ನಮ್ಮ ಬ್ಯುಸಿನೆಸ್ ಸರ್ವೀಸ್ಗಳನ್ನು ನೀವು ಇನ್ಸ್ಟಾಲ್ ಮಾಡುವಾಗ, ಆಕ್ಸೆಸ್ ಮಾಡುವಾಗ ಅಥವಾ ಬಳಸುವಾಗ ಸೇರಿದಂತೆ, ನಮ್ಮ ಸರ್ವೀಸ್ಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು WhatsApp ಕೆಲವು ಮಾಹಿತಿಯನ್ನು ಸ್ವೀಕರಿಸಬೇಕಾಗುತ್ತದೆ ಅಥವಾ ಸಂಗ್ರಹಿಸಬೇಕಾಗುತ್ತದೆ.
ನಾವು ಸ್ವೀಕರಿಸುವ ಮತ್ತು ಸಂಗ್ರಹಿಸುವ ಮಾಹಿತಿಯ ಪ್ರಕಾರಗಳು, ನೀವು ನಮ್ಮ ಬ್ಯುಸಿನೆಸ್ ಸರ್ವೀಸ್ಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿಸಿವೆ. ನಮ್ಮ ಬ್ಯುಸಿನೆಸ್ ಸರ್ವೀಸ್ಗಳನ್ನು ನಮಗೆ ಕೆಲವು ಮಾಹಿತಿಯ ಅಗತ್ಯವಿರುತ್ತವೆ ಮತ್ತು ಇದು ಇಲ್ಲದೆ ನಾವು ನಿಮಗೆ ನಮ್ಮ ಬ್ಯುಸಿನೆಸ್ ಸರ್ವೀಸ್ಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ನಾವು ಸಂಗ್ರಹಿಸುವ ಮಾಹಿತಿಯು ನೀವು ನೀಡುವ ಮಾಹಿತಿ, ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುವ ಮಾಹಿತಿ ಮತ್ತು ಥರ್ಡ್-ಪಾರ್ಟಿಯಿಂದ ಪಡೆದ ಮಾಹಿತಿಯನ್ನು ಒಳಗೊಂಡಿದೆ.
ನಮ್ಮ ಬ್ಯುಸಿನೆಸ್ ಸರ್ವೀಸ್ಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ನಾವು ನಮ್ಮ ಬಳಿ ಇರುವ ಮಾಹಿತಿಯನ್ನು (ನೀವು ಮಾಡುವ ಆಯ್ಕೆಗಳು ಮತ್ತು ಅನ್ವಯವಾಗುವ ಕಾನೂನಿಗೆ ಒಳಪಟ್ಟಿರುತ್ತದೆ) ಬಳಸುತ್ತೇವೆ.
ನೀವು ನಮ್ಮ ಬ್ಯುಸಿನೆಸ್ ಸರ್ವೀಸ್ಗಳನ್ನು ಬಳಸುವಾಗ ಮತ್ತು ಸಂವಹನ ಮಾಡುವಾಗ ನೀವು ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತೀರಿ ಮತ್ತು ನಾವು ನಮ್ಮ ಸರ್ವೀಸ್ಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ನಮಗೆ ಸಹಾಯ ಆಗುವಂತಹ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ.
ನಾವು ಸಂಗ್ರಹಿಸುವ ಮಾಹಿತಿ ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು
WhatsApp Business ಆ್ಯಪ್ ಗೌಪ್ಯತಾ ನೀತಿ ಓದಿ.