ಭಕ್ತಿವೇದಾಂತ ದರ್ಶನ ಪತ್ರಿಕೆ Bhaktivedanta Darshana Magazine
Channel | 105 followers
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.