WhatsApp Business ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಸಣ್ಣ ಉದ್ದಿಮೆದಾರರನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ನಿಮ್ಮ ಗ್ರಾಹಕರೊಂದಿಗೆ ವೈಯಕ್ತಿಕ ಸಂಪರ್ಕ ಸಾಧಿಸಲು, ನಿಮ್ಮ ಉತ್ಪನ್ನಗಳು, ಸೇವೆಗಳನ್ನು ಹೈಲೈಟ್ ಮಾಡಲು ಮತ್ತು ಶಾಪಿಂಗ್ ಮಾಡುವಾಗ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಈ ಆ್ಯಪ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ತೋರಿಸಲು ಒಂದು ಕ್ಯಾಟಲಾಗ್ ರಚಿಸಿ. ಮೆಸೇಜ್ಗಳನ್ನು ಸ್ವಯಂಚಾಲಿತಗೊಳಿಸಲು, ವಿಂಗಡಿಸಲು ಮತ್ತು ಅವುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ವಿಶೇಷ ಪರಿಕರಗಳನ್ನು ಬಳಸಿ.
ಮಧ್ಯಮ ಮತ್ತು ಬೃಹತ್ ಉದ್ದಿಮೆಗಳಿಗೆ ಗ್ರಾಹಕರ ಬೆಂಬಲವನ್ನು ಒದಗಿಸಲು ಮತ್ತು ಗ್ರಾಹಕರಿಗೆ ಪ್ರಮುಖ ನೋಟಿಫಿಕೇಶನ್ಗಳನ್ನು ತಲುಪಿಸಲು ಸಹ WhatsApp ಸಹಾಯ ಮಾಡುತ್ತದೆ. WhatsApp Business API ಕುರಿತು ಇನ್ನಷ್ಟು ತಿಳಿಯಿರಿ.
ನಿಮ್ಮ ವ್ಯಾವಹಾರಿಕ ಪ್ರೊಫೈಲ್ ರಚಿಸಿ. ನಿಮ್ಮ ಗ್ರಾಹಕರಿಗೆ ಸಹಾಯವಾಗುವಂತೆ, ಅದರಲ್ಲಿ ನಿಮ್ಮ ವಿಳಾಸ, ವ್ಯವಹಾರ ವಿವರಣೆ, ಇಮೇಲ್ ವಿಳಾಸ ಮತ್ತು ವೆಬ್ಸೈಟ್ನಂತಹ ಮಾಹಿತಿ ಇರುವಂತೆ ನೋಡಿಕೊಳ್ಳಿ.
‘ತ್ವರಿತ ಪ್ರತ್ಯುತ್ತರಗಳು’ ನೀವು ಆಗಾಗ್ಗೆ ಕಳುಹಿಸುವ ಮೆಸೇಜ್ಗಳನ್ನು ಉಳಿಸಲು ಮತ್ತು ಮರುಬಳಕೆ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಆಗ ನೀವು ಸಾಮಾನ್ಯ ಪ್ರಶ್ನೆಗಳಿಗೆ ಸುಲಭವಾಗಿ ಕ್ಷಣಾರ್ಧದಲ್ಲಿ ಉತ್ತರಿಸಬಹುದು.
ನಿಮ್ಮ ಕಾಂಟ್ಯಾಕ್ಟ್ಗಳು ಅಥವಾ ಚಾಟ್ಗಳನ್ನು ಲೇಬಲ್ಗಳ ಅಡಿಯಲ್ಲಿ ಕ್ರಮಬದ್ಧವಾಗಿರಿಸಿ. ಇದರಿಂದ ನಿಮಗೆ ಅವುಗಳನ್ನು ಮತ್ತೆ ಹುಡುಕುವುದು ಸುಲಭವಾಗುತ್ತದೆ.
ನಿಮಗೆ ಉತ್ತರಿಸಲು ಸಾಧ್ಯವಾಗದಿದ್ದಾಗ, ಅಲಭ್ಯತೆಯ ಮೆಸೇಜ್ ಸೆಟ್ ಮಾಡಿ. ಇದರಿಂದ ನೀವು ನಿಮ್ಮ ಗ್ರಾಹಕರಿಗೆ ಯಾವಾಗ ಪ್ರತಿಕ್ರಿಯೆ ನೀಡಬಹುದು ಎಂಬುದು ಅವರಿಗೆ ತಿಳಿಯುತ್ತದೆ. ನಿಮ್ಮ ಗ್ರಾಹಕರಿಗೆ ನಿಮ್ಮ ವ್ಯವಹಾರದ ಪರಿಚಯ ನೀಡಲು, ನೀವು ಅಭಿನಂದನೆ ಮೆಸೇಜ್ ಸಹ ರಚಿಸಬಹುದು.