ಶಾಲೆ ಅಥವಾ ವಿಶ್ವವಿದ್ಯಾಲಯಗಳಲ್ಲಿ ನೀವು ಪಾಠಮಾಡುತ್ತಿದ್ದ ಸಂದರ್ಭದಲ್ಲಿ, ಶಿಕ್ಷಣಕ್ಕೆ ಅಡ್ಡಿಯಾದರೆ, WhatsApp ಮೂಲಕ ನಿಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ.*
ನಿಮ್ಮ ಗ್ರಾಹಕರನ್ನು ಸಂಪರ್ಕಿಸುವ ಸಂದರ್ಭದಲ್ಲಿ WhatsApp ಅನ್ನು ದಯವಿಟ್ಟು ಜವಾಬ್ದಾರಿಯುತವಾಗಿ ಬಳಸಿ. ನಿಮಗೆ ಪರಿಚಯವಿರುವ ಬಳಕೆದಾರರು ಹಾಗೂ ನಿಮ್ಮಿಂದ ಮೆಸೇಜ್‌ಗಳನ್ನು ಸ್ವೀಕರಿಸಲು ಬಯಸುವವರೊಂದಿಗೆ ಮಾತ್ರ ಸಂವಹನ ನಡೆಸಿ. ನಿಮ್ಮ ಫೋನ್ ನಂಬರ್ ಅನ್ನು ತಮ್ಮ ಅಡ್ರೆಸ್ ಬುಕ್‌ನಲ್ಲಿ ಸೇವ್ ಮಾಡುವಂತೆ ಗ್ರಾಹಕರಲ್ಲಿ ಕೇಳಿಕೊಳ್ಳಿ ಮತ್ತು ಗ್ರೂಪ್‌ಗಳಿಗೆ ಸ್ವಯಂಚಾಲಿತ ಅಥವಾ ಪ್ರಚಾರದ ಮೆಸೇಜ್‌ಗಳನ್ನು ಕಳುಹಿಸಬೇಡಿ. ಈ ಸರಳವಾದ ಉತ್ತಮ ಅಭ್ಯಾಸಗಳನ್ನು ಅನುಸರಿಸದಿದ್ದರೆ ಇತರ ಬಳಕೆದಾರರು ದೂರಬಹುದು ಮತ್ತು ಖಾತೆಯನ್ನು ನಿಷೇಧಿಸಬಹುದು.
ನೀವು WhatsApp ಗೆ ಹೊಸಬರಾಗಿದ್ದರೆ, ಹೇಗೆ ಆರಂಭಿಸುವುದು ಎಂಬುದರ ಕುರಿತಾದ ಹಂತ-ಹಂತದ ಮಾರ್ಗದರ್ಶನಕ್ಕಾಗಿಇಲ್ಲಿ ಕ್ಲಿಕ್ ಮಾಡಿ.
ನೀವು WhatsApp ಕೊರೊನಾವೈರಸ್ ಮಾಹಿತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಪ್ರಶ್ನೆಗಳನ್ನು ಹೊಂದಿದ್ದರೆ ಇಲ್ಲಿಗೆ ಇಮೇಲ್ ಮಾಡಿ, ನಮ್ಮನ್ನು ಸಂಪರ್ಕಿಸಿ.