮೊದಲು, ನಿಮ್ಮ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಬಹುದು ಎಂದು ನೀವು ನಂಬಿರುವ ಸಂಬಂಧಿತ WhatsApp ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ನೀವು ಬಯಸಬಹುದು. ನೀವು ಅವರೊಂದಿಗೆ ಸಮಸ್ಯೆಯನ್ನು ನೇರವಾಗಿ ಪರಿಹರಿಸಬಹುದು.

ಮೇಲಕ್ಕೆ ಹಿಂದಿರುಗಿ

ಟ್ರೇಡ್‌ಮಾರ್ಕ್‌

ಟ್ರೇಡ್‌ಮಾರ್ಕ್ ಒಂದು ಪದ, ಘೋಷಣೆ, ಚಿಹ್ನೆ ಅಥವಾ ವಿನ್ಯಾಸ (ಉದಾಹರಣೆಗೆ: ಬ್ರ್ಯಾಂಡ್ ಹೆಸರು, ಲೋಗೋ) ಒಬ್ಬ ವ್ಯಕ್ತಿ, ಗುಂಪು ಅಥವಾ ಕಂಪನಿಯು ನೀಡುವ ಉತ್ಪನ್ನಗಳು ಅಥವಾ ಸೇವೆಗಳನ್ನು ಇನ್ನೊಬ್ಬರಿಂದ ಪ್ರತ್ಯೇಕಿಸುತ್ತದೆ. ಸಾಮಾನ್ಯವಾಗಿ, ಟ್ರೇಡ್‌ಮಾರ್ಕ್ ಕಾನೂನು ಗ್ರಾಹಕರಲ್ಲಿ ಉತ್ಪನ್ನ ಅಥವಾ ಸೇವೆಯನ್ನು ಒದಗಿಸುವ ಅಥವಾ ಸಂಯೋಜಿತವಾಗಿರುವ ಗೊಂದಲವನ್ನು ತಡೆಯಲು ಪ್ರಯತ್ನಿಸುತ್ತದೆ.

WhatsApp ನಲ್ಲಿನ ವಿಷಯವು ನಿಮ್ಮ ಟ್ರೇಡ್‌ಮಾರ್ಕ್ ಕೆಲಸವನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಈ ಸಂಪರ್ಕ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಅದನ್ನು ವರದಿ ಮಾಡಬಹುದು.

ಟ್ರೇಡ್‌ಮಾರ್ಕ್ ಉಲ್ಲಂಘನೆಯ ಹಕ್ಕನ್ನು ನೀವು ವರದಿ ಮಾಡುವ ಮೊದಲು, ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಬಹುದು ಎಂದು ನೀವು ನಂಬಿರುವ ಸಂಬಂಧಿತ WhatsApp ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ನೀವು ಬಯಸಬಹುದು. ನೀವು ಅವರೊಂದಿಗೆ ಸಮಸ್ಯೆಯನ್ನು ನೇರವಾಗಿ ಪರಿಹರಿಸಬಹುದು.

ಮೇಲಕ್ಕೆ ಹಿಂದಿರುಗಿ

ಪುನರಾವರ್ತಿತ ಬೌದ್ಧಿಕ ಆಸ್ತಿ ಉಲ್ಲಂಘನೆ ನೀತಿ

ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ವಿಷಯವನ್ನು ವ್ಯಕ್ತಿಯು ಪದೇಪದೇ ಪೋಸ್ಟ್ ಮಾಡಿದರೆ ಈ ಕೆಳಗಿನನಂತೆ ಮಾಡಬಹುದು:

  • ಅವರ ಖಾತೆಯನ್ನು ನಿಷೇಧಿಸಬಹುದು. ಖಾತೆ ನಿಷೇಧಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.
  • ಅವರ ಚಾನಲ್ ಅನ್ನು ಅಮಾನತುಗೊಳಿಸಬಹುದು. ನಾವು ಇಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಇನ್ನಷ್ಟು ತಿಳಿಯಿರಿ.

ಮೇಲ್ಮನವಿಯ ಕಾರಣದಿಂದಾಗಿ ಅಥವಾ ಹಕ್ಕುಗಳ ಮಾಲೀಕರು ತಮ್ಮ ವರದಿಯನ್ನು ಹಿಂತೆಗೆದುಕೊಂಡ ಕಾರಣ ನಾವು ತೆಗೆದುಕೊಳ್ಳುವ ಯಾವುದೇ ಕ್ರಮಗಳು ವ್ಯತಿರಿಕ್ತವಾಗಿದ್ದರೆ, ನಮ್ಮ ಪುನರಾವರ್ತಿತ ಉಲ್ಲಂಘನೆ ನೀತಿಯ ಅಡಿಯಲ್ಲಿ ನಾವು ಅದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ.

ಮೇಲಕ್ಕೆ ಹಿಂದಿರುಗಿ

ಮೇಲ್ಮನವಿಗಳು

ಬೌದ್ಧಿಕ ಆಸ್ತಿ ವರದಿಯ ಕಾರಣದಿಂದ ನಿಮ್ಮ ಚಾನಲ್‌ನಿಂದ ನಿಮ್ಮ ವಿಷಯವನ್ನು ನಾವು ತೆಗೆದುಹಾಕಿದ್ದರೆ ಮತ್ತು ನಾವು ಹಾಗೆ ಮಾಡಬಾರದಿತ್ತು ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.



ನಿಮ್ಮ ಚಾನಲ್‌ನಲ್ಲಿ ತೆಗೆದುಕೊಳ್ಳಲಾದ ಬೌದ್ಧಿಕ ಆಸ್ತಿ ಕ್ರಿಯೆಯನ್ನು ಮೇಲ್ಮನವಿ ಸಲ್ಲಿಸಲು, ಬ್ಯಾನರ್‌ನಲ್ಲಿ ಚಾನಲ್ ಎಚ್ಚರಿಕೆಗಳನ್ನು ಟ್ಯಾಪ್ ಮಾಡಿ ಅಥವಾ ನಿಮ್ಮ ಚಾನಲ್ ಹೆಸರು > ಚಾನಲ್ ಎಚ್ಚರಿಕೆಗಳನ್ನು ಟ್ಯಾಪ್ ಮಾಡಿ.

ಮೇಲಕ್ಕೆ ಹಿಂದಿರುಗಿ

ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌
ನಾವು ಏನು ಮಾಡುತ್ತೇವೆ
ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
ನಾವು ಯಾರು
ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿ
AndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?
ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2025 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್