ಜಗತ್ತಿನಾದ್ಯಂತ ಯಾರೊಂದಿಗೆ ಬೇಕಾದರೂ ಮಾತನಾಡಲು ಕ್ಷಿಪ್ರ, ಸರಳ ಮತ್ತು ನಂಬಲರ್ಹ ವಿಧಾನ WhatsApp. ಜಗತ್ತಿನ 180 ಕ್ಕೂ ಹೆಚ್ಚು ದೇಶಗಳಲ್ಲಿ 1 ಬಿಲಿಯಕ್ಕಿಂತಲೂ ಹೆಚ್ಚು ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಎಲ್ಲಿಂದಲೂ, ಯಾವುದೇ ಹೊತ್ತಿನಲ್ಲೂ ಸಂಪರ್ಕದಲ್ಲಿರಲು WhatsApp ಬಳಸುತ್ತಾರೆ. WhatsApp ಕೇವಲ ಉಚಿತ ಮಾತ್ರವಲ್ಲದೇ ಹಲವು ವಿಧದ ಮೊಬೈಲ್‌ಗಳಲ್ಲಿ ಮತ್ತು ಸಂಪರ್ಕ ಕಡಿಮೆ ಇರುವ ಪ್ರದೇಶಗಳಲ್ಲೂ ಲಭ್ಯ - ಹಾಗಾಗಿ ಅದನ್ನು ಎಲ್ಲೇ ಇದ್ದರೂ ಸಂಪರ್ಕಕ್ಕಾಗಿ ನಂಬಬಹುದು. ನಿಮ್ಮ ಇಷ್ಟದ ಕ್ಷಣಗಳನ್ನು ಹಂಚಿಕೊಳ್ಳಲು, ಮುಖ್ಯ ಮಾಹಿತಿಗಳನ್ನು ಕಳಿಸಲು ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸರಳ ಮತ್ತು ಸುರಕ್ಷಿತ ದಾರಿ ಇದು. WhatsApp ಜಗತ್ತಿನಾದ್ಯಂತ ಜನರಿಗೆ ತಾವು ಎಲ್ಲೇ ಇದ್ದರೂ ಸಂಪರ್ಕದಲ್ಲಿರಲು ಮತ್ತು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್, ಅಂಗವಿಕಲತೆ, ಜೆನೆಟಿಕ್ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ.
ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .