ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
ಡೌನ್‌ಲೋಡ್ ಮಾಡಿ
ಸೇವಾ ನಿಯಮಗಳು2023 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ನಿಮ್ಮ ಗ್ರಾಹಕರನ್ನು ಜಾಗತಿಕವಾಗಿ ತಲುಪಿ.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp Business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
WhatsApp Webಡೌನ್‌ಲೋಡ್

WhatsApp Business ಆ್ಯಪ್‌‌ ಬಳಕೆಯನ್ನು ಆರಂಭಿಸುವ ವಿಧಾನ

WhatsApp Business ಆ್ಯಪ್‌ ಡೌನ್‌ಲೋಡ್ ಮಾಡಿ ಮತ್ತು ಸೆಟಪ್ ಮಾಡಿ

1. WhatsApp Business ಆ್ಯಪ್ ಡೌನ್‌ಲೋಡ್ ಮಾಡಿ, ನಂತರ ತೆರೆಯಿರಿ: Google Play Store ಮತ್ತು Apple App Storeನಲ್ಲಿ WhatsApp Business ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದು. ನಿಮ್ಮ ಹೋಮ್‍ಸ್ಕ್ರೀನ್‌ ಮೇಲಿನ WhatsApp Business ಐಕಾನ್ ಟ್ಯಾಪ್ ಮಾಡಿ.

2. ಸೇವಾ ನಿಯಮಗಳನ್ನು ಪರಿಶೀಲಿಸಿ: WhatsApp Business ನ ಸೇವಾ ನಿಯಮಗಳನ್ನು ಓದಿ. ನಂತರ ನಿಯಮಗಳನ್ನು ಸಮ್ಮತಿಸಲು, ಸಮ್ಮತಿಸಿದ್ದೇನೆ ಮತ್ತು ಮುಂದುವರೆಯಿರಿ ಅನ್ನು ಟ್ಯಾಪ್ ಮಾಡಿ.

3. ನೋಂದಾಯಿಸಿ: ಡ್ರಾಪ್-ಡೌನ್ ಪಟ್ಟಿಯಿಂದ ನಿಮ್ಮ ದೇಶವನ್ನು ಆಯ್ಕೆಮಾಡಿದರೆ ನಿಮ್ಮ ದೇಶದ ಕೋಡ್ ಸೇರಿಕೊಳ್ಳುತ್ತದೆ. ನಂತರ ನಿಮ್ಮ ಫೋನ್ ನಂಬರ್ ಅನ್ನು ಅಂತರರಾಷ್ಟ್ರೀಯ ಫೋನ್ ನಂಬರ್ ಫಾರ್ಮ್ಯಾಟ್‌ನಲ್ಲಿ ನಮೂದಿಸಿ. ಮುಗಿದಿದೆ ಅಥವಾ ಮುಂದೆ ಟ್ಯಾಪ್ ಮಾಡಿ, ನಂತರ ಓಕೆ ಟ್ಯಾಪ್ ಮಾಡಿದಾಗ ನಿಮಗೆ SMS ಅಥವಾ ಫೋನ್ ಕಾಲ್ ಮೂಲಕ 6 ಅಂಕಿಯ ನೋಂದಣಿ ಕೋಡ್ ಬರುತ್ತದೆ. ಈ 6 ಅಂಕಿಯ ಕೋಡ್ ನಮೂದಿಸಿದರೆ, ನೋಂದಣಿ ಪೂರ್ಣಗೊಳ್ಳುತ್ತದೆ. ನಿಮ್ಮ ಫೋನ್ ನಂಬರ್‌ ಅನ್ನು ನೋಂದಾಯಿಸುವುದು ಹೇಗೆ ಎಂದು ಈ ಲೇಖನ ದಲ್ಲಿ ತಿಳಿದುಕೊಳ್ಳಿ.

4. ಕಾಂಟ್ಯಾಕ್ಟ್‌ಗಳು ಮತ್ತು ಫೋಟೋಗಳಿಗೆ ಪ್ರವೇಶ ನೀಡಿ: ನಿಮ್ಮ ಫೋನ್‌ನ ಅಡ್ರೆಸ್ ಬುಕ್‌ನಲ್ಲಿರುವ ಕಾಂಟ್ಯಾಕ್ಟ್‌ಗಳನ್ನು WhatsApp Business ಗೆ ಸೇರಿಸಬಹುದು. ನಿಮ್ಮ ಫೋನ್‌ನ ಫೋಟೋಗಳು, ವೀಡಿಯೊಗಳು ಮತ್ತು ಫೈಲ್‌ಗಳಿಗೆ ಕೂಡ ನೀವು ಆಕ್ಸೆಸ್ ನೀಡಬಹುದು.

5. ಒಂದು ಖಾತೆ ರಚಿಸಿ: ನಿಮ್ಮ ವ್ಯವಹಾರದ ಹೆಸರನ್ನು ನಮೂದಿಸಿ, ವ್ಯವಹಾರದ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಪ್ರೊಫೈಲ್ ಫೋಟೋವನ್ನು ಆಯ್ಕೆಮಾಡಿ.

6. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ರಚಿಸಿ: ಎಕ್ಸ್‌ಪ್ಲೋರ್ > ವ್ಯಾವಹಾರಿಕ ಪ್ರೊಫೈಲ್ ಟ್ಯಾಪ್ ಮಾಡಿ. ವ್ಯವಹಾರದ ಪ್ರಮುಖ ಮಾಹಿತಿಗಳಾದ, ನಿಮ್ಮ ವ್ಯವಹಾರದ ವಿಳಾಸ, ವಿವರಣೆ, ವ್ಯವಹಾರದ ಸಮಯಗಳು ಮತ್ತು ಇತರ ವಿವರಗಳನ್ನು ಇಲ್ಲಿ ನೀವು ಸೇರಿಸಬಹುದು.

7. ಚಾಟ್‌ ಪ್ರಾರಂಭಿಸಿ. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ಈಗ ಸೆಟಪ್ ಆಗಿದೆ. Tap ಅಥವಾ ಅನ್ನು ಟ್ಯಾಪ್‌ ಮಾಡಿ, ಬಳಿಕ ಮೆಸೇಜ್‌ ಕಳುಹಿಸಲು ಕಾಂಟ್ಯಾಕ್ಟ್‌ ಅನ್ನು ಹುಡುಕಿ ಅಥವಾ ಆಯ್ಕೆ ಮಾಡಿ. ಟೆಕ್ಸ್ಟ್ ಫೀಲ್ಡ್‌ನಲ್ಲಿ ಮೆಸೇಜ್ ಎಂಟರ್ ಮಾಡಿ. ಬಳಿಕ, ಅಥವಾ ಟ್ಯಾಪ್‌ ಮಾಡಿ.

WhatsApp Business ಟೂಲ್‌ಗಳನ್ನು ಎಕ್ಸ್‌ಪ್ಲೋರ್‌ ಮಾಡಿ

ನಿಮ್ಮ ವ್ಯವಹಾರವನ್ನು ಪರಿಣಾಮಕಾರಿಯಾಗಿ ನಡೆಸುವುದಕ್ಕಾಗಿ ಸಹಾಯ ಮಾಡಲು WhatsApp Business ಆ್ಯಪ್‌ನಲ್ಲಿ ಹಲವು ಟೂಲ್‌ಗಳಿವೆ. ಈ ಟೂಲ್‌ಗಳನ್ನು ಎಕ್ಸ್‌ಪ್ಲೋರ್ ಮಾಡಲು, ನಿಮ್ಮ ಚಾಟ್ಸ್ ಸ್ಕ್ರೀನ್‌ಗೆ ಹೋಗಿ. Android ನಲ್ಲಿ ಇನ್ನಷ್ಟು ಆಯ್ಕೆಗಳು ಟ್ಯಾಪ್‌ ಮಾಡಿ ಅಥವಾ iPhone ನಲ್ಲಿ ಸೆಟ್ಟಿಂಗ್‌ಗಳು ಟ್ಯಾಪ್‌ ಮಾಡಿ. ನಂತರ, ವ್ಯವಹಾರ ಟೂಲ್ಸ್ ಟ್ಯಾಪ್ ಮಾಡಿ.

  • ಕ್ಯಾಟಲಾಗ್: ನಿಮ್ಮ ವ್ಯಾವಹಾರಿಕ ಖಾತೆಯಲ್ಲಿ ನಿಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ತೋರಿಸಿ ಹಾಗೂ ಅವುಗಳನ್ನು ಹಂಚಿಕೊಳ್ಳಿ. Android ಅಥವಾ iPhoneನಲ್ಲಿ ಕ್ಯಾಟಲಾಗ್ ರಚಿಸುವುದು ಹೇಗೆ ಎಂದು ತಿಳಿಯಿರಿ.
  • ಸಣ್ಣ ಲಿಂಕ್: ಹೊಸ ಗ್ರಾಹಕರು ನಿಮ್ಮೊಂದಿಗೆ ಸುಲಭವಾಗಿ ಕನೆಕ್ಟ್‌ ಮಾಡಿ. ನಿಮ್ಮ ವ್ಯವಹಾರಕ್ಕೆ ಮೆಸೇಜ್ ಕಳುಹಿಸುವ ಅವಕಾಶವನ್ನು ಹೊಸ ಗ್ರಾಹಕರಿಗೆ ನೀಡಲು ಸ್ವಯಂಚಾಲಿತವಾಗಿ ರಚಿಸಲಾದ ಸಣ್ಣ ಲಿಂಕ್ ಅನ್ನು ಅವರೊಂದಿಗೆ ಶೇರ್ ಮಾಡಿಕೊಳ್ಳಿ. Android ಅಥವಾ iPhoneನಲ್ಲಿ ಸಣ್ಣ ಲಿಂಕ್‌ಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಿರಿ.
  • ಮೆಸೇಜಿಂಗ್ ಟೂಲ್‌ಗಳು: WhatsApp ಮೆಸೇಜಿಂಗ್ ಟೆಂಪ್ಲೇಟ್‌ಗಳನ್ನು ಬಳಸಿಕೊಂಡು ಪ್ರಮುಖವಾದ ಸಂಭಾಷಣೆಗಳನ್ನು ಮೊದಲೇ ರಚಿಸಿ. ಹೊಸ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲು ಸ್ವಯಂಚಾಲಿತ ಶುಭಾಶಯ ಮೆಸೇ‌ಜ್‌ಗಳನ್ನು ರಚಿಸಿ. ನೀವು ಯಾವಾಗ ಲಭ್ಯವಿರುತ್ತೀರಿ ಎಂದು ಗ್ರಾಹಕರಿಗೆ ತಿಳಿಸಲು ಅಲಭ್ಯತೆ ಮೆಸೇಜ್‌ಗಳನ್ನು ಸೆಟ್ ಮಾಡಿ ಅಥವಾ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಲು ಕ್ವಿಕ್‌ ರಿಪ್ಲೈಗಳನ್ನು ರಚಿಸಿ. ಮೆಸೇಜಿಂಗ್ ಟೂಲ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲೇಖನಗಳನ್ನು ಓದಿ:
    • Android ಅಥವಾ iPhone ನಲ್ಲಿ ಗ್ರೀಟಿಂಗ್‌ ಮೆಸೇಜ್‌ಗಳನ್ನು ಬಳಸುವ ವಿಧಾನ
    • Android ಅಥವಾ iPhoneನಲ್ಲಿ ಅಲಭ್ಯತೆಯ ಮೆಸೇಜ್‌ ಬಳಸುವ ವಿಧಾನ
    • Android ಅಥವಾ iPhone ನಲ್ಲಿ ತ್ವರಿತ ಪ್ರತ್ಯುತ್ತರ ಬಳಸುವ ವಿಧಾನ
  • ಲೇಬಲ್‌ಗಳು: ಗ್ರಾಹಕರೊಂದಿಗಿನ ನಿಮ್ಮ ಸಂಭಾಷಣೆಗಳನ್ನು ಉಪಯುಕ್ತ ಕೆಟಗರಿಗಳಾಗಿ ವಿಂಗಡಿಸಿ. ಉದಾ, “ಹೊಸ ಗ್ರಾಹಕರು” ಅಥವಾ “ಬಾಕಿ ಆರ್ಡರ್‌ಗಳು.” Android ಅಥವಾ iPhoneನಲ್ಲಿ ಲೇಬಲ್‌ಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋಡೌನ್‌ಲೋಡ್
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸ್ಟೋರೀಸ್ವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಗಳುಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಕಾಂಟ್ಯಾಕ್ಟ್‌ ಮಾಡಿಸಹಾಯ ಕೇಂದ್ರಕೊರೊನಾವೈರಸ್ಸುರಕ್ಷತಾ ಸಲಹೆಗಳು
ಡೌನ್‌ಲೋಡ್

2023 © WhatsApp LLC

ಸೇವಾ ನಿಯಮಗಳು