
WhatsApp Business ಆ್ಯಪ್
WhatsApp Business ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಸಣ್ಣ ಉದ್ದಿಮೆದಾರರನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ನಿಮ್ಮ ಗ್ರಾಹಕರೊಂದಿಗೆ ವೈಯಕ್ತಿಕ ಸಂಪರ್ಕ ಸಾಧಿಸಲು, ನಿಮ್ಮ ಉತ್ಪನ್ನಗಳು, ಸೇವೆಗಳನ್ನು ಹೈಲೈಟ್ ಮಾಡಲು ಮತ್ತು ಶಾಪಿಂಗ್ ಮಾಡುವಾಗ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಈ ಆ್ಯಪ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ತೋರಿಸಲು ಒಂದು ಕ್ಯಾಟಲಾಗ್ ರಚಿಸಿ. ಮೆಸೇಜ್ಗಳನ್ನು ಸ್ವಯಂಚಾಲಿತಗೊಳಿಸಲು, ವಿಂಗಡಿಸಲು ಮತ್ತು ಅವುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ವಿಶೇಷ ಪರಿಕರಗಳನ್ನು ಬಳಸಿ.
ಮಧ್ಯಮ ಮತ್ತು ಬೃಹತ್ ಉದ್ದಿಮೆಗಳಿಗೆ ಗ್ರಾಹಕರ ಬೆಂಬಲವನ್ನು ಒದಗಿಸಲು ಮತ್ತು ಗ್ರಾಹಕರಿಗೆ ಪ್ರಮುಖ ನೋಟಿಫಿಕೇಶನ್ಗಳನ್ನು ತಲುಪಿಸಲು ಸಹ WhatsApp ಸಹಾಯ ಮಾಡುತ್ತದೆ. WhatsApp Business API ಕುರಿತು ಇನ್ನಷ್ಟು ತಿಳಿಯಿರಿ .