ನಿಮ್ಮ ಸ್ನೇಹಿತರು ಹಾಗೂ ಕುಟುಂಬಕ್ಕೆ ಉಚಿತವಾಗಿ ಮೆಸೇಜ್ ಮಾಡಿ*. ಮೆಸೇಜ್ಗಳನ್ನು ಕಳುಹಿಸಲು WhatsApp ನಿಮ್ಮ ಫೋನ್ನ ಇಂಟರ್ನೆಟ್ ಸಂಪರ್ಕವನ್ನು ಬಳಸುವುದರಿಂದ, ನಿಮಗೆ ಎಸ್ಎಂಎಸ್ ಶುಲ್ಕ ತುಂಬುವುದು ತಪ್ಪುತ್ತದೆ.
.
ನಿಮ್ಮ ಕುಟುಂಬ ಅಥವಾ ಸಹೋದ್ಯೋಗಿಗಳ ರೀತಿ ನಿಮಗೆ ಹೆಚ್ಚು ಮುಖ್ಯವಾದ ವ್ಯಕ್ತಿಗಳ ಗ್ರೂಪ್ ಜೊತೆ ಸದಾ ಸಂಪರ್ಕದಲ್ಲಿರಿ. ಗ್ರೂಪ್ ಚಾಟ್ಗಳ ಮೂಲಕ ಗರಿಷ್ಠ 256 ಜನರೊಂದಿಗೆ ಮಸೇಜ್ಗಳು, ಫೋಟೋಗಳು ಹಾಗೂ ವೀಡಿಯೊಗಳನ್ನು ಏಕಕಾಲದಲ್ಲಿ ಹಂಚಿಕೊಳ್ಳಬಹುದು. ನೀವು ನಿಮ್ಮ ಗ್ರೂಪ್ಗೆ ಹೆಸರು ಕೊಡುವುದರಿಂದ ಹಿಡಿದು, ನೊಟಿಫಿಕೇಶನ್ಗಳನ್ನು ಮ್ಯೂಟ್ ಮಾಡುವುದು ಅಥವಾ ಅವುಗಳನ್ನುಕಸ್ಟಮೈಸ್ ಮಾಡುವುದು ಇತ್ಯಾದಿಗಳನ್ನು ಮಾಡಬಹುದು.
ವೆಬ್ ಹಾಗೂ ಡೆಸ್ಕ್ಟಾಪ್ನಲ್ಲಿ WhatsApp ಹೊಂದುವ ಮೂಲಕ, ನೀವು ನಿಮ್ಮೆಲ್ಲಾ ಚಾಟ್ಗಳನ್ನು ಕಂಪ್ಯೂಟರ್ನಲ್ಲಿ ಸಿಂಕ್ ಮಾಡಬಹುದು. ಆ ಮೂಲಕ, ನಿಮಗೆ ಯಾವ ಡಿವೈಸ್ನಲ್ಲಿ ಅನುಕೂಲವಾಗುತ್ತದೋ ಅದರಲ್ಲಿ ಚಾಟ್ ಮಾಡಬಹುದು. ಪ್ರಾರಂಭಿಸಲು, ಡೆಸ್ಕ್ಟಾಪ್ ಆ್ಯಪ್ ಡೌನ್ಲೋಡ್ ಮಾಡಿ ಅಥವಾ web.whatsapp.com ಗೆ ಭೇಟಿ ನೀಡಿ.
ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ವಿದೇಶಗಳಲ್ಲಿದ್ದರೂ, ವಾಯ್ಸ್ ಕಾಲ್ಗಳ ಮೂಲಕ ಅವರ ಜೊತೆ ಮಾತನಾಡಬಹುದು. ಅದೂ ಉಚಿತವಾಗಿ*. ಹಾಗೂ ವಾಯ್ಸ್ ಅಥವಾ ಪಠ್ಯ ಸಾಕಾಗುತ್ತಿಲ್ಲ ಎಂದು ಎನಿಸಿದರೆ ನೀವು ಉಚಿತ* ವೀಡಿಯೊ ಕಾಲ್ಗಳ ಸಹಾಯದಿಂದ ಮುಖ-ಮುಖಿಯಾಗಿ ಮಾತನಾಡಬಹುದು. WhatsApp ವಾಯ್ಸ್ ಹಾಗೂ ವೀಡಿಯೊ ಕರೆಯು ನಿಮ್ಮ ಸೆಲ್ ಫೋನ್ನ ವಾಯ್ಸ್ ನಿಮಿಷಗಳ ಬದಲಿಗೆ ನಿಮ್ಮ ಫೋನ್ನ ಇಂಟರ್ನೆಟ್ ಅನ್ನು ಬಳಸುತ್ತದೆ. ಆದ್ದರಿಂದ, ದುಬಾರಿ ಕಾಲ್ ಶುಲ್ಕಗಳ ಗೋಜು ನಿಮಗಿರುವುದಿಲ್ಲ.
ನೀವು ನಿಮ್ಮ ಅತ್ಯಂತ ವೈಯಕ್ತಿಕ ಕ್ಷಣಗಳನ್ನು WhatsApp ನಲ್ಲಿ ಹಂಚಿಕೊಳ್ಳುತ್ತೀರಿ. ಆ ಕಾರಣದಿಂದಾಗಿಯೇ, ನಾವು ನಮ್ಮ ಆ್ಯಪ್ನ ಇತ್ತೀಚಿನ ಆವೃತ್ತಿಯಲ್ಲಿ ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಶನ್ ಅನ್ನು ಬಿಲ್ಟ್ ಮಾಡಿದ್ದೇವೆ. ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಟ್ ಆದ ಮೇಲೆ, ನಿಮ್ಮ ಮೆಸೇಜ್ಗಳು ಹಾಗೂ ಕಾಲ್ಗಳನ್ನು ಸುರಕ್ಷಿತವಾಗಿಡಲಾಗುತ್ತದೆ. ನೀವು ಹಾಗೂ ಎದುರಿನ ವ್ಯಕ್ತಿ ಮಾತ್ರ ಅವುಗಳನ್ನು ಓದಬಹುದು ಹಾಗೂ ಕೇಳಬಹುದು. ಅವರಲ್ಲದೇ ಬೇರೆ ಯಾರೂ, WhatsApp ಕೂಡ, ಅವುಗಳನ್ನು ಓದಲಾಗದು ಅಥವಾ ಕೇಳಲಾಗದು.
WhatsApp ನಲ್ಲಿ ಫೋಟೋಗಳು ಹಾಗೂ ವೀಡಿಯೊಗಳನ್ನು ಕಳುಹಿಸಿ. ನಿಮಗೆ ಅತ್ಯಮೂಲ್ಯ ಎನಿಸಿದ ಕ್ಷಣಗಳನ್ನು ಬಿಲ್ಟ್-ಇನ್ ಕ್ಯಾಮರಾದ ಮೂಲಕ ಸೆರೆ ಹಿಡಿಯಬಹುದು. ನೆಟ್ವರ್ಕ್ ವಿಪರೀತ ನಿಧಾನಗತಿಯಲ್ಲಿದ್ದಾಗಲೂ ಕೂಡ, WhatsApp ಸಹಾಯದಿಂದ, ಫೋಟೋಗಳು ಹಾಗೂ ವೀಡಿಯೊಗಳನ್ನು ಕ್ಷಣಾರ್ಧದಲ್ಲಿ ಕಳುಹಿಸಿ.
ಕೆಲವು ಸಂದರ್ಭಗಳಲ್ಲಿ, ನಿಮ್ಮ ವಾಯ್ಸ್ ಎಲ್ಲವನ್ನೂ ತಿಳಿಸುತ್ತದೆ. ಒಂದೇ ಒಂದು ಟ್ಯಾಪ್ನಲ್ಲಿ ವಾಯ್ಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡಬಹುದು. ಒಂದರೆ ಕ್ಷಣದ ಹೆಲೋ ಹೇಳುವುದಕ್ಕೂ ಸೈ, ದೊಡ್ಡ ಪುರಾಣ ಬಿಗಿಯುವುದಕ್ಕೂ ಸೈ.
ಇಮೇಲ್ ಅಥವಾ ಫೈಲ್ ಹಂಚಿಕೆಯ ಆ್ಯಪ್ಗಳ ಗೋಜು ಇಲ್ಲದೇ PDFಗಳು, ಡಾಕ್ಯುಮೆಂಟ್ಗಳು, ಸ್ಪ್ರೆಡ್ಶೀಟ್ಗಳು, ಸ್ಲೈಡ್ಶೋಗಳು ಹಾಗೂ ಇತ್ಯಾದಿಗಳನ್ನು ಕಳುಹಿಸಬಹುದು. ನೀವು 100 MBಯಷ್ಟು ಡಾಕ್ಯುಮೆಂಟ್ಗಳನ್ನು ಕಳುಹಿಸಬಹುದು. ನಿಮಗೆ ಬೇಕಾದವರಿಗೆ ಅಗತ್ಯವಿರುವುದನ್ನು ಅತ್ಯಂತ ಸುಲಭವಾಗಿ ರವಾನಿಸಬಹುದು.