ಪದಗಳು

ಸರಳ, ಭರವಸೆದಾಯಕ ಸಂದೇಶಕ

ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಉಚಿತವಾಗಿ*. ಸಂದೇಶಗಳನ್ನು ಕಳುಹಿಸಲು WhatsApp ನಿಮ್ಮ ಫೋನಿನ ಅಂತರ್ಜಾಲ ಸಂಪರ್ಕವನ್ನು ಬಳಸಿಕೊಳ್ಳುತ್ತದೆ ಅದರಿಂದ ನೀವು SMS ಶುಲ್ಕಗಳನ್ನು ತಪ್ಪಿಸಬಹುದು.
*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಸೇವೆ ಒದಗಿಸುವವರನ್ನು ಸಂಪರ್ಕಿಸಿ.

ಗುಂಪು ಸಂಭಾಷಣೆ

ಸಂಪರ್ಕದಲ್ಲಿರಲು ಗುಂಪುಗಳು

ನಿಮ್ಮ ಕುಟುಂಬ ಅಥವಾ ಸಹೊದ್ಯೋಗಿಗಳ ರೀತಿ ಅತ್ಯಂತ ಸಂಬಂಧಿಸಿದ ಗುಂಪಿನಲ್ಲಿರುವ ಜನರ ಜೊತೆ ಸಂಪರ್ಕದಲ್ಲಿ ಇರಿ. ಗುಂಪು ಸಂಭಾಷಣೆಗಳೊಂದಿಗೆ ನೀವು ಸಂದೇಶಗಳನ್ನು, ಚಿತ್ರಗಳನ್ನು, ಮತ್ತು ದೃಶ್ಯಗಳನ್ನು ಒಮ್ಮೆಲೆ 256 ಜನರೊಟ್ಟಿಗೆ ಹಂಚಿಕೊಳ್ಳಬಹುದು. ನೀವು ನಿಮ್ಮ ಗುಂಪಿಗೆ ಹೆಸರಿಸಬಹುದು, ಮೌನಗೊಳಿಸಬಹುದು ಅಥವಾ ಅಧಿಸೂಚನೆಗಳನ್ನು ಪರಿಷ್ಕರಿಸಬಹುದು, ಮತ್ತು ಇನ್ನು ಬಹಳಷ್ಟು ಮಾಡಬಹುದು.
ಗೆಳೆಯರು
ಕುಟುಂಬ
ವಾರಾಂತ್ಯ

ಜಾಲತಾಣದಲ್ಲಿ ಮತ್ತು ಡೆಸ್ಕಟಾಪ್ ನಲ್ಲಿ WhatsApp

ಸಂಭಾಷಣೆಯನ್ನು ಮುಂದುವರೆಸಿ

ಜಾಲತಾಣ ಮತ್ತು ಗಣಕಯಂತ್ರದ WhatsAppನ ಮೂಲಕ ನೀವು ನಿಮ್ಮ ಸಂಭಾಷಣೆಗಳನ್ನು ಮನಬಂದಂತೆ ನಿಮ್ಮ ಗಣಕಯಂತ್ರಕ್ಕೆ ಸಮನ್ವಯಗೊಳಿಸಬಹುದು ಆದ್ದರಿಂದ ನಿಮಗೆ ಅನುಕೂಲವಾಗುವ ಸಾಧನಗಳಲ್ಲಿ ನೀವು ಸಂಭಾಷಿಸಬಹುದು. ಡೆಸ್ಕಟಾಪ್ ತಂತ್ರಾಂಶ ಡೌನ್ಲೋಡ್ ಮಾಡಿ ಅಥವಾ ಪ್ರಾರಂಭಿಸಲು web.whatsapp.com ಅನ್ನು ಭೇಟಿ ಮಾಡಿ.

WhatsApp ಧ್ವನಿ ಮತ್ತು ದೃಶ್ಯ ಕರೆಗಳು

ಮುಕ್ತವಾಗಿ ಮಾತನಾಡಿ

ಧ್ವನಿ ಕರೆಗಳೊಂದಿಗೆ, ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅವರು ಯಾವುದೇ ರಾಷ್ಟ್ರದಲ್ಲಿದ್ದರೂ ಉಚಿತವಾಗಿ*, ಮಾತನಾಡಬಹುದು. ಯಾವಾಗ ಪದ ಮತ್ತು ಧ್ವನಿ ಸಂಭಾಷಣೆಗಳು ಸಾಕಾಗುವುದಿಲ್ಲವೋ, ಆಗ ನೀವು ದೃಶ್ಯ ಕರೆಗಳೊಂದಿಗೆ ಉಚಿತವಾಗಿ* ಮುಖಾ-ಮುಖಿಯಾಗಿ ಸಂಭಾಷಣೆಗಳನ್ನು ಮಾಡಬಹುದು. WhatsApp ಧ್ವನಿ ಮತ್ತು ದೃಶ್ಯ ಕರೆಗಳು ನಿಮ್ಮ ಫೋನಿನ ಧ್ವನಿ ನಿಮಿಷಗಳ ಯೋಜನೆಯ ಬದಲಾಗಿ ನಿಮ್ಮ ಫೋನಿನ ಅಂತರ್ಜಾಲದ ಸಂಪರ್ಕವನ್ನು ಬಳಸಿಕೊಳ್ಳುತ್ತವೆ, ಅದಕ್ಕೆ ನೀವು ದುಬಾರಿ ಕರೆಗಳ ಶುಲ್ಕಗಳಿಗೆ ಚಿಂತಿಸಬೇಕಾಗಿಲ್ಲ.
*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಸೇವೆ ಒದಗಿಸುವವರನ್ನು ಸಂಪರ್ಕಿಸಿ.

ಕೊನೆಯಿಂದ - ಕೊನೆಯವರೆಗೆ ಎನ್ಕ್ರಿಪ್ಷನ್

ಪೂರ್ವನಿಯೋಜಿತ ಭದ್ರತೆ

ನಿಮ್ಮ ಕೆಲವು ಅತೀ ವೈಯಕ್ತಿಕ ಕ್ಷಣಗಳನ್ನು WhatsApp ನಲ್ಲಿ ಹಂಚಿರಬಹುದು, ಇದೇ ಕಾರಣಕ್ಕೆ ನಾವು ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್ ಆಗುವ ರೀತಿಯಲ್ಲಿ ನಮ್ಮ ಇತ್ತೀಚಿನ ತಂತ್ರಾಂಶದ ಆವೃತ್ತಿಗಳನ್ನು ರಚಿಸಿದ್ದೇವೆ. ಯಾವಾಗ ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಟ್ ಆಗಿರುತ್ತದೋ. ಅಲ್ಲಿ ನಿಮ್ಮ ಸಂದೇಶಗಳು ಮತ್ತು ಕರೆಗಳು ಭದ್ರತೆಯಿಂದಿರುತ್ತವೆ ಆದ್ದರಿಂದ ಕೇವಲ ನೀವು ಮತ್ತು ಸಂವಹನ ಮಾಡುತ್ತಿರುವ ವ್ಯಕ್ತಿಯೊಂದಿಗೆ ಮಾತ್ರ ಓದಲು ಮತ್ತು ಕೇಳಲು ಸಾಧ್ಯ, ಮತ್ತು ಮಧ್ಯದಲ್ಲಿ WhatsApp ಕೂಡ ಸೇರಿ ಬೇರೆ ಯಾರಿಂದಲೂ ಓದಲು, ಕೇಳಲು ಸಾಧ್ಯವಿಲ್ಲ.

ಚಿತ್ರಗಳು ಮತ್ತು ದೃಶ್ಯಗಳು

ವಿಷಯಕ್ಕೆ ಸಂಬಂಧಿಸಿದ ಕ್ಷಣಗಳನ್ನು ಹಂಚಿಕೊಳ್ಳಿ

WhatsApp ನಲ್ಲಿ ತಕ್ಷಣವಾಗಿ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಳುಹಿಸಿ. ನೀವು ಕ್ಯಾಮರಾಸಹಿತ ನಿರ್ಮಿತ ಫೋನಿನೊಂದಿಗೆ ನಿಮಗೆ ಅತ್ಯಂತ ಸಂಬಂಧಿಸಿದ ಕ್ಷಣಗಳನ್ನು ಕೂಡ ಸೆರೆಹಿಡಿದಿಡಬಹುದು. ನೀವು ನಿಧಾನಗತಿಯ ಸಂಪರ್ಕದಲ್ಲಿದ್ದರೂ ಕೂಡ WhatsApp ನಿಂದ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಶೀಘ್ರವಾಗಿ ಕಳುಹಿಸಬಹುದು.

ಧ್ವನಿ ಕರೆಗಳು

ನಿಮ್ಮ ಮನದಲ್ಲಿರುವುದನ್ನು ಹೇಳಿ

ಕೆಲವು ಸಲ, ನಿಮ್ಮ ಧ್ವನಿಯು ಎಲ್ಲವನ್ನು ಹೇಳುತ್ತದೆ. ಕೇವಲ ಒಂದೇ ಒಂದು ತಟ್ಟುವಿಕೆಯಿಂದ ನೀವು ನಿಮ್ಮ ಧ್ವನಿ ಸಂದೇಶವನ್ನು ಮುದ್ರಿಸಬಹುದು, ಇದು ಚಿಕ್ಕ ಹೆಲ್ಲೊಗೆ ಅಥವಾ ಒಂದು ಮಹಾ ಕಥೆಗೆ ಪರಿಪೂರ್ಣವಾಗಿದೆ.

ದಾಖಲೆಗಳು

ಕಡತಗಳ ಹಂಚಿಕೆಯನ್ನು ಸುಲಭ ಮಾಡಲಾಗಿದೆ

ಯಾವುದೇ ತೊಂದರೆದಾಯಕ ಇಮೇಲ್ ಅಥವಾ ದಾಖಲೆ ಹಂಚಿಕೆ ತಂತ್ರಾಂಶಗಳಿಲ್ಲದೇ PDF ಗಳನ್ನು, ದಾಖಲೆಗಳನ್ನು, ಸ್ಪ್ರೆಡ್ ಶೀಟ್ ಗಳನ್ನು, ಸ್ಲೈಡ್ ಶೋಗಳನ್ನು ಮತ್ತು ಇತರೆ ಬಹಳಷ್ಟು ಕಳುಹಿಸಬಹುದು. ಹಾಗೆಯೇ ನಿಮ್ಮ ಅಗತ್ಯತೆಗಳನ್ನು ಪಡೆಯಲು ಮತ್ತು ಬಯಸಿದವರೊಂದಿಗೆ ನೀವು 100 ಎಂಬಿಯವರೆಗೂ ದಾಖಲೆಗಳನ್ನು, ಅತಿ ಸುಲಭದಾಯಕವಾಗಿ ಕಳುಹಿಸಬಹುದು.