ಯಾವುದೇ ಕ್ಷಣದಲ್ಲಿಯೂ, ಯಾವುದೇ ಸ್ಥಳದಿಂದಲೂ 180 ರಾಷ್ಟ್ರಗಳಲ್ಲಿರುವ ಒಂದು ಬಿಲಿಯನ್ ಜನಸಂಖ್ಯೆಗಿಂತಲೂ ಹೆಚ್ಚು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು WhatsApp1 ಬಳಸುತ್ತಾರೆ. WhatsApp ಉಚಿತ2 ಮತ್ತು ಸರಳ, ಸುರಕ್ಷಿತ, ಮತ್ತು ನಂಬಲಾರ್ಹ ಮೆಸೇಜಿಂಗ್ ಮತ್ತು ಕಾಲಿಂಗ್ ಸೇವೆಗಳನ್ನು ಒದಗಿಸುತ್ತದೆ. ಇದು ಜಗತ್ತಿನಾದ್ಯಂತ ಎಲ್ಲಾ ಫೋನ್ಗಳಲ್ಲಿ ಲಭ್ಯವಿದೆ.
1 ಮತ್ತೆ ಹೌದು, WhatsApp ಈ ಹೆಸರು What's Up ನ ಮೇಲಿನ ಹೊಂದಿಕೆಯ ಶ್ಲೇಷವಾಗಿದೆ.
2 ಡೇಟಾ ಶುಲ್ಕಗಳು ಅನ್ವಯಿಸಬಹುದು.
SMSನ ಪರ್ಯಾಯವಾಗಿ WhatsApp ಪ್ರಾರಂಭಗೊಂಡಿತು. ನಮ್ಮ ಪ್ರಾಡಕ್ಟ್ ಈಗ ವೈವಿಧ್ಯಮಯ ಮೀಡಿಯಗಳಾದ, ಫೋಟೋಗಳು, ವೀಡಿಯೊಗಳು, ದಾಖಲೆಗಳು, ಸ್ಥಳ, ಹಾಗೂ ವಾಯ್ಸ್ ಕಾಲ್ಗಳನ್ನು ಕಳುಹಿಸುವುದನ್ನು ಮತ್ತು ಸ್ವೀಕರಿಸುವುದನ್ನು ಬೆಂಬಲಿಸುತ್ತದೆ. ನಿಮ್ಮ ಕೆಲವು ಅತ್ಯಂತ ವೈಯಕ್ತಿಕ ಕ್ಷಣಗಳನ್ನು WhatsApp ಮೂಲಕ ನೀವು ಹಂಚಿಕೊಳ್ಳುತ್ತೀರಿ. ಇದೇ ಕಾರಣಕ್ಕೆ ನಾವು ನಮ್ಮ ಆ್ಯಪ್ನಲ್ಲಿ ಕೊನೆಯಿಂದ-ಕೊನೆಯವರೆಗೆ ಎನ್ಕ್ರಿಪ್ಷನ್ ಅನ್ನು ರೂಪಿಸಿದ್ದೇವೆ. ನಮ್ಮ ಪ್ರತಿಯೊಂದು ಉತ್ಪನ್ನದ ನಿರ್ಧಾರಗಳಲ್ಲಿ ಜಗತ್ತಿನ ಎಲ್ಲೆಡೆ ಜನ ಯಾವುದೇ ಅಡೆತಡೆಗಳಿಲ್ಲದೇ ಸಂವಹಿಸಬೇಕೆಂಬುವುದೇ ನಮ್ಮ ಆಕಾಂಕ್ಷೆ.
ಮುಂಚೆ 20 ವರುಷಗಳ ಕಾಲ ಕೂಡಿ Yahoo ನಲ್ಲಿ ಕಳೆದಿದ್ದ ಜಾನ ಕೊಮ್ ಮತ್ತು ಬ್ರಿಯಾನ್ ಆಕ್ಟನ್ ಅವರಿಂದ WhatsApp ವು ಸಂಸ್ಥಾಪಿಸಲ್ಪಟ್ಟಿತು. WhatsApp ತಂತ್ರಾಂಶವು 2014 ರಲ್ಲಿ Facebook ಅನ್ನು ಸೇರಿತು, ಆದರೆ ಲೇಸರ್ ಫೋಕಸ್ ಮೇಲೆ ಸಂದೇಶ ಸೇವೆಯನ್ನು ಅದೂ ಕೂಡ ವೇಗವಾಗಿ ಮತ್ತು ಜಗತ್ತಿನ ಯಾವುದೇ ಭಾಗದಿಂದ ಬೇರೆಯಾಗಿಯೇ ಕಾರ್ಯ ನಿರ್ವಹಿಸುವಂತೆ ಮುಂದುವರೆಯಿತು.