ಸರಳ, ಸುರಕ್ಷಿತ.
ಭರವಸೆಯ ಸಂದೇಶಕ.

WhatsApp ನೊಂದಿಗೆ ನೀವು ಉಚಿತವಾಗಿ ಶೀಘ್ರ, ಸರಳ, ಸುರಕ್ಷಿತ ಸಂದೇಶಗಳನ್ನು ಕಳುಹಿಸಬಹುದು ಮತ್ತು ಕರೆಗಳನ್ನು ಮಾಡಬಹುದು*, ಜಗತ್ತಿನಾದ್ಯಂತ ಎಲ್ಲ ಫೋನ್ ಗಳಿಗೂ ಲಭ್ಯ.
ಈಗ ಡೌನ್ಲೋಡ್ ಮಾಡಿ
*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಸೇವೆ ಒದಗಿಸುವವರನ್ನು ಸಂಪರ್ಕಿಸಿ.

WhatsApp ಧ್ವನಿ ಮತ್ತು ದೃಶ್ಯ ಕರೆಗಳು

ಮುಕ್ತವಾಗಿ ಮಾತನಾಡಿ

ಧ್ವನಿ ಕರೆಗಳೊಂದಿಗೆ ನೀವು ನಿಮ್ಮ ಗೆಳೆಯರು ಮತ್ತು ಕುಟುಂಬದವರೊಂದಿಗೆ, ಒಂದು ವೇಳೆ ಅವರು ಇನ್ಯಾವುದೋ ರಾಷ್ಟ್ರದಲ್ಲಿದ್ದರೂ ಕೂಡ ಉಚಿತವಾಗಿ* ಮಾತನಾಡಬಹುದು. ಮತ್ತು ಯಾವಾಗ ಧ್ವನಿ ಮತ್ತು ಪದ ಸಂಭಾಷಣೆಗಳು ಸಾಕಾಗುವುದಿಲ್ಲವೋ ನೀವು ಉಚಿತವಾಗಿ* ದೃಶ್ಯ ಕರೆಗಳೊಂದಿಗೆ, ಮುಖಾ-ಮುಖಿಯಾಗಿ ಸಂಭಾಷಣೆಗಳನ್ನು ಮಾಡಬಹುದು. WhatsApp ಧ್ವನಿ ಮತ್ತು ದೃಶ್ಯ ಕರೆಗಳು ನಿಮ್ಮ ಫೋನಿನ ಧ್ವನಿ ನಿಮಿಷಗಳ ಯೋಜನೆಯ ಬದಲಾಗಿ ನಿಮ್ಮ ಫೋನಿನ ಅಂತರ್ಜಾಲದ ಸಂಪರ್ಕವನ್ನು ಬಳಸಿಕೊಳ್ಳುತ್ತವೆ, ಅದಕ್ಕೆ ನೀವು ದುಬಾರಿ ಕರೆಗಳ ಶುಲ್ಕಗಳಿಗೆ ಚಿಂತಿಸಬೇಕಾಗಿಲ್ಲ.

ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್

ಪೂರ್ವನಿಯೋಜಿತ ಭದ್ರತೆ

ನಿಮ್ಮ ಕೆಲವು ಅತೀ ವೈಯಕ್ತಿಕ ಕ್ಷಣಗಳನ್ನು WhatsApp ನಲ್ಲಿ ಹಂಚಿರಬಹುದು, ಇದೇ ಕಾರಣಕ್ಕೆ ನಾವು ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್ ಆಗುವ ರೀತಿಯಲ್ಲಿ ನಮ್ಮ ಇತ್ತೀಚಿನ ತಂತ್ರಾಂಶದ ಆವೃತ್ತಿಗಳನ್ನು ರಚಿಸಿದ್ದೇವೆ. ಯಾವಾಗ ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಟ್ ಆಗಿರುತ್ತದೋ. ಅಲ್ಲಿ ನಿಮ್ಮ ಸಂದೇಶಗಳು ಮತ್ತು ಕರೆಗಳು ಭದ್ರತೆಯಿಂದಿರುತ್ತವೆ ಆದ್ದರಿಂದ ಕೇವಲ ನೀವು ಮತ್ತು ಸಂವಹನ ಮಾಡುತ್ತಿರುವ ವ್ಯಕ್ತಿಯೊಂದಿಗೆ ಮಾತ್ರ ಓದಲು ಮತ್ತು ಕೇಳಲು ಸಾಧ್ಯ, ಮತ್ತು ಮಧ್ಯದಲ್ಲಿ WhatsApp ಕೂಡ ಸೇರಿ ಬೇರೆ ಯಾರಿಂದಲೂ ಓದಲು, ಕೇಳಲು ಸಾಧ್ಯವಿಲ್ಲ.
ವೈಶಿಷ್ಟ್ಯಗಳನ್ನು ಅನ್ವೇಷಿಸಿ