ಪಠ್ಯಗಳು
ಸರಳ, ನಂಬಲರ್ಹ ಮೆಸೇಜಿಂಗ್
ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಮೆಸೇಜ್ ಕಳುಹಿಸುವುದು ಉಚಿತ*. WhatsApp ನಿಮ್ಮ ಫೋನ್ ಇಂಟರ್ನೆಟ್ ಸಂಪರ್ಕವನ್ನು ಬಳಸಿ ಮೆಸೇಜ್ ಅನ್ನು ಕಳುಹಿಸುವುದರಿಂದ SMS ಶುಲ್ಕ ನಿಮಗೆ ಉಳಿತಾಯವಾಗುತ್ತದೆ.
ಗುಂಪು ಸಂಭಾಷಣೆ
ಸಂಪರ್ಕದಲ್ಲಿರಲು ಗುಂಪುಗಳು
ನಿಮ್ಮ ಕುಟುಂಬ ಅಥವಾ ಸಹೊದ್ಯೋಗಿಗಳಂತಹ ಮಹತ್ವದ ಜನರ ಗುಂಪುಗಳ ಜೊತೆ ಸಂಪರ್ಕದಲ್ಲಿರಬಹುದು. ಗುಂಪು ಸಂಭಾಷಣೆಗಳಲ್ಲಿ ನೀವು ಏಕಕಾಲಕ್ಕೆ ಗರಿಷ್ಟ 256 ಜನಗಳಿಗೆ ನೀವು ಮೆಸೇಜ್ಗಳು, ಫೋಟೋಗಳು, ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು. ನಿಮ್ಮ ಗುಂಪಿಗೆ ಹೆಸರಿಡುವುದು, ಮೌನಗೊಳಿಸುವುದು, ಅಥವಾ ಅಧಿಸೂಚನೆಗಳನ್ನು ಬೇಕಾದಂತೆ ಬದಲಾಯಿಸಿಕೊಳ್ಳುವುದು ಮತ್ತು ಇನ್ನಷ್ಟನ್ನು ಮಾಡಬಹುದು.
ವೆಬ್ ಮತ್ತು ಡೆಸ್ಕಟಾಪ್ ನಲ್ಲಿ WhatsApp
ಸಂಭಾಷಣೆಯನ್ನು ಮುಂದುವರಿಸಿ
ವೆಬ್ ಮತ್ತು ಡೆಸ್ಕ್ಟಾಪ್ WhatsAppನ ಮೂಲಕ, ನೀವು ನಿಮ್ಮ ಎಲ್ಲಾ ಸಂಭಾಷಣೆಗಳನ್ನು ಮನಬಂದಂತೆ ನಿಮ್ಮ ಕಂಪ್ಯೂಟರ್ಗೆ ಸಿಂಕ್ ಮಾಡಬಹುದು. ಮತ್ತು ನಿಮಗೆ ಹೆಚ್ಚು ಅನುಕೂಲಕರವಾದ ಯಾವುದೇ ಸಾಧನದಲ್ಲಿ ನೀವು ಸಂಭಾಷಣೆ ಮಾಡಬಹುದು. ಡೆಸ್ಕ್ಟಾಪ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ ಅಥವಾ ಪ್ರಾರಂಭಿಸಲು web.whatsapp.com ಗೆ ಭೇಟಿ ಮಾಡಿ.
WhatsApp ಧ್ವನಿ ಮತ್ತು ವೀಡಿಯೊ ಕರೆಗಳು
ಮುಕ್ತವಾಗಿ ಮಾತನಾಡಿ
ಧ್ವನಿ ಕರೆಗಳಲ್ಲಿ, ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅವರು ಯಾವುದೇ ರಾಷ್ಟ್ರದಲ್ಲಿದ್ದರೂ ಉಚಿತವಾಗಿ*, ಮಾತನಾಡಬಹುದು. ಯಾವಾಗ ಧ್ವನಿ ಅಥವಾ ಪಠ್ಯ ಸಂಭಾಷಣೆಗಳು ಸಾಕಾಗುವುದಿಲ್ಲವೋ, ಆಗ ನೀವು ಉಚಿತ* ವೀಡಿಯೊ ಕರೆಗಳೊಂದಿಗೆ ಮುಖಾ-ಮುಖಿಯಾಗಿ ಸಂಭಾಷಣೆಗಳನ್ನು ಮಾಡಬಹುದು. WhatsApp ಧ್ವನಿ ಮತ್ತು ವೀಡಿಯೊ ಕರೆಗಳು ನಿಮ್ಮ ಫೋನಿನ ಧ್ವನಿ ನಿಮಿಷಗಳ ಯೋಜನೆಯ ಬದಲಾಗಿ, ನಿಮ್ಮ ಫೋನಿನ ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಳ್ಳುತ್ತವೆ, ಹಾಗಾಗಿ ನೀವು ದುಬಾರಿ ಕರೆಗಳ ಶುಲ್ಕಗಳ ಬಗ್ಗೆ ಚಿಂತಿಸಬೇಕಾಗಿಲ್ಲ.
ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್
ಡೀಫಾಲ್ಟ್ ಭದ್ರತೆ
ನಿಮ್ಮ ಕೆಲವು ಖಾಸಗಿ ಕ್ಷಣಗಳನ್ನು WhatsApp ನಲ್ಲಿ ಹಂಚಿರಬಹುದು, ಇದೇ ಕಾರಣಕ್ಕೆ ನಾವು ಕೊನೆಯಿಂದ ಕೊನೆವರೆಗೆ ಎನ್ಕ್ರಿಪ್ಷನ್ ಆಗುವ ರೀತಿಯಲ್ಲಿ ನಮ್ಮ ಆಪ್ಲಿಕೇಶನ್ನ ಇತ್ತೀಚಿನ ಆವೃತ್ತಿಗಳನ್ನು ರಚಿಸಿದ್ದೇವೆ. ಕೊನೆಯಿಂದ - ಕೊನೆಗೆ ಎನ್ಕ್ರಿಪ್ಟ್ ಆದಾಗ ನಿಮ್ಮ ಮೆಸೇಜ್ಗಳು ಮತ್ತು ಕರೆಗಳು ಸುರಕ್ಷಿತವಾಗಿರುತ್ತವೆ ಮತ್ತು ಕೇವಲ ನೀವು ಮತ್ತು ನಿಮ್ಮೊಂದಿಗೆ ಸಂವಹನ ಮಾಡುತ್ತಿರುವ ವ್ಯಕ್ತಿ ಮಾತ್ರ ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯ, ಮತ್ತು ಮಧ್ಯದಲ್ಲಿ WhatsApp ಸೇರಿದಂತೆ ಯಾರೂ ಕೂಡ ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ.
ಫೋಟೋಗಳು ಮತ್ತು ವೀಡಿಯೊಗಳು
ಗಮನಾರ್ಹ ಕ್ಷಣಗಳನ್ನು ಹಂಚಿಕೊಳ್ಳಿ
WhatsApp ನಲ್ಲಿ ತಕ್ಷಣ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಬಹುದು. ನೀವು ಅಂತರ್ನಿರ್ಮಿತ ಕ್ಯಾಮೆರಾದಲ್ಲಿ ಮಹತ್ವದ ಕ್ಷಣಗಳನ್ನು ಕೂಡ ಸೆರೆಹಿಡಿದಿಡಬಹುದು. ನಿಮ್ಮ ಸಂಪರ್ಕ ನಿಧಾನಗತಿಯಲ್ಲಿದ್ದರೂ ಕೂಡ, WhatsApp ನಿಂದ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಶೀಘ್ರವಾಗಿ ಕಳುಹಿಸಬಹುದು.
ಧ್ವನಿ ಮೆಸೇಜ್ಗಳು
ನಿಮ್ಮ ಮನದಲ್ಲಿರುವುದನ್ನು ಹೇಳಿ
ಕೆಲವೊಮ್ಮೆ, ನಿಮ್ಮ ಧ್ವನಿಯು ಎಲ್ಲವನ್ನು ಹೇಳುತ್ತದೆ. ನೀವು ಕೇವಲ ಒಂದೇ ಟ್ಯಾಪ್ನಿಂದ ನಿಮ್ಮ ಧ್ವನಿ ಸಂದೇಶವನ್ನು ರೆಕಾರ್ಡ್ ಮಾಡಬಹುದು, ಹಲೋ ಎಂಬ ಸಣ್ಣ ಸಂಭಾಷಣೆಗೆ ಅಥವಾ ದೊಡ್ಡ ಮಾತುಕತೆಗೆ, ಎರಡಕ್ಕೂ ಸೂಕ್ತ.
ದಾಖಲೆಗಳು
ದಾಖಲೆಗಳ ಹಂಚಿಕೆಯನ್ನು ಸುಲಭವಾಗಿಸಿದೆ
ಇಮೇಲ್ ಅಥವಾ ದಾಖಲೆ ಹಂಚಿಕೆಯ ಆಪ್ಲಿಕೇಶನ್ಗಳ ಕಿರಿಕಿರಿಗಳಿಲ್ಲದೇ, PDF ಗಳನ್ನು, ದಾಖಲೆಗಳನ್ನು, ಸ್ಪ್ರೆಡ್ ಶೀಟ್ ಗಳನ್ನು, ಸ್ಲೈಡ್ ಶೋಗಳನ್ನು ಮತ್ತುಇನ್ನಷ್ಟನ್ನು ಕಳುಹಿಸಬಹುದು. 100 MB ತನಕ ದಾಖಲೆಗಳನ್ನು ಕಳುಹಿಸಬಹುದು, ಹಾಗಾಗಿ ನಿಮಗೆ ಬೇಕಾದವರಿಗೆ ಕಳುಹಿಸುವುದು ತುಂಬಾ ಸುಲಭ.